ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟರಿಗಳು ವಿವಾಹ ಪ್ರಮಾಣ ಪತ್ರ ನೀಡುವಂತಿಲ್ಲ

|
Google Oneindia Kannada News

ಬೆಂಗಳೂರು, ಜು. 15 : ನೋಟರಿಗಳು ನೀಡುವ ವಿವಾಹ ಘೋಷಣಾ ಪ್ರಮಾಣ ಪತ್ರ ಕಾನೂನಿನ ಮಾನ್ಯತೆ ಪಡೆದಿಲ್ಲ. ಇನ್ನು ಮುಂದೆ ಅವರು ಪ್ರಮಾಣ ಪತ್ರ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ನೀಡುವ ಪ್ರಮಾಣ ಪತ್ರ ಮಾತ್ರ ಮಾನ್ಯತೆ ಪಡೆದಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸೋಮವಾರ ಪಿ.ಮನೋಜ್‌ ಎಂಬುವವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ರವಿ ಮಳಲೀಮಠ್ ಅವರ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ. ಈ ಆದೇಶದ ಅನ್ವಯ ವಿವಾಹ ಘೋಷಣಾ ಪ್ರಮಾಣ ಪತ್ರ ವಿತರಿಸುವ ಅಧಿಕಾರ ನೋಟರಿಗಳಿಗೆ ಇಲ್ಲ ಮತ್ತು ಅವರ ಪ್ರಮಾಣ ಪತ್ರಗಳಿಗೆ ಕಾನೂನಿನ ಮಾನ್ಯತೆ ಇಲ್ಲ.

high court

ಸಬ್ ರಿಜಿಸ್ಟ್ರಾರ್ ಕಚೇರಿ ನೀಡುವ ವಿವಾಹ ಪ್ರಮಾಣ ಪತ್ರ ಮಾತ್ರ ಕಾನೂನಿನ ಮಾನ್ಯತೆ ಹೊಂದಿದೆ ಎಂದು ಆದೇಶದಲ್ಲಿ ಹೇಳಿರುವ ನ್ಯಾಯಪೀಠ, ಈ ಕುರಿತು ರಾಜ್ಯದ ಎಲ್ಲಾ ನೋಟರಿಗಳಿಗೆ ಸುತ್ತೋಲೆ ಹೊರಡಿಸುವಂತೆ ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಸಿಟಿ ಸಿವಿಲ್‌ ಕೋರ್ಟ್‌ ರಿಜಿಸ್ಟ್ರಾರ್‌ ಗೆ ನಿರ್ದೇಶನ ನೀಡಿದೆ. [ಆನ್ ಲೈನ್ ಮೂಲಕ ಮದುವೆ ನೋಂದಣಿ ಮಾಡಬಹುದು]

ಅರ್ಜಿಯ ವಿಚಾರಣೆ ವೇಳೆ ಪಿ.ಮನೋಜ್‌ ಮತ್ತು ಆರ್‌.ಕೃತಿಕಾ ನಡುವೆ ನಡೆದಿದೆ ಎನ್ನಲಾದ ವಿವಾಹವನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ದಂಪತಿಗಳಿಗೆ ಬೆಂಗಳೂರು ನಗರದ ನೋಟರಿಯೊಬ್ಬರು ನೀಡಿದ್ದ ವಿವಾಹ ಘೋಷಣಾ ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. [ಹೈಕೋರ್ಟ್‌ ಹಿರಿಯ ವಕೀಲರಾಗಿ 11 ಮಂದಿ ನೇಮಕ]

ವಿವಾಹ ರದ್ದುಗೊಳಿಸಿದ ಕೋರ್ಟ್ : ಬೆಂಗಳೂರಿನ ಪಿ.ಮನೋಜ್‌ ಎಂಬುವವರು ನಾಪತ್ತೆಯಾಗಿರುವ ಪತ್ನಿ ಆರ್‌.ಕೃತಿಕಾಳನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

2012ರ ಮೇ 9ರಂದು ನಗರದ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಮದುವೆಯಾಗಿದ್ದೇವೆ. ಸಿಟಿ ಸಿವಿಲ್‌ ಕೋರ್ಟ್‌ ನೋಟರಿಯೊಬ್ಬರು ತಮ್ಮ ವಿವಾಹ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪ್ರಮಾಣ ಪತ್ರವನ್ನೂ ಹಾಜರು ಪಡಿಸಿದ್ದರು. ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿರುವ ಕೋರ್ಟ್, ವಿವಾಹವನ್ನು ವಿಚಾರಣೆ ವೇಳೆ ರದ್ದುಗೊಳಿಸಿದೆ.

English summary
Only a marriage certificate issued by a sub-registrar’s office is legally valid, Karnataka High Court said on Monday. It directed the State Law Secretary and the Registrar of the City Civil Court to instruct notaries to stop issuing marriage certificates. A division bench of Justice K.L.Manjunath and Ravi Malimath passed the order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X