ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋಸ್ಪೇಸ್ ಸೇರಿ 12 ಎಂಜಿನಿಯರಿಂಗ್ ಕೋರ್ಸ್ ಶೀಘ್ರ ಬಂದ್

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 30: ಈ ವರ್ಷ ಎಂಜಿನಿಯರಿಂಗ್ ಕಾಲೇಜುಗಳು ಬೇಡಿಕೆ ಕಳೆದುಕೊಳ್ಳುತ್ತಿದ್ದು ಕೋರ್ಸ್ ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಕೆಲವು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯು ದಾಖಲಾಗದೆ ಶೂನ್ಯ ದಾಖಲಾತಿ ಇದೆ.

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ! ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ ಪತ್ರ ಬರೆಯಲು ನಿರ್ಧರಿಸಿದೆ. ಆಟೊಮೇಷನ್ ಅಂಡ್ ರೋಬೋಟಿಕ್ಸ್, ಏರೋಸ್ಪೇಸ್ ಎಂಜಿನಿಯರಿಂಗ್, ಸೆರಾಮಿಕ್ಸ್‌ ಅಂಡ್ ಸಿಮೆಂಟ್ ಟೆಕ್ನಾಲಜಿ, ಎನ್ವಿರಾನ್ ಮೆಂಟಲ್ ಎಂಜಿನಿಯರಿಂಗ್, ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿ, ಮ್ಯಾನುಫ್ಯಾಕ್ಚರಿಂಗ್, ಪೆಟ್ರೋ ಕೆಮಿಕಲ್ ಎಂಜಿನಿಯರಿಂಗ್, ಮೈನಿಂಗ್ ಟೆಕ್ನಾಲಜಿ, ಪಾಲಿಮರ್ ಸೈನ್ಸ್‌ ಅಂಡ್ ಟೆಕ್ನಾಲಜಿ, ಸಿಲ್ಕ್ ಟೆಕ್ನಾಲಜಿ ಅಂಡ್ ಟೆಕ್ಸ್ ಟೈಲ್ಸ್‌ ಎಂಜಿನಿಯರಿಂಗ್ ಸಂಪೂರ್ಣವಾಗಿ ಬೇಡಿಕೆ ಕಳೆದುಕೊಂಡು ಮುಚ್ಚುವ ಹಂತದಲ್ಲಿದೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್! ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ವರ್ಷದಿಂದ ವರ್ಷಕ್ಕೆ ಈ ಕೋರ್ಸ್ ಗಳನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಆನ್‌ಲೈನ್ ನಲ್ಲಿ ಹಲವು ಕೋರ್ಸ್ ಗಳು ಆರಂಭವಾಗಿದೆ. ಬಹುತೇಕರು ಆನ್‌ಲೈನ್ ನಲ್ಲೇ ಕೋರ್ಸ್ ಕಲಿಯಲು ಮುಂದಾಗುತ್ತಿದ್ದಾರೆ.

No takes for 12 engineering courses including Aerospace!

ಈ ಕಾರಣಕ್ಕಾಗಿಯೂ ಪೂರ್ಣಾವಧಿ ಕೋರ್ಸ್ ಗಳಿಗೆ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಹಜವಾಗಿ ಕಡಿಮೆಯಾಗುತ್ತಿದೆ. ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವೊಂದು ಕೋರ್ಸ್ ಗಳಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗದ ಹಿನ್ನೆಲೆಯಲ್ಲಿ ಈ ಕೋರ್ಸ್ ಗಳನ್ನು ಮುಂದುವರೆಸುವುದುರಲ್ಲಿ ಅರ್ಥವಿಲ್ಲ ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ.

English summary
Aerospace, Automation and Robotics, instrumentation technology and other subjects have lost their demand in engineering course as department of higher education has asked shutdown these courses to AICTE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X