Kannada Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗೂ ನಾನ್‌ವೆಜ್, ನೂಕುನುಗ್ಗಲು!
Kannada Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಗೂ ನಾನ್‌ವೆಜ್ ಊಟ ಬಡಿಸಲಾಗಿದ್ದು, ನಾನ್‌ವೆಜ್‌ಗಾಗಿ ಭಾರೀ ನೂಕು ನುಗ್ಗಲು ಆಗಿದೆ. ಮಂಡ್ಯದಲ್ಲಿ ಈ ಬಾರಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಈ ಬಾರಿ ಬಾಡೂಟ ವಿಚಾರದಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಸಮ್ಮೇಳನದ ಆಯೋಜಕರು ಸಮ್ಮೇಳನದ ಸಂದರ್ಭದಲ್ಲಿ ನಾನ್‌ವೆಬ್ ತರಬಾರದು ಅಥವಾ ನಿರ್ಬಂಧ ಎನ್ನುವ ಪದವನ್ನು ಬಳಸಿದ್ದೇ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲಿಂದ ಇದೀಗ ಸಮ್ಮೇಳನ ಮುಗಿಯುವ ಹಂತಕ್ಕೆ ಬಂದರೂ ನಾನ್‌ವೆಜ್ ವಿಷಯ ಚರ್ಚೆಯಾಗುವುದು ಕಡಿಮೆಯಾಗಿಲ್ಲ. ಕೊನೆಗೂ ಕನ್ನಡ ಸಾಹಿತ್ಯ ಸಮ್ಮೇಳನ ನಾನ್‌ವೆಜ್ ಊಟ ಬಡಿಸಲಾಗಿದೆ. ಆದರೆ, ಸಾಹಿತ್ಯ ಸಮ್ಮೇಳನದ ಆಯೋಜಕರಿಂದ ಇದು ಆಗಿಲ್ಲ. ಪ್ರಗತಿಪರರೇ ಸೇರಿ ಮಾಡಿದ್ದಾರೆ.
ಹೌದು, ಈ ಬಾರಿ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗುವ ಒಂದು ತಿಂಗಳ ಮುಂಚಿನಿಂದಲೂ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಇರಬೇಕು ಎನ್ನುವ ಆಗ್ರಹವನ್ನು ಕೆಲವರು ಮಾಡುತ್ತಿದ್ದರು. ಇದೀಗ ಭಾನುವಾರ ಕೆಲವು ಪ್ರಗತಿಪರರೇ ಸೇರಿ ಬಾಡೂಟ ಹಂಚಿದ್ದಾರೆ. ಇದಕ್ಕೆ ಪೊಲೀಸರು ತಡೆದಿದ್ದರೂ, ಅಲ್ಲದೇ ಪೊಲೀಸರ ವಿರೋಧದ ನಡುವೆಯೂ ಸಮ್ಮೇಳನದಲ್ಲಿ ಬಾಡೂಟ ಹಂಚಲಾಗಿದೆ. ಬಾಡೂಟದ ಜಟಾಪಟಿ ಕೊನೆಗೂ ಅಂತ್ಯವಾದಂತೆ ಆಗಿದೆ. ಮಂಡ್ಯ ಜಿಲ್ಲೆಯೇ ಬಾಡೂಟಕ್ಕೆ ಫೇಮಸ್ ಆಗಿದೆ. ನಾವು ಬಾಡೂಟ ಕೊಡುವ ಮೂಲಕ ಅತಿಥಿಗಳ ಸತ್ಕಾರ ಮಾಡಬೇಕಿದೆ. ಹೀಗಾಗಿ, ವೆಜ್ ಜೊತೆಗೆ ನಾನ್ ವೆಜ್ ಕೂಡ ಇರಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದರು.

ಕನ್ನಡ ಸಾಹಿತ್ಯ ಸಮ್ಮೆಳೆನದ ಹಿನ್ನೆಲೆ ಸಮ್ಮೇಳನದಲ್ಲಿ ನಾನ್‌ವೆಜ್ ಮಾಡಿಸಬೇಕು ಅಂತ ಜಟಾಪಟಿ ಜೋರಾಗಿದೆ. ಇಂದು ಸಹ ಬಾಡೂಟಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿತ್ತು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು. ಇನ್ನು ಭಾನುವಾರ ಹಲವು ಪ್ರಗತಿಪರರು ಸೇರಿ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದವರಿಗೆ ಮೊಟ್ಟೆ, ಚಿಕನ್,ನಾನ್‌ವೆಜ್ ಹಾಗೂ ಮುದ್ದೆ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರವೂ ಸಹ ನಾನ್‌ವೆಜ್‌ಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಭಾನುವಾರ ಮಧ್ಯಾಹ್ನದಿಂದಲೇ ಬೇಳೆಯ ಜೊತೆಗೆ ಮೂಳೆ ಬೇಕು, ಕೊಸಂಬರಿ ಜೊತೆ ಎಗ್ಬುರ್ಜಿ ಇರಲಿ, ಹಪ್ಪಳದ ಜೊತೆ ಕಬಾಬ್ ಬೇಕು. ಚಿಕನ್ ಚಾಪ್ಸ್, ಮಟನ್ ಕುರ್ಮಾ ಹಾಗೂ ನಾಟಿಕೋಳಿ ಸಾರು ಹಾಗೂ ಮಟನ್ ಬೇಕೇ ಬೇಕು ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದರು. ಮಧ್ಯಾಹ್ನ ಎಷ್ಟರ ಮಟ್ಟಿಗೆ ಪ್ರತಿಭಟನೆ ಇತ್ತು ಎಂದರೆ, ಒಂದೊಮ್ಮೆ ನಾನ್‌ವೆಜ್ ಕೊಡಲಿಲ್ಲ ಎಂದಾದರೆ, ನಾವೇ ಬಾಡೂಟ ಹಾಕಿಸುತ್ತೇವೆ ಎಂದೂ ಹೇಳಿದ್ದರು. ಮಧ್ಯಾಹ್ನ ಹಾಗೂ ಸಂಜೆಯ ವೇಳೆಗೆ ಇದು ಯಶಸ್ವಿಯೂ ಆಯಿತು.
ಭಾನುವಾರ ಬೆಳಿಗ್ಗೆಯೇ ಪ್ರಗತಿಪರರು ಹಾಗೂ ಹೋರಾಟಗಾರರು ನಾನ್‌ವೆಜ್ ಹಾಕಿಸದೆ ಇದ್ದರೆ ನಾವೇ ನಾನ್‌ವೆಜ್ ಹಾಕಿಸ್ತೀವಿ ಅಂತಲೂ ಹೇಳಿದ್ದರು. ಅದರಂತೆ ನಾನ್‌ವೆಜ್ ಹಾಕಿಸಲಾಗಿದೆ. ಇನ್ನು ಪ್ರತಿಭಟನೆ ಮಾಡುವಾಗಲೇ ನಾವೇ ಮನೆ ಮನೆಗೆ ಹೋಗಿ ಕೋಳಿ ಸಂಗ್ರಹ ಮಾಡ್ತೀವಿ ಎಂದು ಪ್ರತಿಭಟನಾ ನಿರತರರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು. ಸಮಾನ ಮನಸ್ಕ ವೇದಿಕೆ ಸಹ ಇದೇ ಎಚ್ಚರಿಕೆಯನ್ನು ಕೊಟ್ಟಿತ್ತು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications