ಕಾಂಗ್ರೆಸ್ಸಿಗೆ ಈ ಘಟನೆ ಪಾಠವಾಗಬೇಕು ಎಂದ ಅಂಬರೀಶ್
ಬೆಂಗಳೂರು, ಜುಲೈ 10 : 'ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ವೈಯಕ್ತಿಕವಾಗಿ ಆಗಿರುವ ಅಸಮಾಧಾನವನ್ನು ಹೊರಹಾಕಿದ್ದೇನೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬುದು ಊಹಾಪೋಹ' ಎಂದು ವಸತಿ ಸಚಿವ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅಧಿವೇಶನ ಮುಗಿಯುವುದಕ್ಕೂ ಮೊದಲು ಬೆಂಗಳೂರಿಗೆ ಆಗಮಿಸಿದ್ದ ವಸತಿ ಸಚಿವ ಅಂಬರೀಶ್, ಜೆ.ಪಿ.ನಗರದ ನಿವಾಸದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದರು. [ಅಂಬರೀಶ್ ಬಂಡಾಯ ಶಮನ]
'ಬೆಳಗಾವಿ ಅಧಿವೇಶನ ಜು.10ಕ್ಕೆ ಮುಗಿಯುತ್ತದೆ. ನಾನು ಎರಡು ದಿನ ಮುಂಚಿತವಾಗಿ ಬೆಂಗಳೂರಿಗೆ ಆಗಮಿಸಿದ್ದೇನೆ ಅಷ್ಟೇ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ವೈಯಕ್ತಿಕವಾಗಿ ಆಗಿರುವ ಅಸಮಾಧಾನವನ್ನು ಪತ್ರದ ಮೂಲಕ ಹೊರಹಾಕಿದ್ದೇನೆ' ಎಂದು ಅಂಬರೀಶ್ ಹೇಳಿದರು.
'ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ನೇಮಕದ ಕುರಿತು ವೈಯಕ್ತಿಕವಾಗಿ ನನಗೆ ಅಸಮಾಧಾನವಾಗಿದೆ. ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿದಾಗಲೂ ಇದನ್ನು ತಿಳಿಸಿರುವೆ. ಆಗಿರುವ ಲೋಪವನ್ನು ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ, ಸೋಮವಾರದ ವೇಳೆಗೆ ನಾನು ಹೇಳಿದವರು ಅಪೆಕ್ಸ್ ಬ್ಯಾಂಕ್‌ಗೆ ನೇಮಕವಾಗಬಹುದು' ಎಂಬ ವಿಶ್ವಾಸವಿದೆ ಎಂದು ಅಂಬರೀಶ್ ಹೇಳಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ
'ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ವೈಯಕ್ತಿಕವಾಗಿ ಆಗಿರುವ ಅಸಮಾಧಾನವನ್ನು ಹೊರಹಾಕಿದ್ದೇನೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬುದು ಊಹಾಪೋಹ' ಎಂದು ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಸ್ಪಷ್ಟಪಡಿಸಿದರು.

ಅಸಮಾಧಾನ ಸರಿಪಡಿಸುವ ಭರವಸೆ ಇದೆ
'ಮಂಡ್ಯ ಜಿಲ್ಲೆಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ನೇಮಕದ ಕುರಿತು ವೈಯಕ್ತಿಕವಾಗಿ ಅಸಮಾಧಾನವಾಗಿದೆ. ಅದನ್ನು ಪತ್ರದ ಮೂಲಕ ಬಹಿರಂಗಪಡಿಸಿದ್ದೇನೆ.ಆಗಿರುವ ಲೋಪವನ್ನು ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ, ಸೋಮವಾರದ ವೇಳೆಗೆ ನಾನು ಹೇಳಿದವರು ಅಪೆಕ್ಸ್ ಬ್ಯಾಂಕ್‌ಗೆ ನೇಮಕವಾಗಬಹುದು' ಎಂಬ ವಿಶ್ವಾಸ ವಿದೆ.

ಮಂಡ್ಯದಲ್ಲಿ ರಾಜಕಾರಣ ಮಾಡುವುದು ಕಷ್ಟವಾಗಿದೆ
'ಅಮರಾವತಿ ಚಂದ್ರಶೇಖರ್ ಅವರ ತಮ್ಮನನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂದುಕೊಂಡೆ. ಆದರೆ, ಅದು ಆಗಲಿಲ್ಲ. ಅಪೆಕ್ಸ್ ಬ್ಯಾಂಕ್ ನಾಮ ನಿರ್ದೇಶನ ಮಾಡಬೇಕು ಎಂದರೆ ಅದೂ ಸಾಧ್ಯವಾಗಲಿಲ್ಲ. ಇದರಿಂದ ಮಂಡ್ಯದಲ್ಲಿ ರಾಜಕಾರಣ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ಪತ್ರ ಬರೆದು ವಿಚಾರವನ್ನು ತಿಳಿಸಿದೆ'. ಎಂದು ಅಂಬರೀಶ್ ಹೇಳಿದರು.

ಯಾವ ಮಠಕ್ಕೂ ಭೇಟಿ ಕೊಡುವುದಿಲ್ಲ
'ಬೆಳಗಾವಿ ಅಧಿವೇಶನ ಮುಗಿಯುವುದಕ್ಕೆ 2 ದಿನ ಮೊದಲು ಬೆಂಗಳೂರಿಗೆ ಬಂದಿದ್ದೇನೆ, ನಾನು ಯಾವ ಮಠಕ್ಕೂ ಹೋಗುವುದಿಲ್ಲ, ಅಂಬರೀಶ್ ಮಠಕ್ಕೆ ಹೋಗುತ್ತಾರೆ ಎಂದು ಹೇಳಿದವರು ಕಾಂಗ್ರೆಸ್ ಪಕ್ಷದ ನಾಯಕರಲ್ಲ. ನನ್ನ ಅಸಮಾಧಾನದ ಕುರಿತು ಕೆಪಿಸಿಸಿ ಅಧ್ಯಕ್ಷರ ಜೊತೆಯೂ ಮಾತುಕತೆ ನಡೆಸಿಲ್ಲ ಎಂದು ಅಂಬರೀಶ್ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರ ಜೊತೆ ಭಿನ್ನಾಭಿಪ್ರಾಯವಿಲ್ಲ
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ ಅಂಬರೀಶ್ ಸ್ಪಷ್ಟಪಡಿಸಿದರು. ನಾವಿಬ್ಬರೂ ಹಳೆಯ ಕಾಲದ ಸ್ನೇಹಿತರು. ಮಂಡ್ಯ ಜಿಲ್ಲೆಯ ಜನ ಸಹ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ ಎಂದು ಅಂಬರೀಶ್ ಹೇಳಿದರು.

ಜಿಲ್ಲೆಯ ಎಲ್ಲಾ ನೇಮಕದಲ್ಲೂ ಹಿನ್ನಡೆಯಾಗಿದೆ
'ನಿಗಮ-ಮಂಡಳಿ, ಕೆಎಂಎಫ್, ಡಿಸಿಸಿ ಬ್ಯಾಂಕ್ ಹೀಗೆ ಮಂಡ್ಯ ಜಿಲ್ಲೆಯ ಎಲ್ಲಾ ನೇಮಕದಲ್ಲಿಯೂ ನನಗೆ ಹಿನ್ನಡೆಯಾಗಿದೆ. ಅಂಬರೀಶ್‌ಗಾಗಿ ಕೆಲವು ಮುಖಂಡರು, ಸ್ನೇಹಿತರು, ಆಪ್ತರು, ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರಿಗೆ ಅವಕಾಶ ಮಾಡಿಕೊಡಬೇಕು. ನಂಬಿದವರಿಗೆ ಅವಕಾಶ ಕೊಡಬೇಕು ಎಂಬುದು ನನ್ನ ತತ್ವ' ಎಂದು ಅಂಬರೀಶ್ ಹೇಳಿದರು.

ಸೋಮವಾರದೊಳಗೆ ಈಡೇರಿಸುವ ಭರವಸೆ
'ಮಂಡ್ಯ ಜಿಲ್ಲೆಯ ನೇಮಕಾತಿಗಳಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಸಚಿವ ಮಹಾದೇವಪ್ರಸಾದ್ ಅವರಿಗೆ ಸೂಚನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಂತಹ ವಿಷಯಗಳನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬಹುದಿತ್ತು ಎನ್ನುತ್ತಾರೆ. ಆದರೆ, ಕಾರ್ಯಕರ್ತರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ ಇದು ಪಕ್ಷಕ್ಕೂ ಪಾಠವಾಗಬೇಕು. ಆದ್ದರಿಂದ ಬಹಿರಂಗವಾಗಿ ಹೇಳಿಕೊಂಡಿದ್ದೇನೆ' ಎಂದರು.












Click it and Unblock the Notifications