Pratap Simha Video: ಸಿದ್ದರಾಮಯ್ಯ, ಮೈನಿಂಗ್ ಲಾಡ್, ಪ್ರಿಯಾಂಕ್ ಖರ್ಗೆ ಜತೆ ಸಂಬಂಧ ಬೆಳೆಸ್ತಿಲ್ಲ: ಸಿಂಹ ಘರ್ಜನೆ
ಬೆಂಗಳೂರು, ಜೂನ್ 23: ಸದಾ ನೇರ ನಡೆ, ನುಡಿಯಿಂದ ಸದ್ದು ಮಾಡುವ ಬಿಜೆಪಿ ಮಾಜಿ ಸಂಸದ, ಹಿಂದೂಪರ ನಿಲುವು ಹೊಂದಿರುವ ನಾಯಕ ಪ್ರತಾಪ್ ಸಿಂಹ ಅವರು ಆಡಳಿತ ಪಕ್ಷದ ನಾಯಕರ ವಿರುದ್ಧ ಘರ್ಜಿಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ನೀಡುವ ಹೇಳಿಕೆ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಅವರು ಏಕವಚನದಲ್ಲಿಯೇ 'ಕೈ' ನಾಯಕರ ಮೇಲೆ ಕಿಡಿ ಕಾರಿದ್ದಾರೆ. ಇವರಿಗೆಲ್ಲ ನಾನೇಕೆ ಹೆದರಬೇಕು ಎಂದಿದ್ದಾರೆ. ಕುಟುಂಬ ರಾಜಕಾರಣ, ಅಭಿವೃದ್ಧಿ, ಟೀಕೆ, ಹೆದರಿಕೆ ಬಗ್ಗೆ ಹೇಳಿದ ಅವರ ಸಂದರ್ಶನದ ತುಣುಕುಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ.
ನನ್ನ ದೇಶದ ನನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಇವರು ಗೌರವ ಕೊಡದಿದ್ದರೆ, ನಾನ್ಯಾಕೆ 'ಇವರಿಗೆ ಗೌರವ ಕೊಡಬೇಕು'?, ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. 'ಇವರಿಗೆ ನಾನು ಕೇರ್ ಮಾಡಲ್ಲ, ಗೌರವ ಕೊಡಲ್ಲ..'. ಎಂದಿದ್ದಾರೆ. ಇತ್ತೀಚೆಗೆ ಯೂಟ್ಯೂಬರ್ ರ್ಯಾಪಿಡ್ ರಶ್ಮಿ ಅವರು ಪ್ರತಾಪ್ ಸಿಂಹ ಅವರನ್ನು ಸಂದರ್ಶನ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಅವರ ಖಡಕ್ ಮಾತುಗಳು ಹರಿದಾಡುತ್ತಿವೆ.

ಸಂತೋಷ್ ಲಾಡ್‌ಗೆ ಪ್ರತಾಪ್ ಸಿಂಹ ಪ್ರಶ್ನೆ..
ಸಚಿವ 'ಸಂತೋಷ್ ಲಾಡ್, ಮೈನಿಂಗ್ ಲಾಡ್' ಬಂದು ಬೋಧನೆ ಮಾಡುತ್ತಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 60 ಕೋಟಿ ಜನ ಸೇರಿದ್ದಾಗ ನಡೆ ಕಾಲ್ತುಳಿತ ಬಗ್ಗೆ ಲಾಡ್ ಮಾತನಾಡುತ್ತಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸುತ್ತಾರೆ. ಅವರಿಗೆ ಲಾಡ್ ಸಲಹೆ ಕೊಡ್ತಾರೆ.. ಹಾಗಾದ್ರೆ ನೀವು ಬೆಂಗಳೂರು ಕಾಲ್ತುಳಿತ ಬಗ್ಗೆ ಮಾತನಾಡಿ ಎಂದು ಕೇಳಿದ್ದೇನೆ. ಬೆಂಗಳೂರು RCB ಕಾಲ್ತುಳಿತ, ಸಾವುಗಳ ಬಗ್ಗೆ ಮಾತನಾಡಿಲ್ಲ ಯಾಕೆ?. ಬೆಂಗಳೂರಲ್ಲಿ ಸಣ್ಣ ವಿಕ್ಟರಿ ಸಂಭ್ರಮ ನಡೆಯುವಾಗ ಅದರ ನಿರ್ವಹಣೆ ಮಾಡಲಾಗಿಲ್ಲ. ಮುಖ್ಯಮಂತ್ರಿಗಳು, ಪೊಲೀಸರು ಸಂಭ್ರಮಾಚರಣೆ ನಿರ್ವಹಣೆ ಮಾಡದ್ದಕ್ಕೆ 11 ಮಂದಿ ಸಾವಿಗೀಡಾದರು. ಇದನ್ನು ಪ್ರಶ್ನೆ ಮಾಡಿ ಎಂದು ಅವರು ತಿರುಗೇಟು ನೀಡಿದರು.
ಸಂತೋಷ್ ಲಾಡ್ ಹಾಗೂ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೈತಾರೆ. ಹೀಗಾಗಿ ನನ್ನ ಮಾತುಗಳು ಅವರಿಗೆ ನೇರವಾಗಿರುತ್ತವೆ. ಯಾಕೆ ಅವರೊಂದಿಗೆ ನಾನು ವೈಯಕ್ತಿಕವಾಗಿ ಸಂಬಂಧ ಬೆಳೆಸುತ್ತಿಲ್ಲ. ಅವರೊಂದಿಗೆ ನನ್ನ ಯಾವ ವ್ಯವಹಾರ ಇಲ್ಲ, ರಿಯಲ್ ಎಸ್ಟೇಟ್ ಇಲ್ಲ ಅಥವಾ ಅವರು ನನ್ನ ಫೈಲ್ ಇಟ್ಟುಕೊಂಡು ಹೆದಿಸುತ್ತಿದ್ದಾರಾ? ಇಲ್ಲವಲ್ಲ. ಅಂದ ಮೇಲೆ ನೇರವಾಗಿ ಮಾತನಾಡಲು ಹೆದರಿಕೆ ಏಕೆ ಎಂದು ಗುಡುಗಿದ್ದಾರೆ.

ನೀವು ಇಷ್ಟೊಂದು ನೇರವಾಗಿ ಮಾತನಾಡುತ್ತೀರಿ. ನೀವು ಮತ್ತು ಆ ನಾಯಕರು ಮತ್ತೆ ಎಲ್ಲಿಯಾದರೂ ಪರಸ್ಪರ ಸಿಕ್ಕಾಗ ಹೀಗೆಲ್ಲ ಮಾತನಾಡಿದ್ದೀರಿ ಎಂದೆಲ್ಲ ಬೇಸರ ಆಗಲ್ಲವೇ, ಚರ್ಚೆಗಳೇ ಆಗಲ್ಲವಾ? ಎಂಬ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು. ನಾನೇನು ಅವರೊಂದಿಗೆ ಸಂಬಂಧ ಬೆಳೆಸುತ್ತಿಲ್ಲವಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ತಪ್ಪಾದಲ್ಲಿ ಒಪ್ಪಿಕೊಳ್ಳಬೇಕು..
ಇನ್ನೊಂದು ಉದಾಹರಣೆ ನೀಡಿದ ಪ್ರತಾಪ್ ಸಿಂಹ ಅವರು, ಆರ್‌ಸಿಬಿ ಕಾಲ್ತುಳಿತ ದಿನ ವೇದಿಕೆ ಮೇಲೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು, ಅವರ ಮಕ್ಕಳನ್ನು ಕರೆತಂದರು. ಅವರ ಬಗ್ಗೆ ಮಾತನಾಡುವಾಗ ನನ್ನಿಂದ ತಪ್ಪಾಗಿತ್ತು. ಅವತ್ತು ರಾತ್ರಿ ಅವರು ಕರೆ ಮಾಡಿದಾಗ ನಾನು ಅವರಲ್ಲಿ ಕ್ಷಮೆ ಕೇಳಿದ್ದೆ. ಆ ಘಟನೆ ಅಲ್ಲಿಗೆ ಮುಗಿಯಿತು. ರಾಜಕಾರಣದಲ್ಲಿ ತಪ್ಪಾದರೂ ಸಹಿತ ಸಾಧಿಸದೇ ಕ್ಷಮೆ ಯಾಚಿಸಬೇಕು. ನಾನು ಅದೇ ರೀತಿಯ ವ್ಯಕ್ತಿ ಎಂದರು.
ಅವರಪ್ಪನ ಹೆಸರು, ಹಣವೇ ಇವರಿಗೆ ಡೆಸ್ಟಿನಿ..
ಇಂದಿನ ರಾಜಕಾರಣಿಗಳಿಗೆ ಅವರಪ್ಪನ ಹಣ, ರಿಯಲ್ ಎಸ್ಟೇಟ್, ಕಮಿಷನ್ನೇ ಅವರ ಮಕ್ಕಳಿಗೆ ಡೆಸ್ಟಿನಿ ಆಗಿರುತ್ತದೆ. ನನಗೆ ಅಪ್ಪ ಇಲ್ಲ. ಬರೆದಿದ್ದು ಇದ್ದರೆ ಅದೇ ನನ್ನ ಡೆಸ್ಟಿನಿ. ಮೈಸೂರು ನನ್ನು ಜನ್ಮಭೂಮಿ ಅಲ್ಲ. ಆದರೆ ಮೈಸೂರು ಕರ್ಮ ಭೂಮಿ, ರುದ್ರಭೂಮಿ. ನಾನು ಜನರ ಮನಸ್ಸಿನಲ್ಲಿ ಜಾಗ ಪಡೆಯಲು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಕೆಲವು ಪ್ರಮುಖ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಕುಟುಂಬ ರಾಜಕಾರಣ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಯುವ ಸಮೂಹಕ್ಕೆ ರಾಜಕಾರಣಕ್ಕೆ ಬರಲು ಇಂದು ಅವಕಾಶ ಇಲ್ಲ. ಕುಟುಂಬ ರಾಜಕಾರಣ ಬಗ್ಗೆ ಅವರು ಕಿಡಿ ಕಾರಿದ್ದಾರೆ. ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಏಕೆಂದರೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅವರನ್ನು ವಿರೋಧಿಸುವ ಬಣವೊಂದು ಹುಟ್ಟಿಕೊಂಡಿತು. ಬಿಎಸ್‌ವೈ ಪುತ್ರನಾಗಿದ್ದಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ ಎಂಬ ಆರೋಪ ಕೇಳಿ ಬಂದಿವೆ. ವಿಜಯೇಂದ್ರ ವಿರುದ್ಧ ಹಿಂದು ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟೀಕಿಸುತ್ತಲೇ ಬಂದಿದ್ದಾರೆ. ಅಪ್ಪ ಮಕ್ಕಳು ಎಂದು ನೇರವಾಗಿಯೇ ಬೈದಿದ್ದಾರೆ. ಅವರ ಬಣದಲ್ಲಿ ಪ್ರತಾಪ್ ಸಿಂಹ ಅವರು ಗುರುತಿಸಿಕೊಂಡಿದ್ದರು. ಇದೀಗ ಅವರು ಅಪ್ಪ ಮಕ್ಕಳ ರಾಜಕಾರಣವೆಂದು ಮಾತನಾಡಿರುವುದು ಪರೋಕ್ಷವಾಗಿ ಕುಟುಂಬ ರಾಜಕಾರಣಿಗಳಿಗೆ ಟಾಂಗ್ ಕೊಟ್ಟರಾ? ಎಂದು ವಿಡಿಯೋ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವಿಡಿಯೋ ತುಣುಕು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಅಭಿಮಾನಿಗಳು ಇದೇ ಕಾರಣಕ್ಕೆ ಇವರು ಇಷ್ಟವಾಗುತ್ತದೆ. ಇದ್ದದ್ದನ್ನು ನೇರವಾಗಿ ಹೇಳುವ ಇವರ ನಡವಳಿಕೆ ಮೆಚ್ಚಲರ್ಹವಾದದ್ದು ಎಂದು ಶ್ಘಾಘಿಸಿದ್ದಾರೆ.
-
ಧಾರವಾಡ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 1 ಲಕ್ಷ ಬಾಂಡ್ಗೆ ಆಗ್ರಹಿಸಿದ ಪೊಲೀಸರ ವಿರುದ್ಧ ಯತ್ನಾಳ್ ಗರಂ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್











Click it and Unblock the Notifications