ಚುನಾವಣಾ ಆಯೋಗದ ವಿರುದ್ಧ ಕೆಂಡಕಾರಿದ ಕುಮಾರಸ್ವಾಮಿ
Recommended Video

ಮೈಸೂರು, ಮಾರ್ಚ್ 27 : ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 'ಚುನಾವಣಾ ಆಯೋಗ ಎಳೆದು ಎಳೆದು, ಕೊನೆಗೂ ಚುನಾವಣಾ ದಿನಾಂಕ ಪ್ರಕಟಿಸಿದೆ' ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, "ನಂಜುಂಡೇಶ್ವರನ ಸನ್ನಿಧಿಗೆ ಹೋಗುತ್ತಿದ್ದೆ. ಈ ವೇಳೆಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ. ಜೆಡಿಎಸ್ ಗೆ ನಂಜುಂಡೇಶ್ವರನ ಸಂಪೂರ್ಣ ಆಶೀರ್ವಾದವಿದೆ. ಹೀಗಾಗಿ ಮುಂದೆ ನಾವೇ ಅಧಿಕಾರಕ್ಕೆ ಬಂದೇ ಬರುತ್ತೇವೆ," ಎಂದರು.
ಯಾರೊಂದಿಗೂ ಮೈತ್ರಿ ಇಲ್ಲ
"ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಮೈತ್ರಿ ಇಲ್ಲ. ನಮಗೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು. ರಾಜ್ಯದ ಜನತೆ ಈಗಾಗಲೇ ಕಾಂಗ್ರೆಸ್ ಅನ್ನು ಮುಗಿಸೊಕೆ ತೀರ್ಮಾನ ಮಾಡಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ಮಾಡಲು ನಮಗೂ ಗೊತ್ತು," ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಕಂಡರೆ ಸಿಎಂಗೆ ಭಯ
ಜೆಡಿಎಸ್ ಕಂಡರೆ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ. ಅದಕ್ಕಾಗಿ ಜೆಡಿಎಸ್ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಸಿ - ಫೋರ್ ಸಮೀಕ್ಷೆ ಮಾಡಿವದರು ಸಿಎಂ ಕಾಂಪೌಂಡ್ ನಲ್ಲೇ ಇರುವವರು. ಸಿಎಂ ಜೆಡಿಎಸ್ ಪಕ್ಷ 28 ಸ್ಥಾನ ಬರುತ್ತದೆ ಎಂದಿದ್ದಾರೆ. ಆದರೆ ಇಲ್ಲಿ ಉಲ್ಟಾ ಆಗಲಿದೆ ಕಾಂಗ್ರೆಸ್ 28 ಬರುತ್ತೆ. ಅದೆ ಜೆಡಿಎಸ್ 128 ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.
ರಾಹುಲ್ ಗಾಂಧಿ ಓರ್ವ ಬಚ್ಚಾ
ಬಿಜೆಪಿಯ ಅಮಿತ್ ಶಾ ರಾಜ್ಯಕ್ಕೆ ಮೂರು ಬಾರಿಯೋ ನಾಲ್ಕು ಬಾರಿಯೋ ಬಂದಿದ್ದಾರೆ. ಅವರು ಜನಗಳ ಬಳಿ ಹೋಗದೆ ಮಠಗಳಿಗೆ ಭೇಟಿ ಕೊಡುತ್ತಿದ್ದಾರೆ. ಪಾಪ ರಾಹುಲ್ ಗಾಂಧಿಯವರಿಗೆ ದೇವರ ಮಂಗಳಾರತಿ ತಟ್ಟೆಗೆ ಯಾವ ರೀತಿ ದಕ್ಷಿಣೆ ಹಾಕಬೇಕು ಎನ್ನುವ ಅರಿವಿಲ್ಲ. ಸಿದ್ದರಾಮಯ್ಯನವರು ಅವರಿಗೆ ಅದನ್ನಾದರೂ ಹೇಳಿ ಕೊಡಬೇಕಲ್ವಾ ಎಂದು ವ್ಯಂಗ್ಯವಾಡಿದರು.
ತರಾತುರಿಯಲ್ಲಿ ಕಡತಕ್ಕೆ ಸಿಎಂ ಸಹಿ
ಇನ್ನು ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಕಳೆದ ರಾತ್ರಿಯೇ ಪ್ರಮುಖ ಕಡತಗಳಿಗೆ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಸಹಿ ಹಾಕಿದ್ದಾರೆ . ನೀವು ಸಹಿ ಹಾಕಿದ ಕೆಲವೇ ಕ್ಷಣದಲ್ಲಿ ನಮಗೆ ಮಾಹಿತಿ ಬಂದಿದೆ. ಚುನಾವಣೆ ಘೋಷಣೆ ಸಂದರ್ಭದಲ್ಲಿ ಸಿಎಂ ಮಾತು ಕೇಳಿದರೆ ಅಧಿಕಾರಿಗಳೇ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.












Click it and Unblock the Notifications