NWKRTC: ಅವಳಿ ನಗರದಿಂದ ಪುಣೆಗೆ ರಾಜರಥ ಎಸಿ ಬಸ್ ಸೇವೆ, ಟಿಕೆಟ್ ಮೇಲೆ 10% ರಿಯಾಯಿತಿ, ವೇಳಾಪಟ್ಟಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ಪ್ರಯಾಣಿಕರ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (NWKRTC) ಹುಬ್ಬಳ್ಳಿ -ಪುಣೆ-ಪಿಂಪ್ರಿ ನಡುವೆ ಪ್ರತಿದಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಈ ಎರಡು ನಗರಗಳಿಗೆ ನಿತ್ಯ ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ, ಮತ್ತಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ತೆರಳುವವರು ಮತ್ತು ಆಗಮಿಸುವವರಿಗೆ ಈ ಸೇವೆ ಸಹಾಯವಾಗಲಿದೆ. ಹುಬ್ಬಳ್ಳಿ- ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಂದ ನೆರೆಯ ಮಹಾರಾಷ್ಟ್ರ ರಾಜ್ಯದ ಪ್ರಮುಖ ಕೈಗಾರಿಕೆ- ವಾಣಿಜ್ಯ ಸ್ಥಳವಾದ ಪುಣೆ ಮತ್ತು ಪಿಂಪ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ.
ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ-ಪುಣೆ-ಪಿಂಪ್ರಿ ನಡುವೆ ಎರಡು ನೂತನ ರಾಜರಥ ಎಸಿ ಸ್ಲೀಪರ್ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ. ಪ್ರತಿದಿನ ರಾತ್ರಿ 9-30 ಕ್ಕೆ ಹುಬ್ಬಳ್ಳಿಯಿಂದ ಪಿಂಪ್ರಿಗೆ ಹಾಗೂ ಪಿಂಪ್ರಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುತ್ತವೆ.

NWKRTC New AC Sleeper Bus

ಬಸ್ ಸಂಚಾರದ ವೇಳಾಪಟ್ಟಿ ಹೀಗಿದೆ

ಹುಬ್ಬಳ್ಳಿಯ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 9:30ಗಂಟೆಗೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 9:40ಕ್ಕೆ, ನವನಗರ 9:55, ಎಸ್.ಡಿ.ಎಂ.ಆಸ್ಪತ್ರೆ 10:05, ಧಾರವಾಡ ಹೊಸ ಬಸ್ ನಿಲ್ದಾಣದಿಂದ 10:15ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 11:35ಕ್ಕೆ ಹೊರಡುತ್ತದೆ. ಕೊಲ್ಹಾಪುರಕ್ಕೆ ರಾತ್ರಿ1:35ಕ್ಕೆ ತಲುಪಿ ಅಲ್ಲಿಂದ ಪುಣೆ ಸ್ವಾರಗೇಟ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 6 ಗಂಟೆಗೆ ನಿಲುಗಡೆ ನೀಡುತ್ತೆದೆ. ಕೊನೆಗೆ ಗಮ್ಯಸ್ಥಾನ ಪಿಂಪ್ರಿಗೆ ಬೆಳಗ್ಗೆ 6:30ಕ್ಕೆ ತಲುಪಲಿದೆ ಎಂದು ರಾಮನಗೌಡರ್ ವಿವರಿಸಿದರು.

ಮರಳಿ ಅದೇ ದಿಕ್ಕಿನಲ್ಲಿ ಪಿಂಪ್ರಿ-ಹುಬ್ಬಳ್ಳಿ ಬಸ್ ರಾತ್ರಿ 9 :30ಕ್ಕೆ ಪಿಂಪ್ರಿ ಬಸ್ ನಿಲ್ದಾಣದಿಂದ ಹೊರಡುತ್ತದೆ. ಪುಣೆ ಸ್ವಾರಗೇಟ್ ಬಸ್ ನಿಲ್ದಾಣ (10:15ಗಂಟೆ), ಬೆಳಗಾವಿ (ಬೆಳಗ್ಗೆ 4:15 ಗಂಟೆ), ಧಾರವಾಡ (ಬೆಳಗ್ಗೆ 5:40ಗಂಟೆ) ಮಾರ್ಗವಾಗಿ ಹುಬ್ಬಳ್ಳಿಗೆ ಮಾರನೇ ದಿನ ಬಳಗ್ಗೆ 6:30ಗಂಟೆಗೆ ಬರುತ್ತದೆ.

ಎಷ್ಟಿದೆ ಟಿಕೆಟ್ ದರ?

ಪ್ರಯಾಣ ದರ ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ 1202 ರೂಪಾಯಿ, ನಂತರದ ಸ್ಟಾಪ್ ಪಿಂಪ್ರಿಗೆ 1252 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ಕೊಟ್ಟರು.

ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿ

ಪ್ರಯಾಣಿಕರು ಈ ಬಸ್‌ಗೆ ಟಿಕೆಟ್ ಬುಕ್ ಮಾಡಲು ನೀವು ಅಧಿಕೃತ ವೆಬ್‌ಸೈಟ್ www.ksrtc.in ವೆಬ್ ಸೈಟ್ ಭೇಟಿ ನೀಡಿ ಅಥವಾ KSRTC Mobile App ಮೂಲಕ ಬುಕ್ ಮಾಡಬಹುದು. ಅಷ್ಟು ಮಾತ್ರವಲ್ಲದೇ ನಗರದ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಇತರೆ ಪ್ರಮುಖ ಬಸ್ ನಿಲ್ದಾಣದಲ್ಲಿ ಟಿಕೆಟ್ ಕೌಂಡರ್‌ಗಳಲ್ಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.

4 ಅಥವಾ ನಾಲ್ಕಕ್ಕಿಂತ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ಬೆಲೆಯಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗುತ್ತದೆ. ಹೋಗುವ ಮತ್ತು ಹಿಂದಿರುಗುವ ಎರಡು ಕಡೆಗಿನ ಪ್ರಯಾಣವನ್ನು ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ಹಣ ರೀಯಾಯಿತಿಯಲ್ಲಿ ಉಳಿಯುತ್ತದೆ. ಈ ರಾಜರಥ ಬಸ್ಸುಗಳಿಂದ ಧಾರವಾಡ, ಬೆಳಗಾವಿ ಜಿಲ್ಲೆಗಳ ಸಾರ್ವಜನಿಕರು ಹಾಗೂ ಮಹಾರಾಷ್ಟ್ರ ರಾಜ್ಯದ ಪುಣೆ, ಪಿಂಪ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ, ಮತ್ತಿತರರಿಗೆ ಅನುಕೂಲವಾಗಲಿದೆ.

ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ನೆರೆಯ ರಾಜ್ಯಗಳ ಇತರೆ ಪ್ರಮುಖ ಸ್ಥಳಗಳಿಗೆ ಹುಬ್ಬಳ್ಳಿಯಿಂದ ನೇರ ಬಸ್ಸುಗಳ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು NWKRTC ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+