ಎಂ.ಬಿ. ಪಾಟೀಲ್ ಹೇಳಿಕೆಯ ಸತ್ಯಾಸತ್ಯತೆ ಅನುಮಾನಿಸಿದ ಓದುಗರು

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 11: 'ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬೆಂಬಲ ನೀಡಿದ್ದಾರೆ,' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಭಾನುವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಓದುಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಗಂಗಾ ಶ್ರೀಗಳು ಬೆಂಬಲ : ಎಂಬಿ ಪಾಟೀಲ್

"ಕೆಲವು ಓದುಗರು ಈ ಹೇಳಿಕೆ ಸುಳ್ಳು; ರಾಜಕೀಯ ಕಾರಣಕ್ಕೆ ಸ್ವಾಮೀಜಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಎಂ.ಬಿ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ಎಂ.ಬಿ ಪಾಟೀಲರ ಹೇಳಿಕೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ.

ಎಂ.ಬಿ ಪಾಟೀಲರ ಮಾತು ನಂಬಬೇಡಿ

ಶ್ರೀ ಮಠದಲ್ಲಿ ವೀರಶೈವ-ಲಿಂಗಾಯತ ಹೋಗ್ಲಿ ಯಾವುದೇ ಜಾತಿ ಧರ್ಮದ ಭೇದವಿಲ್ಲ. ಓಟಿಗಾಗಿ ಈ ರೀತಿಯ ರಾಜಕೀಯ ಮಾಡುವ ರಾಜಕಾರಣಿ ಎಂ.ಬಿ ಪಾಟೀಲರ ಮಾತು ನಂಬಬೇಡಿ ಎಂದು ಮನು ಕೊಟ್ರೇಶ್ ಎನ್ನುವವರು ಕಮೆಂಟ್ ಮಾಡಿದ್ದಾರೆ.

ಭ್ರಷ್ಟ ರಾಜಕೀಯ ಶಿವಕುಮಾರ ಸ್ವಾಮೀಜಿಗಳನ್ನೂ ಬಿಟ್ಟಿಲ್ವಾ?

ನಿಮ್ಮ ಭ್ರಷ್ಟ ರಾಜಕೀಯ ಸಾವಿರಾರು ಬಡಮಕ್ಕಳಿಗೆ ಜಾತಿಭೇದ ಇಲ್ಲದೆ ಅನ್ನದಾನ, ವಿದ್ಯಾದಾನ ಮಾಡ್ತಿರೋ, ಶ್ರೀ ಶಿವಕುಮಾರ ಸ್ವಾಮಿಗಳನ್ನೂ ಬಿಟ್ಟಿಲ್ವಾ? ನಿಮ್ಮ ಮತ ಬ್ಯಾಂಕ್ ಗಾಗಿ ಅವರ ಹೆಸರನ್ನು ಬಳಸಿಕೊಂಡು, ಅವರಿಗೆ ಕೆಟ್ಟ ಹೆಸರು ಬರೋಹಾಗೆ ಮಾಡ್ತಿದ್ದೀರಿ ಎಂದು ಹರೀಶ್ ಡಿ ಗೌಡ ಎನ್ನುವವರು ಎಚ್ಚರಿಸಿದ್ದಾರೆ.

ಕಿರಿಯ ಶ್ರೀಗಳ ಒಪ್ಪಿಗೆ ಪಡೆದಿದ್ದೀರೋ?

ಎಂ.ಬಿ. ಪಾಟೀಲರು ಹೇಳಿಕೆ ನೀಡಿರುವುದು ನಿಜಕ್ಕೂ ಏನಂತ ಅರ್ಥವಾಗುತ್ತಿಲ್ಲ. ಸಿದ್ದಗಂಗಾ ಶ್ರೀಗಳು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಿದ್ದಾರೆ. ವೀರಶೈವ ಇತ್ತೀಚಿಗೆ ಬಂದಿದ್ದು. ಹಾಗಾಗಿ ಲಿಂಗಾಯತವೇ ಸೂಕ್ತ ಎಂದು ಹೇಳಿದ್ದಾರೆ ಎಂದು ತಿಳಿಸಿದಿರಿ. ಮಠದಿಂದ ಅಧಿಕೃತ ಹೇಳಿಕೆ ನೀಡಬೇಕೆಂದರೇ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ತಿಳಿಸಿದ್ದಿರಾ? ಅವರಿಲ್ಲದೇ ನಿಮ್ಮ ಸ್ವಾರ್ಥಕ್ಕೆ ಹೇಳಿಕೆ ನೀಡುವುದು ತಪ್ಪಲ್ಲವಾ? ಎಂಬುದಾಗಿ ಶರತ್ ಕುಮಾರ್ ಪ್ರಶ್ನಿಸಿದ್ದಾರೆ.

ಪಾಟೀಲರ ಮಾತು ನಂಬುವುದು ಕಷ್ಟ

ನಿಜವಾದ ಜ್ಯಾತ್ಯಾತೀತ ಗುರುಗಳೆಂದರೆ ಸಿದ್ದಗಂಗಾ ಶ್ರೀಗಳು. ಅಂಥದರಲ್ಲಿ ಗುರುಗಳು ಹೇಳದ್ದಾರೆಂದು ಪಾಟೀಲರು ಹೇಳುವುದನ್ನಯ ನಂಬುವುದು ಕಷ್ಟ ಎಂದು ತಮ್ಮ ಅಭಿಪ್ರಾಯವನ್ನು ಓದುಗರಾದ ವಾದಿರಾಜ್ ಕುಲಕರ್ಣಿಯವರು ದಾಖಲಿಸಿದ್ದಾರೆ.

ಇದು ಅಪ್ಪಟ ಸುಳ್ಳು

ಇದು ಅಪ್ಪಟ ಸುಳ್ಳು

ಇದು ಅಪ್ಪಟ ಸುಳ್ಳು. ಯಾಕಂದ್ರೆ ಸ್ವಾಮೀಜಿಯವರಿಗೆ ಈಗ ಮೊದಲ ತರ ನೆನಪಿನ ಶಕ್ತಿ ಇಲ್ಲ. ಯಾರೇ ಬಂದರೂ, 'ಆಯಿತು
ಊಟ ಮಾಡಿ; ಸರಿ' ಅಂತ ಹೇಳ್ತಾರೆ. ಅವರು ಹೇಳಿದ್ದಕ್ಕೆ ಸಾಕ್ಷಿ ಒದಗಿಸಲಿ. ಸುಳ್ಳು ಅಪಪ್ರಚಾರ ಮಾಡಿ ಬೇಳೆ ಬೇಯಿಸಕೊಳ್ತಾರೆ ಎಂದು ಎಂಬಿ ಪಾಟೀಲ್ ವಿರುದ್ಧ 'ಒನ್ಇಂಡಿಯಾ ಕನ್ನಡ' ಓದುಗರಾದ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some readers outraged against MB Patil and alleged that he is misusing Sivagakumar Swamiji of Siddaganga Mutt's name for political reasons. Water Resources Minister MB Patil said on Sunday that, Sivagakumar Swamiji has supported the Lingayat Independence religion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ