ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#IBPSMosa: ಕನ್ನಡಿಗರಿಗಿಲ್ಲದ ಆದ್ಯತೆ ಕುರಿತು ಟ್ವಿಟ್ಟಿಗರ ಆಕ್ರೋಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಇದೀಗ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದಿವೆ.

ಬ್ಯಾಂಕಿಂಗ್ ಕೆಲಸಗಳಿಗೆ ಸಿಬ್ಬಂದಿ ಆಯ್ಕೆಗಾಗಿ ಸೆ.9 , ಶನಿವಾರದಂದು ನಡೆದ ಪರೀಕ್ಷೆಯ ಸಮಯದಲ್ಲಿ ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಪರೀಕ್ಷೆ ಬರೆಯುವುದಕ್ಕೆಂದು ಬಂದ ಸದಸ್ಯರುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಬ್ಯಾಂಕ್ ಪರೀಕ್ಷಾ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನಬ್ಯಾಂಕ್ ಪರೀಕ್ಷಾ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನ

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆಸಂಸ್ಥೆ (IBPS) ಸಿಬ್ಬಂದಿ ಆಯ್ಕೆಯಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಇದೀಗ ಟ್ವಿಟ್ಟರ್ ನಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. #IBPSMosa ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಇದೀಗ ಟ್ವಿಟ್ಟರ್ ನಲ್ಲಿ ಹಲವರು ಟ್ವೀಟ್ ಮಂಆಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾತಕದಲ್ಲೇ ಸಾಕಷ್ಟು ವಿದ್ಯಾವಂತ ನಿರುದ್ಯೋಗಿಗಳಿರುವಾಗ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಎದ್ದಿದೆ.

ತೆಲಗು ಕ್ಲರ್ಕ್ ಗಳೇಕೆ?

ಕರ್ನಾಟಕದ ಗ್ರಾಮೀಣ ಪ್ರದೇಶದ ಬ್ಯಾಂಕ್ ಗಳಲ್ಲೂ ತೆಲಗು ಕ್ಲರ್ಕ್ ಗಳನ್ನೇ ನೇಮಕಮಾಡಿಕೊಳ್ಳಲಾಗಿದೆ. ಈ ಕೆಲಸಗಳನ್ನು ಕನ್ನಡಿಗರಿಗೇ ನೀಡಬಹುದಿತ್ತಲ್ಲವೇ? ಎಂದು ಗಣೇಶ್ ಚೇತನ್ ಟ್ವೀಟ್ ಮಾಡಿದ್ದಾರೆ.

ಬಾಯಿತೆರೆಯದ ಸಂಸದರು

ನಮ್ಮ ಸಂಸದರುಗಳು ಸಂಸತ್ತಿನ ಅಲಂಕಾರಿಕ ಮೂರ್ತಿಗಳು ಅನ್ನಿಸುತ್ತೆ! ಈ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದ್ದರೂ ಅವರೆಂದಿಗೂ ಬಾಯಿತೆರೆಯಲಾರರು ಎಂದು ವೀರೇಶ್ ಹಳಮನಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಛತ್ರಾನಾ?

ಆಂಧ್ರ ಪ್ರದೇಶದ ಜನರು ಕರ್ನಾಟಕದಲ್ಲಿ ಉದ್ಯೋಗ ಪಡೆಯಲಿ ಅಂತ ಆಂದ್ರ ರಾಜಕಾರಣಿಗಳು ಬಯಸುತ್ತಾರೆ! ಕರ್ನಾಟಕ ಅಂದ್ರೆ ಛತ್ರಾನಾ ಎಂದು ಅರುಣ ಜಾವಗಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯೇಕೆ 'ದೆಹಲಿ ಚಲೋ' ನಡೆಸುತ್ತಿಲ್ಲ!

ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ತಡೆಯಲು ಬಿಜೆಪಿ ಯವರೇಕೆ 'ದೆಹಲಿ ಚಲೋ' ಚಳವಳಿ ಮಾಡುತ್ತಿಲ್ಲ? ಎಂದು ರಾಮಚಂದ್ರ ಎಂ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆ ಮಾಡಿ

ಸರ್ಕಾರ ಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆಯುವಂತೆ ಕಡ್ಡಾಯ ಆದೇಶ ಹೊರಡಿಸಬೇಕು ಎಮದು ಹರೀಶ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪರೀಕ್ಷೆ ಕನ್ನಡದಲ್ಲೇ ನಡೆಯಲಿ

ಎಲ್ಲಾ ಬ್ಯಾಂಕ್ ಪರೀಕ್ಷೆಗಳು ಕನ್ನಡದಲ್ಲಿ ಸಹ ನಡೆಯಬೇಕು. ಕನ್ನಡ ಮಾಧ್ಯಮದಲ್ಲೇ ಓದಿದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಲೋಹಿತ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Kannadaigas having scunner against IBPS'(Institute of Banking Personnel Selection) step to not giving priority to kannadigas in Banking sector in Karnataka. #IBPSMosa a hashtag to condemn ABPS' decision is trending in twitter now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X