ಆರಿಹೋದ 'ಓಂ' ಚಿತ್ರದ ಸ್ಫೂರ್ತಿ, ಗದ್ಗದಿತ ರಿಯಲ್ ಸ್ಟಾರ್ ಉಪ್ಪಿ

Subscribe to Oneindia Kannada

ಬೆಂಗಳೂರು, ಡಿಸೆಂಬರ್, 11: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'ಓಂ' ಚಿತ್ರಕ್ಕೆ ಸ್ಫೂರ್ತಿಯಾಗಿದ್ದ ಪುರುಷೋತ್ತಮ್ ಗುರುವಾರ ಹೃದಯಾಘಾತದಿಂದ ಅಸುನೀಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಶುಕ್ರವಾರ ಸ್ನೇಹಿತನ ಅಂತಿಮ ದರ್ಶನ ಪಡೆದರು. ಈ ವೇಳೆ ಉಪ್ಪಿ ಗದ್ಗದಿತರಾಗಿದ್ದು ಕಂಡುಬಂತು.

ಶುಕ್ರವಾರ ಬಿಡದಿ ಸಮೀಪದ ಕುರುಬರ ಕಾರೇನಹಳ್ಳಿಯಲ್ಲಿ ಪುರುಷೋತ್ತಮ್ ಅವರ ಅಂತ್ಯಸಂಸ್ಕಾರ ನಡೆಯಿತು. ರೌಡಿಸಂ ಬಿಟ್ಟು ಬದುಕು ಬದಲಾಯಿಸಿಕೊಂಡಿದ್ದ ಬಿವಿ ಪುರುಷೋತ್ತಮ್ ಜೀವನ ಕತೆಯೇ 'ಓಂ' ಚಿತ್ರವಾಗಿ ತೆರೆಗೆ ಬಂದಿತ್ತು. ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ ಉಪೇಂದ್ರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ ಚಿತ್ರ ಇನ್ನು ಬಿಡುಗಡೆಯಾಗುತ್ತಲೇ ಇದೆ.[ಕನ್ನಡ ಚಿತ್ರರಂಗದ ಎಂಟನೇ ಅದ್ಭುತ ಓಂ]

kannada

ಪುರುಷೋತ್ತಮ್ ಕುಟುಂಬಕ್ಕೆ ನೋವು ಭರಿಸಸುವ ಶಕ್ತಿ ಭಗವಂತ ನೀಡಲಿ. ಅವರ ಜೀವನದ ಕತೆ ಇಂದು ಅದೆಷ್ಟೋ ಜನಕ್ಕೆ ಪಾಠವಾಗಿದೆ ಎಂದು ಉಪೇಂದ್ರ ಹೇಳಿದರು. ರೌಡಿಸಂ ಚಿತ್ರವನ್ನು ಮೊದಲ ಬಾರಿ ಜನ ನೋಡಿದ್ದರು. ಆದರೆ ಅದರಲ್ಲಿದ್ದ ಸಂದೇಶ ಎಲ್ಲರ ಮೇಲೂ ಪ್ರಭಾವ ಬೀರಿತ್ತು.

ಕಳೆದ 20 ವರ್ಷಗಳಲ್ಲಿ 'ಓಂ' ಸಿನಿಮಾ ರೀ ಬರೋಬ್ಬರಿ 551ನೇ ಬಾರಿ ರಿ ರೀಲಿಸ್ ಆಗಿದೆ. ಉದಯ ಟಿವಿ ಇತ್ತೀಚೆಗಷ್ಟೇ ಸಿನಿಮಾದ ಹಕ್ಕು ಕೊಂಡುಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sandalwood blockbuster movie OM inspiration Upendra Friend Purushottam passes away on December 10.
Please Wait while comments are loading...