ಸಿಡಿ ಪ್ರಕರಣ; ಮೂರು ಫ್ಯಾಮಿಲಿಗೂ ಡ್ಯಾಮೇಜ್ ಆಗುತ್ತೆ ಇಷ್ಟಕ್ಕೆ ನಿಲ್ಲಿಸಿ: ಬಾಲಚಂದ್ರ ಜಾರಕಿಹೊಳಿ
ಎಲ್ಲಾ ದೊಡ್ಡ ದೊಡ್ಡ ಫ್ಯಾಮಿಲಿ ಇವೆ ದಯಮಾಡಿ ಈ ಕೇಸ್ ಮುಂದುವರೆಸಬೇಡಿ. ನಾವು ರಾಜಕೀಯವಾಗಿ ಹೋರಾಟ ಮಾಡೋಣ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿ,ಜನವರಿ31: ಈ ರೀತಿ ಸಿಡಿ ಪ್ರಕರಣ ಇಟ್ಟುಕೊಂಡು ಹೋದರೇ ಮೂರು ಫ್ಯಾಮಿಲಿಗಳಿಗೆ ಡ್ಯಾಮೇಜ್ ಆಗುತ್ತೆ. ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಚಾರವನ್ನ ಇಲ್ಲಿಗೆ ಬಿಡಿ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ಈ ಕುರಿತು ಮಂಗಳವಾರ ಗೋಕಾಕ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಚುನಾವಣೆ ಇದೆ. ಈ ರೀತಿ ಸಿಡಿ ಪ್ರಕರಣ ಇಟ್ಟುಕೊಂಡು ಈ ರೀತಿ ಹೋದ್ರೇ ಮೂರು ಫ್ಯಾಮಿಲಿಗಳಿಗೆ ಡ್ಯಾಮೇಜ್ ಆಗುತ್ತೆ. ಎಲ್ಲಾ ದೊಡ್ಡ ದೊಡ್ಡ ಫ್ಯಾಮಿಲಿ ಇವೆ ದಯಮಾಡಿ ಈ ಕೇಸ್ ಮುಂದುವರೆಸಬೇಡಿ. ನಾವು ರಾಜಕೀಯವಾಗಿ ಹೋರಾಟ ಮಾಡೋಣ. ಬಿಜೆಪಿಯಿಂದ ನಾವು ಕಾಂಗ್ರೆಸ್ ನಿಂದ ನೀವು ರಾಜಕೀಯವಾಗಿ ಹೋರಾಟ ಮಾಡೋಣ. ಜನ ಯಾರ ಮೇಲೆ ಪ್ರೀತಿ ಇದಾರೆ ಅವರಿಗೆ ವೋಟ್ ಹಾಕ್ತಾರೆ. ದಯಮಾಡಿ ಸಿಡಿ ಪ್ರಕರಣ ಕೇಸರೆರಚಾಟ ಮಾಡಬೇಡಿ ಎಂದು ಮನವಿ ಮಾಡಿದರು.
ಕೆಲವು ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರ ಜೊತೆಗೆ ಒಂದು ರೂಮ್ ನಲ್ಲಿ ಕುಳಿತು ಚರ್ಚೆ ಮಾತನಾಡುತ್ತೇವೆ. ಇದನ್ನ ಸಾರ್ವಜನಿಕವಾಗಿ ಟೀಕೆ ಮಾಡುವುದನ್ನ ಮೂರು ಜನ ನಿಲ್ಲಿಸಬೇಕು. ಪಕ್ಷದಲ್ಲಿ ಈ ವಿಚಾರ ಕರೆದ ಕೇಳಿದರೇ ವರಿಷ್ಠರ ಮುಂದೆ ಹೇಳುತ್ತೇವೆ. ಮೂರು ಜನ ದಯಮಾಡಿ ಇದನ್ನ ಮುಂದುವರೆಸಬೇಡಿ. ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ ಇನ್ನೂ ಒಳ್ಳೆ ಮಟ್ಟಕ್ಕೆ ಬೆಳೆಯಿರಿ ಎಂದು ಹೇಳಿದರು.

ಪಕ್ಷವಾರು ಹೋರಾಟ ಮಾಡೋಣ ನಮ್ಮನ್ನ ಸೋಲಿಸಲು ಅವರು ಬರಲಿ, ಅವರನ್ನ ಸೋಲಿಸಲು ನಾವು ಹೋಗೋಣ. ಇದನ್ನ ಬಿಟ್ಟು ಯಾರ ವೈಯಕ್ತಿಕ ಟೀಕೆ ಬಿಟ್ಟು ರಾಜಕೀಯ ಮಾಡಿ. ಸಿಡಿ ಬಿಡುಗಡೆಯಾದಾಗ ಖಂಡಿತ ಅವರಿಗೆ ನೋವಾಗಿದೆ. ಈ ಸಂದರ್ಭದಲ್ಲಿ ನಾವು ಅವರೊಟ್ಟಿಗೆ ಇದ್ದು ಹೋರಾಟ ಮಾಡಿದ್ದೇವೆ. ರಾಜಕೀಯ ಬೆಳೆಸೋದು ಹಾಳು ಮಾಡುವುದು ಕ್ಷೇತ್ರದ ಜನರ ಕೈಯಲ್ಲಿ ಇರುತ್ತೆ. ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿದೆ ತೊಂದರೆ ಆಗಿದೆ. ಎನೇ ಆದ್ರೂ ಸಾರ್ವಜನಿಕವಾಗಿ ಮಾತಾಡದೇ. ಪಕ್ಷದ ವೇದಿಕೆಯಲ್ಲಿ ಕುಳಿತು ಮಾತಾಡಿ ನಿರ್ಣಯ ತೆಗೆದುಕೊಳ್ಳುವುದು ಒಳ್ಳೆಯದು. ನಾನು ಸಿಡಿ ಬಿಡುಗಡೆ ಆದಾಗ ಸಿಬಿಐಗೆ ನೀಡುವಂತೆ ಮನವಿ ಮಾಡಿದ್ದೆ. ಆಗ ಯಾರು ಕೇಳಲಿಲ್ಲ, ಈಗ ಸಾರ್ವಜನಿಕ ಚರ್ಚೆ ಮಾಡಿ ಪ್ರಯೋಜನ ಇಲ್ಲಾ ಎಂದು ಹೇಳಿದರು.











Click it and Unblock the Notifications