ಸಿದ್ದರಾಮಯ್ಯ ಸರಕಾರದ ಮೂರು ವರ್ಷ: ಎಚ್ಡಿಕೆ ನೀಡಿದ ಸರ್ಟಿಫಿಕೇಟ್

Written By:
Subscribe to Oneindia Kannada

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಮೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ಬಿಜೆಪಿ ಸರಕಾರದ ವಿರುದ್ದ ಕಿರುಹೊತ್ತಿಗೆ ಬಿಡುಗಡೆ ಮಾಡಿದರೆ, ಜೆಡಿಎಸ್ ಮುಖಂಡ ಕುಮಾರಸ್ವಾಮಿ ವಾಗ್ದಾಳಿ ಮೂಲಕ ಸರ್ಟಿಫಿಕೇಟ್ ನೀಡಿದ್ದಾರೆ.

ಆದರೆ ದೆಹಲಿಯಲ್ಲಿರುವ ಮುಖ್ಯಮಂತ್ರಿಗಳು ಇದ್ಯಾವುದಕ್ಕೂ ತಲೆಕೆಡೆಸಿಕೊಳ್ಳದೇ, ಅವರೇನು ಸರ್ಟಿಫಿಕೇಟ್ ನೀಡುವುದು, ನಮ್ಮ ಸರಕಾರದ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆಂದು ಬೆನ್ನು ತಟ್ಟಿಕೊಂಡಿದ್ದಾರೆ. (ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ)

ಎಂದಿನಂತೆ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಹರಿಹಾಯ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಭ್ರಷ್ಟಾಚಾರ ಎನ್ನುವ ಕೂಸನ್ನು ಬಿಜೆಪಿ ಹುಟ್ಟುಹಾಕಿತು, ಕಾಂಗ್ರೆಸ್ ಈಗ ಅದನ್ನು ಪೋಷಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಸೌಜನ್ಯತೆ ಅನ್ನೋದನ್ನು ಅರಿಯದ ಸಿದ್ದರಾಮಯ್ಯ ಮತ್ತು ಅವರ ಸಚಿವರು, ಮೂರು ವರ್ಷದಲ್ಲಿ ಮಾಡಿದ ಸಾಧನೆ ಏನು ಎನ್ನುವುದನ್ನು ಕೇಳಬೇಡಿ. ಇನ್ನೆರಡು ವರ್ಷದಲ್ಲಾದರೂ ಅಭಿವೃದ್ದಿ ಕಡೆ ಗಮನ ಹರಿಸಲಿ ಎಂದು ಮಾಧ್ಯಮದವರ ಮುಂದೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ಭ್ರಷ್ಟಾಚಾರ ಎನ್ನುವುದು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಬೇರೂರಿದೆ. ಸರಕಾರದ ಯಾವ ಅಧಿಕಾರಿಗಳೂ ಸರಕಾರದ ಮಾತನ್ನು ಕೇಳುತ್ತಿಲ್ಲ. ಇನ್ನು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ವಿವರ ಅನಗತ್ಯ ಎಂದು ಕುಮಾರಸ್ವಾಮಿ ಎಂದಿನಂತೆ ಸರಕಾರದ ವಿರುದ್ದ ಕಿಡಿಕಾರಿದ್ದಾರೆ. (ಸಿದ್ದರಾಮಯ್ಯ ಸರಕಾರ ಫೇಲ್)

ಕೆಂಪಯ್ಯ ವರ್ತನೆ ಯಾವ ರೌಡಿಗಿಂತಲೂ ಕಮ್ಮಿಯಿಲ್ಲ, ಮುಂದೆ ಓದಿ..

ಉಡಾಫೆಯ ಮಾತು

ಉಡಾಫೆಯ ಮಾತು

ಸರಕಾರದಿಂದ ಯಾವುದೇ ಸ್ಪಷ್ಟನೆ ಕೇಳಿದರೂ ಉಡಾಫೆಯ ಮಾತು ಹೊರಬೀಳುತ್ತೆ. ನೀವಿದ್ದಾಗ ಏನು ಮಾಡಿದ್ರಿ ಎನ್ನುವ ಉತ್ತರ ಬರುತ್ತದೆ. ನಾನು ಅಧಿಕಾರದಲ್ಲಿದ್ದ ಇಪ್ಪತ್ತು ತಿಂಗಳಲ್ಲಿ ಭ್ರಷ್ಟಾಚಾರದ ಬೇರು ಕಟ್ಟು ಮಾಡಲು ವಸ್ತುನಿಷ್ಠ ಪ್ರಯತ್ನಿಸಿದ್ದೆ - ಕುಮಾರಸ್ವಾಮಿ.

ಸಾಲ ಮಾಡಿ ಸಿನಿಮಾ ಮಾಡುತ್ತಿದ್ದೇನೆ

ಸಾಲ ಮಾಡಿ ಸಿನಿಮಾ ಮಾಡುತ್ತಿದ್ದೇನೆ

ನನ್ನ ಮಗನ ಸಿನಿಮಾವನ್ನು ಬ್ಯಾಂಕುಗಳಲ್ಲಿ ಸಾಲ ಮಾಡಿ ನಿರ್ಮಿಸುತ್ತಿದ್ದೇನೆ. ಈ ವಿಚಾರದಲ್ಲಿ ಒಂದೊಂದು ಪೈಸೆಯ ವ್ಯವಹಾರವೂ ತೆರೆದ ಪುಸ್ತಕ. ಬ್ಯಾಂಕಿನ ರೂಲ್ಸ್ ಮತ್ತು ರೆಗ್ಯುಲೇಶನ್ ಪ್ರಕಾರ ಸಾಲ ತೆಗೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಮಗನ ಜೀವನ ರೂಪಿಸುವುದು ನನ್ನ ಕರ್ತವ್ಯ

ಮಗನ ಜೀವನ ರೂಪಿಸುವುದು ನನ್ನ ಕರ್ತವ್ಯ

ತಂದೆಯಾಗಿ ಮಗನ ಜೀವನ ರೂಪಿಸುವುದು ನನ್ನ ಕರ್ತವ್ಯ, ಇದನ್ನು ತಂದೆಯ ಸ್ಥಾನದಲ್ಲಿದ್ದವರು ಯಾರಾದರೂ ತಪ್ಪೆಂದು ಹೇಳಲಿ,ನೋಡೋಣ. ನಾನು ಅಧಿಕಾರದಲ್ಲಿದ್ದಾಗ ಚಿತ್ರ ನಿರ್ಮಿಸುತ್ತಿದ್ದರೆ ನನ್ನ ಬಗ್ಗೆ ಅಪವಾದ ಹೊರಿಸಿದ್ದರೆ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಸ್ವಲ್ಪವಾದರೂ ತೂಕವಿರುತ್ತಿತ್ತು - ಕುಮಾರಸ್ವಾಮಿ.

ಕೆಂಪಯ್ಯ ರೌಡಿ ವರ್ತನೆ

ಕೆಂಪಯ್ಯ ರೌಡಿ ವರ್ತನೆ

ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆಯ ನಂತರ ಮಾಧ್ಯಮದವರ ಮುಂದೆ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಅವರ ವರ್ತನೆ ಯಾವುದೇ ರೌಡಿಗಿಂತ ಕಮ್ಮಿಯಿಲ್ಲ, ಶೇಮ್. - ಕುಮಾರಸ್ವಾಮಿ.

ಕೆಂಪಯ್ಯ ಡೈರಿಯಲ್ಲಿ ಎಲ್ಲಾ ಇದೆ

ಕೆಂಪಯ್ಯ ಡೈರಿಯಲ್ಲಿ ಎಲ್ಲಾ ಇದೆ

ಕೆಂಪಯ್ಯನವರು ತನ್ನ ಡೈರಿಯಲ್ಲಿ ಎಲ್ಲಿಂದ ಎಷ್ಟು ದುಡ್ಡು ಬಂತು, ಅದನ್ನು ಯಾರ್ಯಾರಿಗೆ ಸಂದಾಯ ಮಾಡಲಾಗಿದೆ ಎಂದು ಬರೆದಿದ್ದಾರೆ. ಸುಮ್ಮನೆ ಕೆಂಪಯ್ಯನವರನ್ನು ವಿಚಾರಣೆ ನಡೆಸಲು ಐಟಿ ಅಧಿಕಾರಿಗಳಿಗೆ ಬೇರೆ ಕೆಲಸವಿಲ್ವಾ - ಕುಮಾರಸ್ವಾಮಿ.

ಉಗ್ರಪ್ಪ ಬಗ್ಗೆ ಎಚ್ಡಿಕೆ

ಉಗ್ರಪ್ಪ ಬಗ್ಗೆ ಎಚ್ಡಿಕೆ

ಮಹಿಳಾ ದೌರ್ಜನ್ಯ ತಡೆ ಸಮಿತಿಯ ಪ್ರಮುಖರಾದ ಉಗ್ರಪ್ಪ ಸಾಹೇಬ್ರು ದೂರು ನೀಡಲು ಬಂದ ಮಹಿಳೆಯ ವಿರುದ್ದ ಕೀಳು ಮಟ್ಟದ ಮಾತನ್ನಾಡಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಮೂರು ವರ್ಷ ತುಂಬಿದ ಈ ಸಂದರ್ಭದಲ್ಲಿ, ಸರಕಾರದ ಸಾಧನೆ ಹೇಗಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ - ಎಚ್ಡಿಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS State President HD Kumaraswamy reaction on Siddaramaiah government completion of three years in Karnataka. HDk bashed out failure of Siddaramaiah government in all front.
Please Wait while comments are loading...