ಮುಂದುವರೆದ ಆಪರೇಷನ್ ಹಸ್ತ; ಬೆಂಗಳೂರಿನ ಘಟಾನುಘಟಿ ನಾಯಕರಿಗೆ ಗಾಳ! ಕೈ ಸೇರ್ಪಡೆ ಯಾವಾಗ?
ಬೆಂಗಳೂರು, ಸೆಪ್ಟೆಂಬರ್ 12: 2024 ರ ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯ ಕಾಂಗ್ರೆಸ್ ಗೆ ಲೋಕಸಮರಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಸದ್ದಿಲ್ಲದೇ ಬೆಂಗಳೂರು ಭಾಗದ ಬಿಜೆಪಿ ನಾಯಕರಿಗೆ ಗಾಳ ಹಾಕಿದೆ.
ಹೌದು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ಅವರೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ರು, ಅಲ್ಲದೇ ಲೋಕಸಭಾ ಚುನಾವಣೆಯ ಬಳಿಕ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜ್ ಬೆಂಬಲಿಗರನ್ನು ಕಾಂಗ್ರೆಸ್ಗೆ ಸೆಳೆದಿದ್ದು, ಇದೀಗ ಆರ್ ಅಶೋಕ್ ಬೆಂಬಲಿಗರಿಗೆ ಗಾಳ ಹಾಕಿದೆ.

ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆರ್.ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಅವರು ಮೇಜರ್ ಸರ್ಜರಿಗೆ ಕೈ ಹಾಕಿದ್ದಾರೆ. ಮುಂಬರುವ ಲೋಕಸಭಾಯಲ್ಲಿ ಬೆಂಗಳೂರು ಭಾಗದಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಪದ್ಮನಾಭ ನಗರದ ಬಹುತೇಕ ನಾಯಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು 5 ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್ಗಳು ಕಾಂಗ್ರೆಸ್ ಸೇರ್ಪಡೆಗೆ ಸಹ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಕಮಲ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಆರ್ ಅಶೋಕ್ ಗೆಲುವಿಗೆ ಕಾರಣವಾದ ನಾಯಕರು ಇದೀಗ ಕಾಂಗ್ರೆಸ್ ಸೇರ್ಪಡೆಗೆ ರೆಡಿಯಾಗಿದ್ದು, ಸೆಪ್ಟೆಂಬರ್ 15ರಂದು ಶುಕ್ರವಾರ ಬೆಳಿಗ್ಗೆ 9 ಕ್ಕೆ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು,ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಯಾರೆಲ್ಲಾ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ?
ಎಲ್. ಶ್ರೀನಿವಾಸ್: ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು
ಆಂಜಿನಪ್ಪ: ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಪದ್ಮನಾಭ ನಗರ ಮುಖಂಡರು
ಶೋಭ ಆಂಜಿನಪ್ಪ: ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್
ಹೆಚ್. ನಾರಾಯಣ್: ಮಾಜಿ ಬಿಬಿಎಂಪಿ ಸದಸ್ಯರು ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ
ವೆಂಕಟಸ್ವಾಮಿ ನಾಯ್ಡು: ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್
ಹೆಚ್. ಸುರೇಶ್: ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್
ಶ್ರೀಮತಿ. ಲಕ್ಷ್ಮಿ ಸುರೇಶ್: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ
ರಂಗರಾಮೇಗೌಡ್ರು (ಬಿ.ಆರ್. ರಾಮು): ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ
ಪ್ರಸಾದ್ ಬಾಬು ಅಲಿಯಾಸ್ ಕಬಡ್ಡಿ ಬಾಬು: ಜಿಡಿಎಸ್ ಮುಖಂಡ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು,
ಪವನ್-ಬಿಜೆಪಿ ಮುಖಂಡ
ಸುಪ್ರಿಯ ಶೇಖರ್: ಚಿಕ್ಕಕಲ್ಲಸಂದ್ರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರು.
ಲಕ್ಷ್ಮಿ ಸುರೇಶ್: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್












Click it and Unblock the Notifications