ಬಿಎಸ್ವೈ ಅವ್ರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನಗರು ಮುತ್ತೈದೆಯರು: ಸಿಎಂ ಇಬ್ರಾಹಿಂ

ಬೆಂಗಳೂರು, ಜ 17: ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ತಮ್ಮ ಎಂದಿನ ಸ್ಟೈಲಿನಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ಕಿಚಾಯಿಸಿದ್ದಾರೆ.

ಆಪರೇಷನ್ ಕಮಲ ನಡೆಸಲಿಲ್ಲ, ನಾವು ಯಾವ ಆಪರೇಷನ್ ಮಾಡಲು ಹೋಗಿರಲಿಲ್ಲ ಎಂದು ಯಡಿಯೂರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಇಬ್ರಾಹಿಂ, ಯಡಿಯೂರಪ್ಪನವರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನವರು ಮುತ್ತೈದೆಯರು ಎಂದು ಲೇವಡಿ ಮಾಡಿದ್ದಾರೆ.

ಮದುವೆಯಾದ ಹುಡುಗಿಯನ್ನು ನಾವು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ, ನಮ್ಮ ಶಾಸಕರ ಬಳಿ ಬಂದು ನೀನು ಬರ್ತೀಯಾ ಎಂದು ಕೇಳುವುದು, ಯಡಿಯೂರಪ್ಪನವರಿಗೆ ಈ ವಯಸ್ಸಿನಲ್ಲಿ ಇನ್ನೆಷ್ಟು ದಿನ ಬಸ್ ಸ್ಟ್ಯಾಂಡ್ ಲವ್ ಎಂದು ಇಬ್ರಾಹಿಂ ಟೀಕಿಸಿದ್ದಾರೆ.

Operation Kamala: Congress leader CM Ibrahim statement on BJP and Yeddyurappa

ನೀವೇ ಏನೇ ಇದ್ದರೂ ಬಸುರಿಯರನ್ನು ಕರೆದುಕೊಂಡು ಹೋಗಬಹುದೇ ಹೊರತು, ಮುತ್ತೈದೆ ಮತ್ತು ಪತಿವ್ರತೆಯರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು, ಇಬ್ರಾಹಿಂ ತಮ್ಮ ಪಕ್ಷದ ಶಾಸಕರನ್ನು ಮುತ್ತೈದರಿಗೆ ಹೋಲಿಸಿದ್ದಾರೆ.

ನಾನು ತಮಾಷೆಯಾಗಿ ಇದನ್ನು ಹೇಳಿದ್ದರೂ, ರಾಜ್ಯದ ಜನತೆ ಆಪರೇಷನ್ ಕಮಲ ವಿದ್ಯಮಾನವನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಜನರಿಗೆ ಅನುಕಂಪ ಶುರುವಾಗಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಪಂಚ ರಾಜ್ಯಗಳ ಸೋತ ಮೇಲೆ, ಎಲ್ಲೋ ಕಳೆದುಕೊಂಡಿದ್ದನ್ನು ಕರ್ನಾಟಕದಲ್ಲಿ ಹುಡುಕುತ್ತೇನೆ ಎಂದರೆ ಆಗುವುದಿಲ್ಲ. ಬಳ್ಳಾರಿಯಲ್ಲಿ ಯದ್ವಾತದ್ವ ಸೋತಿದ್ದರೂ ಬಿಜೆಪಿಯವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+