ಬಸ್ ಪ್ರಯಾಣದರ ಇಳಿಕೆಗೆ ಅಧಿಕಾರಿಗಳ ವಿರೋಧ

ಬೆಂಗಳೂರು, ನ.5 : ಡೀಸೆಲ್ ದರ ಇಳಿಕೆಯಾಗಿದೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಪ್ರಯಾಣದರವೂ ಇಳಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಿದ್ದ ಜನರಿಗೆ ನಿರಾಸೆಯಾಗುವ ಸಾಧ್ಯತೆ ಇದೆ. ಬಸ್‌ ಪ್ರಯಾಣ ದರವನ್ನು ಮುಂದಿನ ಮಾರ್ಚ್‌ವರೆಗೂ ಕಡಿಮೆ ಮಾಡುವುದು ಬೇಡ ಎಂದು ಅಧಿಕಾರಿಗಳು ಸಚಿವರಿಗೆ ಶಿಫಾರಸು ಮಾಡಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಬಸ್ ಪ್ರಯಾಣ ದರ ಇಳಿಕೆ ಮಾಡುವ ಕುರಿತು ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ಮಾರ್ಚ್‌ ತನಕ ದರ ಇಳಿಕೆ ಮಾಡುವುದು ಬೇಡ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಸಾರಿಗೆ ಸಚಿವರಿಗೆ ವಹಿಸಿದ್ದಾರೆ. [ಬಸ್ ಪ್ರಯಾಣದರ ಇಳಿಕೆ]

KSRTC

ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಆದ್ದರಿಂದ ಪ್ರಯಾಣದ ದರವನ್ನು ಕಡಿಮೆ ಮಾಡಿದರೆ ನಷ್ಟ ಹೆಚ್ಚಾಗಲಿದೆ. ಸದ್ಯ ದರ ಇಳಿಕೆ ಮಾಡುವುದು ಬೇಡ ಎಂದು ಅಧಿಕಾರಿಗಳು ಸಚಿವರಿಗೆ ಶಿಫಾರಸು ಮಾಡಿದ್ದಾರೆ. ಬುಧವಾರ ಮತ್ತೊಮ್ಮೆ ಸಭೆ ಕರೆದಿದ್ದು, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. [ಬೆಂಗಳೂರಿಗರು ಪೆಟ್ರೋಲ್ ಗೆ 70 ರೂ. ಕೊಟ್ರೆ ಸಾಕು]

ಕೆಎಸ್‌ಆರ್‌ಟಿಸಿ ಈಗಾಗಲೇ 148 ಕೋಟಿ ರೂ. ನಷ್ಟದಲ್ಲಿದೆ. ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಲಾಭದಲ್ಲಿಲ್ಲ. ಆದ್ದರಿಂದ ಕನಿಷ್ಠ ಮಾರ್ಚ್‌ ತನಕ ದರ ಪರಿಷ್ಕರಣೆ ಮಾಡುವುದು ಬೇಡ ಎಂದು ಅಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದ್ದಾರೆ.

ಡೀಸೆಲ್‌ ದರ ಹೆಚ್ಚಾದಾಗ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಡೀಸೆಲ್‌ ದರ ಕಡಿಮೆಯಾಗಿರುವುದರಿಂದ ಕನಿಷ್ಠ ಬಿಎಂಟಿಸಿ ಪ್ರಯಾಣ ದರ ಇಳಿಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ಬುಧವಾರ ಸಚಿವರು ನಡೆಸುವ ಸಭೆ ಕುತೂಹಲ ಮೂಡಿಸಿದ್ದು, ದರ ಇಳಿಕೆಯಾಗಲಿದೆಯೇ? ಕಾದು ನೋಡಬೇಕು.

ಡೀಸೆಲ್‌ ದರದಲ್ಲಿ ಇಳಿಕೆಯಾದ ಕಾರಣ ಬಸ್ ಪ್ರಯಾಣದರವನ್ನು ಕಡಿಮೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದರು. ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಸಹ ದರ ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+