ಆಪರೇಷನ್ ಕಮಲ; ಕಾಂಗ್ರೆಸ್‌ನ 9 ಶಾಸಕರಿಗೆ 100 ಕೋಟಿ ಆಫರ್‌: ಸ್ಪೋಟಕ ಮಾಹಿತಿ ಬಹಿರಂಗ

ಹುಬ್ಬಳ್ಳಿ, ಸೆಪ್ಟೆಂಬರ್‌ 04: ಭಾರತೀಯ ಜನತಾ ಪಕ್ಷದವರು ಉತ್ತರ ಕರ್ನಾಟಕ ಭಾಗದ ಒಂಭತ್ತು ಕಾಂಗ್ರೆಸ್ ಶಾಸಕರಿಗೆ ಭಾರತೀಯ ಜನತಾ ಪಕ್ಷದವರು ಹಣದ ಆಮಿಷ ತೋರಿಸಿ ಆಪರೇಷನ್ ಕಮಲದ ಗಾಳ ಹಾಕಿದರು ಎಂದು ಸಣ್ಣ ನೀರಾವರಿ ಬೋಸರಾಜು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಪರೇಷನ್ ಕಮಲ ಬಗ್ಗೆ ಬಗ್ಗೆ ಮಾಹಿತಿ ಸಿಕ್ಕಿತ್ತು. ನಾವು ಫುಲ್ ಎಚ್ಚೇತ್ತುಕೊಂಡಿದ್ದೇವೆ, ನಮ್ಮ ಶಾಸಕರಿಗೆ ನೂರು ಕೋಟಿ, 50 ಕೋಟಿ ಇರಬಹುದು ಒಟ್ಟಾರೆ ಆಫರ್ ಮಾತ್ರ ಮಾಡಿದ್ದಾರೆ ಹಣ ಇಷ್ಟೇ ಅಂತಾ ಹೇಳಲ್ಲ. ಅದು ನೂರು ಕೋಟಿ ಐವತ್ತು ಕೋಟಿ ಇರಬಹುದು. ಇದು ನಮ್ಮ ಭಾಗದ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಆಫರ್ ಮಾಡಿದರು ಎಂದು ಸ್ಪೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

Operation Kamal Is Trying To Lure 9 Congress MLAs With Money Says Bosaraju

ಮುಡಾ ಹಗರಣದಲ್ಲಿ ಸಿಎಂ ಬದಲಾವಣೆಗೆ ಷಡ್ಯಂತ್ರ ನಡೆದಿದೆ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೋ ಸಿಎಂ ಸಿದ್ಧರಾಮಯ್ಯಾ ಅವರನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದ ಅವರು, ಶಾಸಕಾಂಗ ಪಕ್ಷ ,ಇಡೀ ಸಚಿವ ಸಂಪುಟ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ಇದ್ದೇವೆ. ಸಿದ್ಧರಾಮಯ್ಯಾ ನವರ ಬೆನ್ನು ಹಿಂದೆ ಇದ್ದುಹೈಕಮಾಂಡ್ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆಗೆ ಇರಲು ಈ ಪಿತೂರಿಯನ್ನ ವ್ಯವಸ್ಥಿತವಾಗಿ ಎದುರಿಸಲು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದನ್ನ ಎದುರಿಸಬೇಕು ಅಂತಾ ಹೇಳಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದವರು ರಾಜಭವನವನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಕುತಂತ್ರ ಮಾಡಲಾಗುತ್ತದೆ, ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು ಸಿಎಂ ಬದಲಾವಣೆ ಯಾವುದೇ ಕಾರಣಕ್ಕೋ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಯಾವುದೇ ತಪ್ಪು ಸಿದ್ಧರಾಮಯ್ಯನವರದು ಇಲ್ಲ. ಸೈಟ್ ಸಲುವಾಗಿ ಅವರು ಅರ್ಜಿ ಕೊಟ್ಟಿಲ್ಲ, ಶಿಪಾರಸ್ಸು ಸಹ ಮಾಡಿಲ್ಲ. ಮುಡಾ ಸೈಟ್ ಹಗರಣ ಯಾವಾಗ ಆಗಿದೆ, ಆವಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. ಇದೇ ಬಸವರಾಜ ಬೊಮ್ಮಾಯಿ ಅಧಿಕಾರರಲ್ಲಿ ಇದ್ದರು, ಏನು ಮಾಡಿದರು ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ನಲ್ಲಿ ಹಿರಿಯ ಶಾಸಕರು ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ವಿಚಾರ ಇಲ್ಲ. ಇದು ಕೇವಲ ಊಹಾಪೋಹ ಅಷ್ಟೇ. ಒಬ್ಬರು ಬಹಿರಂಗ ಹೇಳಬಹುದು ಇನ್ನೊಬ್ಬರು ಹೇಳದೇ ಇರಬಹುದು. ನಾನು ಸಹ ಆಕಾಂಕ್ಷೆ ಅಲ್ಲ. ಸಿದ್ಧರಾಮಯ್ಯ ನವರನ್ನ ಟಾರ್ಗೆಟ್ ಮಾಡಿದರೆ ಕಾಂಗ್ರೆಸ್ ಪಕ್ಷ ಹೋಗುತ್ತದೆ ಎಂಬ ವಿಚಾರ ಇದೆ ಅದಕ್ಕೆ ಸಿದ್ಧರಾಮಯ್ಯ ನವರನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಇದು ಬಿಜೆಪಿಯವರಿಂದ ಆಗುತ್ತಿರಲಿಲ್ಲ, ಇದರಲ್ಲಿ ಜೆಡಿಎಸ್ ನವರ ಕೈವಾಡವೇ ಕಾರಣ. ದೇವೇಗೌಡರು ಜಾತ್ಯಾತೀತ ಬಗ್ಗೆ ಮಾತಾಡುತ್ತಾ ಇದ್ದರು, ಅದಕ್ಕೆ ಅವರ ಜೊತೆಗೆ ನಾನು ಇದ್ದೇ ಈಗ ಅವರು ಬದಲಾಗಿದ್ದಾರೆ.

ಜೆಡಿಎಸ್ನವರೇ ಕುತಂತ್ರದಿಂದ ಸರ್ಕಾರಕ್ಕೆ ತೊಂದರೆ ಆಗಿದೆ ಇದು ಸ್ಪಷ್ಟವಾದ ವಿಚಾರ. ದೇವೇಗೌಡರು,‌ಕುಮಾಸ್ವಾಮಿ ಅವರು ಅಮಿತಾ ಶಾ ಜೊತೆಗೆ ಕೂಡಿ ಸಿದ್ಧರಾಮಯ್ಯ ಸರ್ಕಾರ ತೆಗೆದು ಹಾಕುವ ಮಾತು ಕೊಟ್ಡಿದ್ದರು. ಆದ್ದರಿಂದಲೇ ಈಗ ಜೆಡಿಎಸ್ ನವರು ಕಾಂಗ್ರೆಸ್ ಸರಕಾರ ಅಲುಗಾಡಿಸತ್ತಾ ಇದ್ದಾರೆ. ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಲು ಎಲ್ಲ ಬಗೆಯ ಪ್ರಯತ್ನ ಬಿಜೆಪಿ ಜೆಡಿಎಸ್ ನಿಂದ ಆಗಿದೆ. ಅವರು ಎಲ್ಲ ಕಡೆ ಸಂಪರ್ಕ ಮಾಡಿದ್ದಾರೆ, ಆಪರೇಷನ್ ಕಮಲಕ್ಕೆ ಎಲ್ಲಿಲ್ಲದ ಪ್ರಯತ್ನ ಅಗಿದೆ. ಆದರೆ ಅವರ ಉದ್ದೇಶ ಗೊತ್ತಾಗಿದೆ. ಜೆಡಿಎಸ್ ನವರು ಮಾಡಿದ ಹುನ್ನಾರದಿಂದ ಬಿಜೆಪಿ ಯವರು ಅನುಭವಿಸುತ್ತಿದ್ದಾರೆ ಇದರಿಂದಾಗಿ ಬಿಜೆಪಿಯಲ್ಲಿ ನಾಲ್ಕು ನಾಲ್ಕು ಗುಂಪು ಆಗಿವೆ ಎಂದರು.

ಇನ್ನು ಕೋವೀಡ್ ನಲ್ಲಿ ಆದ ಭ್ರಷ್ಟಾಚಾರ ಈಗ ತೆಗೆಯುತ್ತಿಲ್ಲ. ನಾವು ಮೊದಲೇ ಹೇಳಿದ್ದು, ಈಗ ಏನಾಗಿದೆ ಗೊತ್ತಲ್ಲ. ಇದರಲ್ಲಿ ನಾವು ಭ್ರಷ್ಟಾಚಾರ ಆಗಿದೆ ಅಂತಾ ಹೇಳಿಕೆ ಸಹ ಕೊಟ್ಟಿದ್ದೇವೆ, ಈಗ ಒಂದು ಸಮಿತಿ ಮಾಡಲಾಗಿದೆ. ಅದು ವರದಿ ಕೊಡುತ್ತದೆ, ಅದರೆ ಆಧಾರದ ಮೇಲೆ ಕ್ರಮ ಆಗುತ್ತದೆ. ಭೋವಿ ನಿಗಮದ ಏನಾಯಿತು ಗೊತ್ತಲ್ಲ, ನಿಗಮದ ಅಧ್ಯಕ್ಷರು, ಎಂಡಿ ಜೈಲ್ ನಲ್ಲಿ ಇದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+