ಯುವಮನಸ್ಸುಗಳಿಗಾಗಿ ಇರುವ ಪತ್ರಿಕೆ ಓ ಮನಸೇ
'ಓ ಮನಸೇ' ಭಾವಭೂಮಿಕೆಯನ್ನು ಯುವ ಜನರಲ್ಲಿ ನಿರ್ಮಿಸಿರುವ ಪತ್ರಿಕೆ. ಎಲ್ಲೋ ಬಸ್ಸಲ್ಲಿ ಸಿಕ್ಕಿದೋರು, ಸ್ಕೂಲ್‌ನಲ್ಲಿ ಪಕ್ಕದಲ್ಲಿ ಕೂತ್ಕೊಂಡು ಡಬ್ಬಿ ಹಂಚಿಕೊಂಡವರು, ಕೆಲಸವಿಲ್ಲದಿದ್ದಾಗ ಮನೆಯಲ್ಲಿ ಇಟ್ಕೊಂಡೋರು ಆ ತರಹ ನಮ್ಮ ಜೀವನದಲ್ಲಿ ಸಾವಿರಾರು ಜನ ಬಂದ್ಹೋಗಿರ್ತಾರೆ. ಅವರ ಮುಖ ಚಹರೆ ಎಲ್ಲಾ ಮರೀತೀವಿ ನಾವು.
ಆದರೆ ರವಿ ಬೆಳಗೆರೆಯವರ 'ಖಾಸ್ ಬಾತ್'ನಲ್ಲಿ ಅವರಿಗೆಲ್ಲಾ ಮುಖ, ಚಹರೆ ಕೊಡುವಂಥ ಒಂದು ರೀತಿ ಕಥನವೇ ಅದು. ಆ 'ಖಾಸ್ ಬಾತ್'ನಲ್ಲಿ ಒಂದು ಎಲಿಮೆಂಟ್ ಇತ್ತಲ್ಲಾ? ಯವಜನರ ಜೊತೆ ಮುಕ್ತವಾದ ಸಂವಾದ, ಒಂದು ಸಲಿಗೆಯಿಂದ ಬೈಯೋದು, ಬುದ್ಧಿವಾದ ಹೇಳೋದು ಆ ತರಹದ್ದು, ಅದರ ವಿಸ್ತಾರವಾದ ರೂಪ 'ಓ ಮನಸೇ..' ಅಂತ ನನಗೆ ಅನ್ನಿಸುತ್ತದೆ. 'ಓ ಮನಸೇ'ಗೆ ಅದರದೇ ಆದ ಭಾವನಾತ್ಮಕವಾದ ಮತ್ತು ಅಷ್ಟೇ ಜವಾಬ್ದಾರಿಯುತವಾದ ವಾಚಕವೃಂದ ಇದೆ. ನೂರನೇ ಸಂಚಿಕೆ ಬರ್ತಾ ಇರೋದು ಬಹಳ ಖುಷಿ.
ಎಲ್ಲರೂ ಫೇಸ್‌ಬುಕ್‌ಗಳಲ್ಲಿ, ಸೆಲ್ಫಿಗಳಲ್ಲಿ ಆತ್ಮರಥರಾಗಿ ಹೋಗ್ತಿದ್ದಾರೆ ಎನ್ನುವ ಭಯದಲ್ಲಿರುವಾಗ ಈಗಲೂ ಅಂಗಡಿ ಹೋಗಿ 20 ರುಪಾಯಿ ಕೊಟ್ಟು ಓ ಮನಸೇ..' ತಗೊಂಡು ಬಸ್ಸಲ್ಲಿ, ಮನೆ ಟೇಬಲ್ ಮೇಲಿಟ್ಕೊಂಡು ಓದುತ್ತಾರೆಂದರೆ ಹೃದಯಂಗಮವಾದ ಸಂಗತಿ-ಜಯಂತ್ ಕಾಯ್ಕಿಣಿ. [50 ವರ್ಷ ತುಂಬಿದ ಸುಧಾ ವಾರಪತ್ರಿಕೆ]

ನಮ್ಮ ಓದುಗರ ಪೈಕಿ ಹಲವಾರು ಮಂದಿ ‘ಓ ಮನಸೇ'ಯ ಅಷ್ಟೂ ಸಂಚಿಕೆಗಳನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರ ಪಾಲಿಗೆ ಅದೊಂದು ಅಮೂಲ್ಯ ಆಸ್ತಿ. ಈ ಹಿಂದೆ ‘ರೀಡರ್ಸ್ ಡೈಜೆಸ್ಟ್' ಪತ್ರಿಕೆಯ ಸಂಚಿಕೆಗಳನ್ನು ಇದೇ ಥರ ಕಾಪಿಟ್ಟುಕೊಳ್ಳುವ ಜನರಿದ್ದರು, ಆಮೇಲೆ ‘ಕಸ್ತೂರಿ' ಪತ್ರಿಕೆಗೂ ಅಂಥಾದ್ದೇ ರಾಜಮರ್ಯಾದೆ ಸಂದಾಯವಾಗಿತ್ತು. ಈಗ ‘ಓ ಮನಸೇ..'ಯ ಸರದಿ. ಹದಿನೈದೇ ರುಪಾಯಿಗೆ ಇದಕ್ಕಿಂತ ಜಾಸ್ತಿ ಪುಟಗಳನ್ನು ಬಣ್ಣದಲ್ಲಿ ನೀಡುವ ಪತ್ರಿಕೆಗಳಿವೆ, ಹಾಗಿರುವಾಗ ಐವತ್ತು ಪುಟಗಳ ‘ಓ ಮನಸೇ'ಗೆ ಇಪ್ಪತ್ತು ರುಪಾಯಿ ದುಬಾರಿಯಾಯಿತಲ್ಲವೇ ಎಂದು ಕೆಲವರು ತಕರಾರು ಎತ್ತಿದ್ದುಂಟು.[ಕಾಮಿನಿಯೆಂದರೆ ಹೆಣ್ಣು ; ಕಾಮಿಯೆಂದರೆ ಹೆಣ್ಣುಬೆಕ್ಕು!]
ಅವರಿಗೆ ನಾನು ಹೇಳುವುದಿಷ್ಟೆಃ ಮಿಕ್ಕ ಪತ್ರಿಕೆಗಳಲ್ಲಿ ಜಾಹಿರಾತಿಗೆ ಮೀಸಲಾಗಿರುವ ಪುಟಗಳನ್ನು ಕಳೆದು ನೋಡಿ, ಆಗ ಕಂಟೆಂಟ್ ಸಲುವಾಗಿ ಉಳಿಯುವುದು ಐವತ್ತು ಪುಟಗಳೇ. ಕಲರ್ ಪುಟಗಳ ವಿಷಯಕ್ಕೆ ಬಂದರೆ ಅಂದಚಂದಕ್ಕೋಸ್ಕರ ಈಗ ಯಾರೂ ಪತ್ರಿಕೆಗಳನ್ನು ಓದುವುದಿಲ್ಲ. ಟೀವಿಯಲ್ಲಿ ನ್ಯಾಷನಲ್ ಜಿಯಾಗ್ರಫಿ ಚಾನೆಲ್ಲು ನೋಡಿ, ಅದು high definition ಗುಣಮಟ್ಟದಲ್ಲಿರುತ್ತವೆ.

ಅದರ ಜೊತೆಗೆ ಯಾರಾದರೂ ಪೈಪೋಟಿಗೆ ಬೀಳುವುದಕ್ಕಾಗುತ್ತದೆಯೇ? ಅಂದದ ಮನೆಗೊಂದು ಚಂದದ ಪತ್ರಿಕೆ ಅನ್ನುವ ಕಾಲ ಹೊರಟುಹೋಯಿತು. ಟೀಪಾಯ್ ಮೇಲಿಟ್ಟುಕೊಳ್ಳುವ ಪತ್ರಿಕೆಯ ಒಳಗೇನಿದೆ ಅನ್ನುವುದೇ ಮುಖ್ಯ. ಬಹುಶಃ ‘ಸಮಾಧಾನ'ದಂಥ ವಿಶಿಷ್ಟ, ವಿಭಿನ್ನ ಅಂಕಣ ಬೇರೆ ಯಾವ ಪತ್ರಿಕೆಯಲ್ಲೂ ಇಲ್ಲ. ಸೆಕ್ಸು, ಕ್ರೌರ್ಯ, ರಾಜಕೀಯ ನಮಗಲ್ಲ.
ಪತ್ರಿಕೆ ತನ್ನ ಸುದೀರ್ಘ ಪಯಣದಲ್ಲಿ ನಾನಾ ಅವತಾರಗಳನ್ನು ಎತ್ತಬೇಕಾಗುತ್ತದೆ. ಒಮ್ಮೆ ಗೆಳೆಯನಂತೆ, ಮತ್ತೊಮ್ಮೆ ಹಿರಿಯನಂತೆ, ಮಗದೊಮ್ಮೆ ಪ್ರೇಮಿಯಂತೆ...ಹೀಗೆ ಓದುಗರನ್ನು ಆವರಿಸುತ್ತಾ, ನೇವರಿಸುತ್ತಾ, ಅವರ ದೈನಿಕದಲ್ಲಿ ಒಂದಾಗುವುದು ಕಷ್ಟದ ಕೆಲಸ. ಅದನ್ನು ಸಾಧಿಸುವ ಹಾದಿಯಲ್ಲಿ ನಾವಿದ್ದೇವೆ ಅನ್ನುವುದೇ ನನ್ನ ಸಂತಸ.
ಜೊತೆಗೆ ನೀವಿಲ್ಲದೇ ಇದ್ದರೆ ಇದು ಸಾಧ್ಯವಾಗುವುದಿಲ್ಲ ಅನ್ನುವುದು ವಾಸ್ತವ. ಕೆಲವು ಓದುಗರು ಪದೇಪದೇ ಪತ್ರ ಬರೆದು ವಿನಂತಿಸಿಕೊಳ್ಳುತ್ತಿದ್ದಾರೆ - ಯಾವುದೇ ಕಾರಣಕ್ಕೂ ‘ಓ ಮನಸೇ'ಯನ್ನು ಮತ್ತೆ ಸ್ತಗಿತಗೊಳಿಸಬೇಡಿ. ಆ ಪ್ರಶ್ನೆಯೇ ಇಲ್ಲ, ಯಾಕೆಂದರೆ ಅಂಬೆಗಾಲಿಡುತ್ತಿದ್ದ ಮಗು ಈಗ ಹರಯಕ್ಕೆ ಬಂದಿದೆ. ನಿಮ್ಮ ಹರಕೆ, ಹಾರೈಕೆಯಿದ್ದರೆ ಇದು ದ್ವಿಶತಕ ಬಾರಿಸುವುದು ದೊಡ್ಡ ಸಂಗತಿಯೇನಲ್ಲ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನೂರು ಸಾರಿ ಥ್ಯಾಂಕ್ಸ್ ಹೇಳುತ್ತಾ...
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ -
RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್ -
April 6 Horoscope: ಈ ರಾಶಿಗಳಿಗೆ ಲಾಭ, ಕೆಲವರಿಗೆ ಎಚ್ಚರಿಕೆ ಸೂಚನೆ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ












Click it and Unblock the Notifications