Odish Train Tragedy: ಲಾಡ್ ನೇತೃತ್ವದ ತಂಡದ ಕಾರ್ಯಾಚರಣೆ, ಮೊದಲ ಕನ್ನಡಿಗರ ತಂಡ ತವರಿಗೆ

ಬೆಂಗಳೂರು, ಜೂನ್ 04: ಒಡಿಶಾ ಸರಣಿ ರೈಲು ಅಪಘಾತದಲ್ಲಿ ಬುದುಕುಳಿದು ಸಣ್ಣ ಪುಟ್ಟ ಗಾಯಗೊಂಡ ಕನ್ನಡಿಗರ ರಕ್ಷಣೆಯ ಪೈಕಿ ಮೊದಲ ತಂಡದ ಸದಸ್ಯರು ತವರು ಸೇರಿದ್ದಾರೆ. ಎರಡು ತಂಡ ಇಂದು ಭಾನುವಾರ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡವು ಒಡಿಶಾ ಬಾಲಾಸೂರ್ ರೈಲು ಅಪಘಾತದಲ್ಲಿ ಸುರಕ್ಷಿತವಾಗಿರುವ ಕನ್ನಡಿಗರನ್ನು ಕರೆತರಲು ಕಾರ್ಯೋನ್ಮುಖರಾಗಿದ್ದಾರೆ. ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ಭಾಗವಾಗಿ ಸುಮಾರು 18 ಮಂದಿ ಮೊದಲ ತಂಡ ರಾಜ್ಯಕ್ಕೆ ಆಗಮಿಸಿದೆ.

Odisha Train Tragedy: Minister Santosh lad team rescue 18 people kannadigas, Others arrivals

ಅವರಲ್ಲಿ ಕೆಲವರು ಮೈಸೂರಿಗೆ ತೆರಳಿದರೆ, ಇನ್ನು ಕೆಲವರು ಹಾಸನ ಮತ್ತು ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಕ್ಷಿಸಿ ಕರೆತರುವವರನ್ನು ಅವರ ಊರುಗಳಿಗೆ ಕಳಹಿಸಲು ವಿಮಾನ ನಿಲ್ದಾಣದಲ್ಲಿ ಸಂತೋಷ್ ಲಾಡ್‌ ತಂಡದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂದು ರಾತ್ರಿ ಹೊತ್ತಿಗೆ ಎರಡು ತಂಡ ಆಗಮಿಸುವ ನಿರೀಕ್ಷೆ ಇದೆ.

ಯಶವಂತಪುರ ಹೌರಾ ಎಕ್ಸಪ್ರೆಸ್ ಮೂಲಕ ಚಿಕ್ಕಮಗಳೂರು ಮೂಲದ 110 ಕ್ಕೂ ಮಂದಿ ಕನ್ನಡಿಗರು ತೀರ್ಥಯಾತ್ರೆಗೆ ಹೊರಟಿದ್ದರು. ಅವರಲ್ಲಿ ಬಹುತೇಕ ಮಂದಿ ಕಳಸಾ ಸುತ್ತಮುತ್ತಲಿನ ನಿವಾಸಿಗಳು ಎನ್ನಲಾಗಿದೆ. ಅವರೆಲ್ಲರು ಜೈನತೀರ್ಥ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದ ಶಿಖರಕ್ಕೆ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನ ಯಶವಂತಪುರ ಹೌರಾ ಎಕ್ಸಪ್ರೆಸ್ ರೈಲು ಮೂಲಕ ತೆರಳುತ್ತಿದ್ದರು. ಸದ್ಯ ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Odisha Train Tragedy: Minister Santosh lad team rescue 18 people kannadigas, Others arrivals

ಕನ್ನಡಿಗರು ಹೊರಟಿದ್ದ ರೈಲುಗಳು ಕೊಲ್ಕತ್ತಾ ಬಳಿ ಇಂಜಿನ್ ಬದಲಿಸಿದ ಪರಿಣಾಮ ಇವರಿದ್ದ ಬೋಗಿಗಳು ಮುಂದಕ್ಕೆ ಶೀಫ್ಟ್‌ ಆಗಿದ್ದವು. ಅಪಘಾತದಲ್ಲಿ ರೈಲಿನ ಕೊನೆಯ ನಾಲ್ಕು ಬೋಗಿಗಳಿಗೆ ಹಾನಿಯಾಗಿದ್ದರಿಂದ ಇವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡದ ನೆರವಿನಿಂ ಅವರೆಲ್ಲ ತವರಿಗೆ ಬರುತ್ತಿದ್ದಾರೆ.

ಘಟನೆಯಲ್ಲಿ ಕನ್ನಡಿಗರು ಮತ್ತಾರಾದರೂ ಸಿಲುಕಿದ್ದಾರೆಯೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವರು ಯಶವಂತಪುರದಿಂದ ಅದೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಆಧಾರಿಸಿ ಕನ್ನಡಿಗರ ರಕ್ಷಣೆಗೆ ಸಿದ್ದರಾಮಯ್ಯನವರು ಲಾಡ್ ಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಕರ್ನಾಟಕ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಸಹ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಜೂನ್ 2ರಂದು ಶುಕ್ರವಾರ ಸಂಜೆ ನಡೆದ ಒಡಿಶಾದ ಬಾಲಾಸೂರ್‌ನಲ್ಲಿ ನಡೆದ ಸರಣಿ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಭಾನುವಾರಕ್ಕೆ 294ಕ್ಕೆ ಏರಿಕೆ ಆಗಿದೆ. ಒಟ್ಟು ಸುಮಾರು 1,110,ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಟೆಗೆ 128 ಕಿಲೋ ಮೀಟರ್‌ ವೇಗದ ರೈಲು ಡಿಕ್ಕಿ

ಒಡಿಶಾ ಬಾಲಾಸೂರ್ ನ ರೈಲು ನಿಲ್ದಾಣದಲ್ಲಿ ಗೂಡ್ಸ ರೈಲೊಂದು ನಿಂತಿತ್ತು. ಶಾಲಿಮಾರ್ ಚೆನ್ನೈ ಕೋರಮಂಡಲ್ ಎಕ್ಸಪ್ರೆಸ್‌ ರೈಲು ಎರಡನೇ ಲೈನ್‌ನಲ್ಲಿ ತೆರಳಬೇಕಿತ್ತು. ಆದರೆ ಸಿಗ್ನಲ್ ನೀಡುವಲ್ಲಿ ಉಂಟಾದ ಪ್ರಮಾದದಿಂದಾಗಿ ಈ ರೈಲು ಗೂಡ್ಸ್‌ ರೈಲು ನಿಂತಿದ್ದ ಮೊದಲ ಲೈನ್‌ನಲ್ಲಿಯೇ ಗಂಟೆಗೆ 128 ಕಿಲೋ ಮೀಟರ್‌ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಆ ರೈಲಿನ ಕೆಲವು ಬೋಗಿಗಳ ಹಳಿ ತಪ್ಪಿ ಎಲ್ಲೆಂದರಲ್ಲಿ ಉರುಳಿ ಬಿದ್ದಿವೆ.

ಘಟನೆಯಾಗಿ ಕೆಲವೇ ಕ್ಷಣಗಳಲ್ಲಿ ಮೂರನೇ ಲೈನ್‌ನಲ್ಲಿ ಬಂದ ಯಶವಂತಪುರ ಹೌರಾ ಎಕ್ಸಪ್ರೆಸ್ ರೈಲು ಹಳಿಗಳ ಮೇಲೆ ಬಿದ್ದಿದ್ದ ಕೋರಮಂಡಲ್‌ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಆಗ ಈ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಇದರಲ್ಲಿದ್ದ ಕನ್ನಡಿಗರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+