ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ?
ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ದಿನಾ ಟೀಕೆಗಳ ಸುರಿಮಳೆಗಳನ್ನೇ ಸುರಿಸುತ್ತಿದ್ದಾರೆ. ಸರಕಾರದ ಕಾರ್ಯವೈಖರಿಯ ಬಗ್ಗೆ ಕಾಂಗ್ರೆಸ್ಸಿನ ಇತರ ಯಾವ ನಾಯಕರಿಂದಲೂ ಈ ಮಟ್ಟಿನ ವಿರೋಧ ವ್ಯಕ್ತವಾಗುತ್ತಿಲ್ಲ.
ಯಡಿಯೂರಪ್ಪನವರ ಸರಕಾರದ ಆಡಳಿತದ ಒಂದೊಂದು ಹುಳುಕುಗಳನ್ನು ಸಾರ್ವಜನಿಕರ ಮುಂದೆ ಇಡುತ್ತಿರುವ ಸಿದ್ದರಾಮಯ್ಯ, ಕೊರೊನಾ ನಿರ್ವಹಣೆಯ ವಿಚಾರದಲ್ಲಂತೂ ಅಕ್ಷರಸಃ ಬಿಜೆಪಿ ಸರಕಾರದ ವಿರುದ್ದ ತಿರುಗಿ ಬಿದ್ದಿದ್ದರು.
ತಾಕತ್ತಿದ್ದರೆ ಗೋಮಾಂಸ ರಫ್ತು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು
ಗೋಹತ್ಯೆ ನಿಷೇಧ, ಲವ್ ಜಿಹಾದ್, ರೈತರ ಹೋರಾಟ ಮುಂತಾದ ವಿಚಾರದಲ್ಲೂ ಕಾಂಗ್ರೆಸ್ ಅಥವಾ ಜೆಡಿಎಸ್ಸಿನ ಯಾವ ನಾಯಕರೂ ಸಿದ್ದರಾಮಯ್ಯನವರಷ್ಟು ಸರಕಾರದ ವಿರುದ್ದ ತಿರುಗಿಬಿದ್ದಿಲ್ಲ ಎನ್ನುವುದು ಸತ್ಯ. ಇವೆಲ್ಲ ವಿಚಾರ ಒಂದು ಕಡೆ.
ಸಿದ್ದರಾಮಯ್ಯನವರ ವಿನಾಕಾರಣ 2 ಹೇಳಿಕೆ: ಬಿಜೆಪಿಗೆ ಭರ್ಜರಿ ಮೈಲೇಜ್, ಕಾಂಗ್ರೆಸ್ಸಿಗೆ ಭಾರೀ ಮುಜುಗರ?
ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದ ಬಗ್ಗೆ ಹೇಳಿಕೆಯನ್ನು ನೀಡಿರುವ ಸಿದ್ದರಾಮಯ್ಯ ಮತ್ತೆ ಒಂದು ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಬಿಜೆಪಿಯವರೇ ಹೇಳಿದ್ದರೂ, ಅದ್ಯಾವ ಖಚಿತ ಆಧಾರದ ಮೇಲೆ ಸಿದ್ದರಾಮಯ್ಯ ಈ ಮಾತನ್ನು ಹೇಳುತ್ತಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ಹಳ್ಳಿ ಫೈಟ್ ಫಲಿತಾಂಶ
ಹಳ್ಳಿ ಫೈಟ್ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಹೀಗೆ, "ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿಯೇ ಅಲ್ಲಾಡ್ತಿದೆ, ಅದರ ನಡುವೆಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹಗಲುಗನಸು ಕಾಣ್ತಿದ್ದಾರೆ. ಒಂದು ವೇಳೆ ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಇದು ನೂರಕ್ಕೆ ನೂರು ಸತ್ಯ"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಿದ್ದಾರೆ
ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಹತ್ತು ಹಲವು ಬಾರಿ ಈ ಮಾತನ್ನು ರಿಪೀಟ್ ಮಾಡುತ್ತಲೇ ಇದ್ದಾರೆ. ಸಿದ್ದರಾಮಯ್ಯನವರಿಂದ ಈ ಹೇಳಿಕೆ ಬಂದ ಕೂಡಲೇ, ಬಿಜೆಪಿಯವರು ಇದಕ್ಕೆ ಸ್ಪಷ್ಟನೆಯನ್ನು ನೀಡುತ್ತಿದ್ದಾರೆ.

ದೆಹಲಿಯಿಂದ ನನಗೆ ಬಂದ ಖಚಿತ ಮಾಹಿತಿ
ನವೆಂಬರ್ ತಿಂಗಳಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ದೆಹಲಿಯಿಂದ ನನಗೆ ಬಂದ ಖಚಿತ ಮಾಹಿತಿಯ ಪ್ರಕಾರ ಯಡಿಯೂರಪ್ಪನವರನ್ನು ಮುಖ್ಯಮಂತಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ. ಹಾಗಾಗಿಯೇ, ಬಿಜೆಪಿ ವರಿಷ್ಠರು ಯಡಿಯೂರಪ್ಪನವರನ್ನು ನೆಗ್ಲೆಕ್ಟ್ ಮಾಡುತ್ತಿರುವುದು. ಸಂಪುಟ ವಿಸ್ತರಣೆ ಆಗದೇ ಇರುವುದು ಕೂಡಾ ಅದೇ ಕಾರಣಕ್ಕೆ"ಎಂದು ಹೇಳಿದ್ದರು.

ದೆಹಲಿಯಿಂದ ಬಂದಿದ್ದ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್
ಇತ್ತೀಚೆಗೆ ದೆಹಲಿಯಿಂದ ಬಂದಿದ್ದ ಬಿಜೆಪಿಯ ಉಸ್ತುವಾರಿಯವರೂ ಯಡಿಯೂರಪ್ಪನವರ ಬದಲಾವಣೆ ಇಲ್ಲ. ಅವರಿಗಿರುವ ಅಪಾರ ರಾಜಕೀಯ ಅನುಭವದ ಮುಂದೆ ನಾನು ಏನು ಹೇಳಲು ಸಾಧ್ಯ. ಪೂರ್ಣಾವಧಿಗೆ ಅವರೇ ಸಿಎಂ"ಎಂದು ಅರುಣ್ ಸಿಂಗ್ ಹೇಳಿದ್ದರು. ಪರಿಸ್ಥಿತಿ ಹೀಗಿದ್ದಾಗ, ಅದ್ಯಾವ ಖಚಿತ ಆಧಾರದ ಮೇಲೆ ಸಿದ್ದರಾಮಯ್ಯನವರು ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ ಎನ್ನುವ ಮಾತನ್ನು ಆಡುತ್ತಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.