ಪಿಎಸ್‌ಐ ರೇವತಿ ವಿರುದ್ಧ ಜಾಮೀನು ರಹಿತ ವಾರೆಂಟ್

Posted By:
Subscribe to Oneindia Kannada

ಉತ್ತರ ಕನ್ನಡ, ಸೆಪ್ಟೆಂಬರ್ 02 : ಕಳೆದ ವಾರ ಅಮಾನತುಗೊಂಡಿರುವ ಭಟ್ಕಳ ಪಿಎಸ್‌ಐ ರೇವತಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ರೇವತಿ ಅವರು ವಿಚಾರಣೆಗೆ ಗೈರು ಹಾಜರಾದ ಕಾರಣ ಅವರ ವಿರುದ್ಧ ವಾರೆಂಟ್ ಜಾರಿಗೊಳಿಸಲಾಗಿದೆ.

ಕಾರವಾರದ ಸೆಷನ್ಸ್ ನ್ಯಾಯಾಲಯ ಶುಕ್ರವಾರ ರೇವತಿ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ. 2012ರಲ್ಲಿ ಭಟ್ಕಳದ ಡಿವೈಎಸ್‌ಪಿಯಾಗಿದ್ದ ನಾರಾಯಣ್ ಅವರು ರೇವತಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.[ಭಟ್ಕಳ PSI ರಾಜೀನಾಮೆ]

Non bailable warrant against PSI Revathi

ರೇವತಿ ಅವರು ಈ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್‌ ಅವರ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿತ್ತು. ಪ್ರಕರಣದ ವಿಚಾರಣೆಗೂ ಅವರು ಗೈರು ಹಾಜರಾಗಿದ್ದರು. ಆದ್ದರಿಂದ, ವಾರೆಂಟ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.[ಬಳ್ಳಾರಿ ಎಸ್ ಐ ಗಾಯತ್ರಿ ಫೇಸ್ ಬುಕ್ ನಲ್ಲಿ ಬರೆದಿದ್ದೇನು?]

ಭಟ್ಕಳದ ಉದ್ಯಮಿಯೊಬ್ಬರು ನೀಡಿದ್ದ ಜೀವ ಬೆದರಿಕೆ ದೂರುನ್ನು ದಾಖಲಿಸಿಕೊಳ್ಳದ ಆರೋಪದ ರೇವತಿ ಅವರ ಮೇಲಿತ್ತು. ಕರ್ತವ್ಯ ಲೋಪದ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲಾಗಿತ್ತು.

ಮೇಲಾಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ರೇವತಿ ಅವರು ಆಗಸ್ಟ್ ಅಂತ್ಯದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karwar session court has issued non-bailable warrant against PSI Revathi who submitted her resignation on Saturday August 28, 2016 protesting against the harassment from senior police official.
Please Wait while comments are loading...