ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗೆ ಮರಳು ಸಾಗಿಸುವಂತಿಲ್ಲ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 10 : 'ಮುಂಗಾರು ಮಳೆ ಆರಂಭವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ನಿಷೇಧ ಜಾರಿಯಲ್ಲಿರುವ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವಂತಿಲ್ಲ' ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.16 ರಿಂದ ಆ .15ರ ವರೆಗೆ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಕಾಮಗಾರಿಗಳಿಗೆ ತೊಂದರೆಯಾಗದಂತೆ ಮರಳು ಸಂಗ್ರಹಿಸಿ ಜಿಲ್ಲೆಯಲ್ಲಿ ಮಾತ್ರ ಸಾಗಾಟ ಮಾಡಲು ಅವಕಾಶ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. [ದಕ್ಷಿಣ ಕನ್ನಡ : ಮರಳುಗಾರಿಕೆ ನಿಷೇಧ]

ibrahim

ಸಂಗ್ರಹಿಸಿರುವ ಮರಳನ್ನು ಜೂನ್ 16 ರಿಂದ 21ರವರೆಗೆ ಮಾತ್ರ ಸಾಗಾಟ ಮಾಡಬಹುದು. ಆದರೆ, ನಿಷೇಧದ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡಲು ಅವಕಾಶವಿಲ್ಲ. ಈ ಅವಧಿಯಲ್ಲಿ ಅನಧಿಕೃತ ಮರಳುಗಾರಿಕೆ, ಸಾಗಾಟ ತಡೆಯಲು ಪ್ರತಿ ತಾಲೂಕುಗಳಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. [ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]

ಸಿಸಿ ಕ್ಯಾಮೆರಾ ಅಳವಡಿಕೆ : ಅನಧಿಕೃತ ಮರಳು ಸಾಗಾಟ ತಡೆಗಟ್ಟಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದನ್ನು ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿಯೇ ಗಮನಿಸಲಾಗುತ್ತದೆ. ಈಗಾಗಲೇ ಅಕ್ರಮವಾಗಿ ಮರಳ ಸಾಗಣೆ ಮಾಡುತ್ತಿದ್ದ 77 ವಾಹನಗಳ ಪರವಾನಿಗೆ ತಾತ್ಕಾಲಿಕವಾಗಿ ರದ್ದುಪಡಿಸಲು ಇಲಾಖೆಗೆ ಪತ್ರ ಬರೆದು, ಪರವಾನಿಗೆ ರದ್ದು ಮಾಡಲಾಗಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada district administration banned sand mining in the district for 45 days from June 15, 2016. But, administration has offered a breather to those engaged in construction activities to transport and store sand between June 15 and June 21.
Please Wait while comments are loading...