Students Bus Pass: 10 ತಿಂಗಳ ಅವಧಿಯ ಡಿಸ್ಕೌಂಟ್ ಬಸ್ ವಿತರಣೆಗೆ ಅರ್ಜಿ ಆಹ್ವಾನ, ಶುಲ್ಕದ ವಿವರ
Bus Pass updates: ಕರ್ನಾಟಕದಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿವೆ. ಇದರ ಬೆನ್ನಲ್ಲಿ ತಮ್ಮ ಊರು, ವಾಸದ ಸ್ಥಳಗಳಿಂದ ಶೈಕ್ಷಣಿಕ ಕೇಂದ್ರಗಳಿಗೆ ಭೇಟಿ ನೀಡುವ ವಿದ್ಯಾರ್ಥಿಗಳಿಂದ ರಿಯಾಯಿತಿ ಬಸ್ ಪಾಸ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025-26 ನೇ ಸಾಲಿನಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಶೀಘ್ರವೇ ವಿತರಿಸಲಾಗುತ್ತದೆ.
ಹತ್ತು ತಿಂಗಳ ಅವಧಿಯ ಬಸ್ ಪಾಸ್ ವಿತರಣೆಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶೀಘ್ರವೇ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ರಿಯಾಯಿತಿ ಬಸ್ ಪಾಸ್ ಪಡೆಯಬಹುದು. ಅರ್ಜಿಗಳನ್ನು ನೀವು ಕರ್ನಾಟಕ-ಒನ್, ಗ್ರಾಮ್ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಪಾಸಿನ ಶುಲ್ಕ ಪಾವತಿಸಿ ಸ್ಥಳೀಯ ಪಾಸ್ ಕೌಂಟರ್‌ಗಳಲ್ಲಿ ಪಾಸ್ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳು ವಿದ್ಯಾಸಂಸ್ಥೆಯ ಶುಲ್ಕ ಪಾವತಿಸಿರುವ ರಶೀದಿ, ಆಧಾರ್ ಕಾರ್ಡ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿದ್ದರೆ ಕಡ್ಡಾಯವಾಗಿ ಪ್ರಮಾಣ ಪತ್ರ ಸಹಿತ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕು. ಶುಲ್ಕ ಪಾವತಿಸಿ ರಶೀದಿ ಸಮೇತ ಹೋಗಿ ಬಸ್ ಕೌಂಟರ್‌ಗಳಲ್ಲಿ ಪಾಸ್ ಪಡೆಯೇಬೇಕು.
ವಿದ್ಯಾರ್ಥಿಗಳಿಗೆ ನೀಡುವ 10 ತಿಂಗಳ ಅವಧಿಯ ರಿಯಾಯಿತಿ ಬಸ್ ಪಾಸ್ ದರ ನೋಡುವುದಾದರೆ, ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾಮಾನ್ಯ ವರ್ಗದವರಿಗೆ 150 ರೂ., ಎಸ್‌ಸಿ-ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ 150 ರೂಪಾಯಿ ಶುಲ್ಕ ಇದೆ. ಪ್ರೌಢಶಾಲೆ (ಬಾಲಕರು) ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದವರಿಗೆ 750ರೂ. ಮತ್ತು ಎಸ್‌ಸಿ-ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ 150 ರೂಪಾಯಿ, ಪ್ರೌಢಶಾಲೆ (ಬಾಲಕಿ) ವಿದ್ಯಾರ್ಥಿಗಳಿಗೆ ಕ್ರಮವಾಗಿ 550 ರೂ. ಮತ್ತು 150 ರೂಪಾಯಿ ಶುಲ್ಕ, ಪಿಯುಸಿ/ಪದವಿ/ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ರಮವಾಗಿ 1050 ಮತ್ತ 150 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಐಟಿಐ ವಿದ್ಯಾರ್ಥಿಗಳಿಗೆ ಕ್ರಮವಾಗಿ 1310 ರೂಪಾಯಿ ಮತ್ತು 160 ರೂಪಾಯಿ, ವೃತ್ತಿಪರ ಕೋರ್ಸ್ ಅಭ್ಯರ್ಥಿಗಳ ಬಸ್ ಪಾಸ್‌ಗೆ 1550 ರೂ.ಮತ್ತು 150 ರೂಪಾಯಿ, ಹಾಗೂ ಸಂಜೆ ಕಾಲೇಜ್/ಪಿಎಚ್‌ಡಿ ಅಭ್ಯರ್ಥಿಗಳ ಬಸ್‌ಪಾಸ್‌ಗೆ ಕ್ರಮವಾಗಿ 1350 ರೂ. ಮತ್ತು 150 ರೂಪಾಯಿ ದರ ನಿಗದಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರ ಬಸ್ ಕೌಂಟರ್‌ಗಳಲ್ಲಿ ವಿಚಾರಿಸುವಂತೆ NWKRTC ಪ್ರಕಟಣೆ ನೀಡಿದೆ..












Click it and Unblock the Notifications