ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಕೊರತೆ : ಬೀದಿ ದೀಪಕ್ಕೂ ಬಂತು ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 10 : ವಿದ್ಯುತ್ ಉಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರದ ಕಣ್ಣು ಬೀದಿ ದೀಪಗಳ ಮೇಲೆ ಬಿದ್ದಿದೆ. ತಡವಾಗಿ ಬೀದಿ ದೀಪಗಳನ್ನು ಆನ್ ಮಾಡಿ, ಬೇಗನೆ ಆರಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು. ಸಂಜೆ 7 ಗಂಟೆಗೆ ಬೀದಿ ದೀಪಗಳನ್ನು ಆನ್ ಮಾಡಿ, ಬೆಳಗ್ಗೆ 5 ಗಂಟೆಗೆ ಆಫ್ ಮಾಡಲಾಗುತ್ತದೆ. [ಬೆಂಗಳೂರಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್]

dk shivakumar

'ಕೆಲವು ನಗರಗಳಲ್ಲಿ ಸಂಜೆ 6 ಗಂಟೆಗೆ ಬೀದಿ ದೀಪಗಳನ್ನು ಹಾಕಲಾಗುತ್ತಿತ್ತು. ಇನ್ನು ಮುಂದೆ 7 ಗಂಟೆಗೆ ಆನ್ ಮಾಡಲು ಸೂಚನೆ ನೀಡಲಾಗಿದೆ. ಬೆಳಗ್ಗೆ 6 ಗಂಟೆ ಬದಲು 5 ಗಂಟೆಗೆ ಆರಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ' ಎಂದು ಸಚಿವರು ಹೇಳಿದರು. ['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!]

ಗಣೇಶನಿಗೂ ಪವರ್ ಇಲ್ಲ : ಈ ಬಾರಿ ವಿದ್ಯುತ್ ಕೊರತೆಯ ಬಿಸಿ ಗಣೇಶ ಚತುರ್ಥಿಗೂ ತಟ್ಟಲಿದೆ. ಗಣೇಶನನ್ನು ಕೂರಿಸುವವರು ನೇರವಾಗಿ ವಿದ್ಯುತ್‌ ಮಾರ್ಗದಿಂದಲೇ ಅಕ್ರಮವಾಗಿ ಸಂಪರ್ಕ ಪಡೆಯುತ್ತಿದ್ದರು. ಆದರೆ, ಈ ಬಾರಿ ಗಣೇಶ ಉತ್ಸವದ ಕಾರ್ಯಕ್ರಮಗಳಿಗೆ ಜನರೇಟರ್‌ಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. [ನಿಮ್ಮ ಏರಿಯಾದಲ್ಲಿ ಎಷ್ಟು ಗಂಟೆ ಪವರ್ ಕಟ್?]

ವಿವಿಧ ರೀತಿಯ ಸುಧಾರಣಾ ಕ್ರಮಗಳ ಮೂಲಕ ಕನಿಷ್ಠ 800 ಮೆಗಾವಾಟ್‌ ವಿದ್ಯುತ್‌ ಉಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ವಿವಿಧ ಮೂಲಗಳಿಂದ ವಿದ್ಯುತ್‌ ಖರೀದಿ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಡಿಸೆಂಬರ್‌ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯುತ್ ಹಂಚಿಕೆ : ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಿಕೆ ಮಾಡುವ ವಿದ್ಯುತ್ ಕುರಿತು ಸಚಿವರು ಮಾಹಿತಿ ನೀಡಿದರು. ಬೆಸ್ಕಾಂಗೆ 3,015 ಮೆಗಾವಾಟ್, ಹೆಸ್ಕಾಂಗೆ 1,235 ಮೆಗಾವಾಟ್, ಜೆಸ್ಕಾಂಗೆ 983 ಮೆಗಾವಾಟ್, ಮೆಸ್ಕಾಂಗೆ 513 ಮೆಗಾವಾಟ್ ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

English summary
Energy Minister D.K.Shivakumar said, we have directed all urban local bodies to save power by reducing the usage of street lights. ULBs have been asked to turn on the street lights at 7 pm instead of 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X