ಹೈಕೋರ್ಟ್ ತೀರ್ಪು: ಪರ ರಾಜ್ಯದ ವಾಹನಗಳಿಗೆ ಜೀವಮಾನ ತೆರಿಗೆ ಇಲ್ಲ

Subscribe to Oneindia Kannada

ಬೆಂಗಳೂರು, ಮಾರ್ಚ್, 11: ದೇಶದೆಲ್ಲೆಡೆ ಏಕರೂಪದ ವಾಹನ ತೆರಿಗೆ ಪದ್ಧತಿ ಜಾರಿಯಾಗಬೇಕು ಎಂದು ಹೋರಾಟ ನಡೆಸುತ್ತಿದ್ದ ಸಂಸ್ಥೆಗೆ ಆರಂಭಿಕ ಜಯ ಸಿಕ್ಕಿದೆ. "ಡ್ರೈವ್ ವಿತ್ ಔಟ್ ಬಾರ್ಡರ್ಸ್" ಫೇಸ್ ಬುಕ್ ನಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಯಶಸ್ಸು ದಕ್ಕಿದೆ.

ಕರ್ನಾಟಕ ರಾಜ್ಯದಲ್ಲಿ 30 ದಿನಕ್ಕೂ ಅಧಿಕ ಕಾಲ ಉಳಿಯುವ ಹೊರ ರಾಜ್ಯದ ಕಾರು, ಬೈಕ್‌ನಂತಹ ಸ್ವಂತ ಬಳಕೆಯ ವಾಹನಗಳು (ಬಿಳಿಯ ಬೋರ್ಡು) ಜೀವಮಾನ ತೆರಿಗೆ ಪಾವತಿಸಬೇಕು ಎಂದು ಕರ್ನಾಟಕ ಸರ್ಕಾರ ರೂಪಿಸಿದ್ದ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ (ತಿದ್ದುಪಡಿ)-2014 ನ್ನು ಅಸಂವಿಧಾನಿಕ ಎಂದು ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ. ಇದರ ಪರಿಣಾಮ ಹೊರ ರಾಜ್ಯದ ವಾಹನಗಳು ಕರ್ನಾಟಕದಲ್ಲಿ ಮುಕ್ತವಾಗಿ ಸಂಚರಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.[ಜಯನಗರದಲ್ಲಿದೆ ಶಿವನ ಪಾದ ಸೇರಲು ಶಾರ್ಟ್‌ಕಟ್!]

Non-Karnataka vehicles not needed to pay tax, says HC

ಕರ್ನಾಟಕದಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಸಂಚರಿಸುತ್ತಿದ್ದ ವಾಹನಗಳ ಮಾಲೀಕರಿಗೆ ಜೀವಮಾನ ತೆರಿಗೆ ಪಾವತಿಸುವಂತೆ ಸಾರಿಗೆ ಇಲಾಖೆ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಕೇರಳದ ಉದ್ಯೋಗಿ ಅನಂತು ಕರಟ್ಟುಪಾರಂಬಿಲ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಗುರುವಾರ ತಮ್ಮ ತೀರ್ಪನ್ನು ನೀಡಿದ್ದಾರೆ.[ಫೇಸ್ ಬುಕ್ ಮುಖಾಮುಖಿ : ಗಾಂಚಾಲಿ ಬಿಡಿ, ಕರ್ನಾಟಕ ರಸ್ತೆ ತೆರಿಗೆ ಕಟ್ಟಿ]

ವಾಹನ ಖರೀದಿ ಮತ್ತು ನೋಂದಣಿ ವೇಳೆಯೇ ಮಾಲೀಕರು ಜೀವಮಾನ ತೆರಿಗೆ ಪಾವತಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಉಳಿದ ಕಾರಣಕ್ಕೆ ಇಲ್ಲಿನ ಸರ್ಕಾರಕ್ಕೆ ಮತ್ತೆ ಜೀವಮಾನ ತೆರಿಗೆ ಪಾವತಿಸಲು ಸಾಧ್ಯವಿಲ್ಲ. ಇದು ನಿಜಕ್ಕೂ ಹೇರಿಕೆಯ ಕಾನೂನಾಗುತ್ತದೆ ಎಂದು ಹೈ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಅಲ್ಲದೆ, ಇಂತಹ ನಿಯಮ ರೂಪಿಸಲು ರಾಜ್ಯ ಸರ್ಕಾರಕ್ಕೆ ಶಾಸನಾತ್ಮಕ ಅಧಿಕಾರ ಇಲ್ಲ. ಕೇವಲ ತೆರಿಗೆ ಸಂಗ್ರಹ ಉದ್ದೇಶದಿಂದ ಈ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮದಿಂದ ವಾಹನದಾರರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಹೀಗಾಗಿ, ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ನ್ಯಾಯಪೀಠ ಆದೇಶಿಸಿದೆ. [ಹಳೇ ವಾಹನ ಮಾರ್ತೀರಾ? ಈ ಅಂಶ ಗಮನದಲ್ಲಿರಲಿ]

ಉದ್ಯೋಗ, ತರಬೇತಿ ಹಾಗೂ ಶಿಕ್ಷಣದ ಉದ್ದೇಶದಿಂದ ಕರ್ನಾಟಕದಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಉಳಿಯುವ ಹೊರ ರಾಜ್ಯದ ವಾಹನದಾರರಿಗೆ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಆರ್ ಟಿಒ ಅಧಿಕಾರಿಗಳು ನೋಟಿಸ್ ಸಹ ನೀಡುತ್ತಿದ್ದರು. ಆದರೆ ಈಗ ಎಲ್ಲ ಸಮಸ್ಯೆಗಳು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಂಡಿವೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ]

ಡ್ರೈವ್ ವಿತ್ ಔಟ್ ಬಾರ್ಡರ್ಸ್: ತಮ್ಮ 1942ರ ಮಾಡೆಲ್ ಜೀಪ್ ವೊಂದಕ್ಕೆ ಸಾರಿಗೆ ಇಲಾಖೆಯಿಂದ ನೋಟಿಸ್ ಪಡೆದುಕೊಂಡ ನಂತರ ವಾಸೀಮ್ ಎಂಬುವರು ಡ್ರೈವ್ ವಿತ್ ಔಟ್ ಬಾರ್ಡರ್ಸ್ ಎಂಬ ಅಭಿಯಾನ ಆರಂಭ ಮಾಡಿದ್ದರು. ಸಾಮಾಜಿಕ ತಾಣಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆಸದಿತ್ತು. ಸಹಿ ಸಂಗ್ರಹ ಅಭಿಯಾನವನ್ನು ವಾಸೀಮ್ ಮಾಡಿದ್ದು ಇದಿಗ ಆರಂಭಿಕ ಜಯ ಪಡೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Drive Without Borders", a Facebook group have won their two-year battle against the clause in the Karnataka Motor Vehicles Act mandating payment of lifetime road tax within 30 days. Karnataka High Court has on Thursday declared the Karnataka Motor Vehicle Taxation (Amendment) Act 2014, which calls for collecting life-time tax on vehicles registered outside the state as unconstitutional.
Please Wait while comments are loading...