ರಾಜ್ಯದಲ್ಲಿ ಝಿಕಾ ವೈರಸ್ ಆತಂಕ; ಬಾಣಂತಿಯರು ಎಚ್ಚರಿಕೆಯಿಂದಿರಿ: ಆರೋಗ್ಯ ಸಚಿವರು ಹೇಳಿದ್ದೇನು?

ಬೆಂಗಳೂರು, ನವೆಂಬರ್‌ 02: ಕೋವಿಡ್ ವೈರಸ್‌ನಿಂದ ಭಾರತ ಸೇರಿದಂತೆ ಇಡೀ ವಿಶ್ವವೇ ನರಳಾಡಿತ್ತು. ಕೊರೋನಾ ಸೋಂಕಿನಿಂದ ನಿಟ್ಟೂಸಿರು ಬಿಟ್ಟ ಜನತೆಗೆ ಇದೀಗ ಝಿಕಾ ವೈರಸ್‌ ಆತಂತ ಹೆಚ್ಚಾಗಿದೆ.

ಈ ಕುರಿತು ಗುರುವಾರ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದು, ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪಾಟಿಸಿವ್ ಆಗಿರುವುದು ಪತ್ತೆಯಾಗಿಲ್ಲ. ಆದರೂ ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

No Zika Virus Positive Detected In State Says Dinesh Gundurao

ಮನುಷ್ಯರಲ್ಲಿ ಝಿಕಾ ಪಾಸಿಟಿವ್ ಬಂದಿಲ್ಲ. ಸೊಳ್ಳೆಗಳಿಗೆ ಬಂದಿದೆ, ಸೊಳ್ಳೆಗಳ ಪೂಲ್ ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಬಗ್ಗೆ 10 ದಿನಗಳ ಹಿಂದೆ ವರದಿ ಬಂದಿದೆ. ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಝಿಕಾ ಮತ್ತು ನಿಫಾ ವೈರಸ್ ಬೇರೆ ಬೇರೆಯಾಗಿವೆ. ನಿಫಾ ಗಂಭೀರ ಸ್ವರೂಪದ ವೈರಾಣು ಆದರೆ ಝಿಕಾ ಬಗ್ಗೆ ಭಯ ಬೇಡ. ಆದರೂ ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು ಎಂದರು.

ವೈರಲ್ ಆತಂಕದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಮಾಡಿರುವುದಕ್ಕೆ ಈಗ ವೈರಸ್ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಖಾಯಿಲೆ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಇನ್ನು 3 ದಿನಗಳಲ್ಲಿ ರಿಪೋರ್ಟ್ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಮನುಷ್ಯರಿಗೆ ಇದುವರೆಗೆ ಜೀಕಾ ಪಾಸಿಟಿವ್ ಬಂದಿಲ್ಲ. ಸೊಳ್ಳೆಗಳಿಗೆ ಬಂದಿದೆ, ಸೊಳ್ಳೆಗಳ ಪೂಲ್ ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.10 ದಿನಗಳ ಹಿಂದೆ ಈ‌ ರಿಪೋರ್ಟ್ ಬಂದಿದೆ..ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಜೀಕಾ ಮತ್ತು ನಿಫಾ ವೈರಸ್ ಬೇರೆ ಬೇರೆಯಾಗಿವೆ. ನಿಫಾ ಗಂಭೀರ ವೈರಾಣು. ಜೀಕಾ ಬಗ್ಗೆ ಭಯ ಬೇಡ. ಆಸ್ಪತ್ರೆಯಲ್ಲಿ ಇದ್ದವರಿಗೆ ಈಗಾಗಲೇ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ 3 ದಿನಗಳಲ್ಲಿ ರಿಪೋರ್ಟ್ ಬರುವ ಸಾಧ್ಯತೆ ಇದೆ. ಇಲಾಖೆಯಿಂದ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಮಾಡಿರುವುದಕ್ಕೆ ಈಗ ವೈರಸ್ ಪತ್ತೆಯಾಗಿದೆ ಅಂತ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಈ ವಿಚಾರ ಸಂಬಂಧ ಒಂದಷ್ಟು ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ನಲ್ಲಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ಝೀಕಾ ಸೊಳ್ಳೆಯಲ್ಲಿ ವೈರಸ್ ಪತ್ತೆ ಬೆನ್ನಲ್ಲೆ ರಾಜ್ಯಾದ್ಯಂತ ಝೀಕಾ ವೈರಸ್ ಪತ್ತೆಗಾಗಿ ಸ್ಯಾಂಪಲ್ಸ್ ಟೆಸ್ಟ್ ಮಾಡಲಿದ್ದೇವೆ. ಹೊಸದಾಗಿ ಶೀಘ್ರದಲ್ಲಿ ಇದಕ್ಕಾಗಿ ಗೈಡ್ ಲೈನ್ಸ್ ಹೊರಡಿಸಲಿದ್ದೇವೆ. ಅಂತ ತಿಳಿಸಿದರು.

ಚಿಕ್ಕಬಳ್ಳಾಪುರದ ಮೂರು ಭಾಗದಲ್ಲಿ ಒಂದು ಸೊಳ್ಳೆಯ ಪೂಲ್ ನಲ್ಲಿ ಝೀಕಾ ಪತ್ತೆಯಾಗಿದೆ. ಮೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಇನ್ನೂ ಜ್ವರ ಬಂದವರ ಸ್ಯಾಂಪಲ್ಸ್ ಗಳನ್ನು ಈಗಾಗಲೇ ಪುಣೆಗೆ ಕಳಿಸಿದ್ದಾರೆ. ಎರಡು ಸಾವಿರ ಮನೆಗಳಲ್ಲಿ ಫೀವರ್ ಸ್ಯಾಂಪಲ್ಸ್ ಕಳಿಸಲಾಗಿದೆ.ಸ್ವಚ್ಛವಾದ ನೀರು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಡೆಂಘಿ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌ ಆದ್ರೇ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿ‌ನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಯನ್ನು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+