ವಿರೋಧಿಗಳಿಗೆ ಗೌಡ್ರ ಕೇರಂ ಆಟ ಅರ್ಥವೇ ಆಗುವುದಿಲ್ಲ: ವೈ ಎಸ್ ವಿ ದತ್ತ

Recommended Video

      ಎಚ್ ಡಿ ದೇವೇಗೌಡ್ರ ಚಾಣಾಕ್ಷತನ ಯಾರಿಂದಲೂ ಅಳಿಯಲು ಸಾಧ್ಯವಿಲ್ಲ | Oneindia Kannada

      ಬೆಂಗಳೂರು, ಜೂನ್ 21: ದೇವೇಗೌಡ್ರು ತಮ್ಮ ರಾಜಕೀಯ ಜೀವನದಲ್ಲಿ ಎಷ್ಟೋ ಚುನಾವಣೆಯನ್ನು ಎದುರಿಸಿದ್ದಾರೆ, ತುಮಕೂರಿನ ಒಂದು ಸೋಲಿನಿಂದ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ, ವಕ್ತಾರ ವೈ ಎಸ್ ವಿ ದತ್ತ ಹೇಳಿದರು.

      ನಗರದಲ್ಲಿ ಮಾತನಾಡುತ್ತಿದ್ದ ದತ್ತ, ನಮ್ಮ ನಾಯಕ ದೇವೇಗೌಡರ ಕೇರಂ ಬೋರ್ಡ್ ಆಟ ನಮ್ಮ ಪಕ್ಷದವರಿಗೇ ಗೊತ್ತಾಗುವುದಿಲ್ಲ. ಇನ್ನು ಅವರು ಆಡುವ ಚದುರಂಗದ ಆಟ ಎದುರಾಳಿಗಳಿಗೆ ಅರ್ಥವಾಗುತ್ತದಾ ಎಂದು ಪ್ರಶ್ನಿಸಿದ್ದಾರೆ.

      ಈ ಹಿಂದೆಯೂ ಗೌಡ್ರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ. ಇದಕ್ಕೆಲ್ಲಾ ಗೌಡ್ರು ಧೃತಿಗೆಡುವುದಿಲ್ಲ ಎಂದು ದತ್ತ ಹೇಳಿದರು.

      No one will understand Deve Gowda political carrom game: YSV Datta

      ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನವನ್ನು ಶುರು ಮಾಡಿದ್ದೇ ಜೆಡಿಎಸ್. ಈಗ, ಇದರ ಬಗ್ಗೆ ವ್ಯಂಗ್ಯವಾಡುತ್ತಿರುವ ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಲಿ ಎಂದು ದತ್ತ, ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದರು.

      ಎಲ್ಲಿ ಕಳೆದುಕೊಳ್ಳುತ್ತೀವೋ ಅಲ್ಲೇ ಗಳಿಸಿಕೊಳ್ಳಬೇಕು ಎನ್ನುವುದು ದೇವೇಗೌಡರ ಹಠ. ಇವರು ಏನಾದರೂ ಹೇಳಿದರೆ, ಅದರ ಹಿಂದೆ ಬೇರೇನೋ ವಿಷಯವಿದೆ ಎಂದು ತಿಳಿದುಕೊಳ್ಳಬೇಕು ಎಂದು ದತ್ತ ಹೇಳಿದರು.

      ಜೆಡಿಎಸ್ ಯುವಮೋರ್ಚಾ ಅಧ್ಯಕ್ಷ ಪಟ್ಟವನ್ನು ದೇವೇಗೌಡ ಅವರ ಕುಟುಂಬದ ಹೊರಗಿನವರಿಗೆ ಕೊಡಬೇಕು ಎಂದು ಬಹಿರಂಗವಾಗಿ ದತ್ತ ಎರಡು ದಿನದ ಹಿಂದೆ ಒತ್ತಾಯಿಸಿದ್ದರು.

      ದೇವೇಗೌಡ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಸಾಕಷ್ಟು ಪ್ರಜ್ವಲಿಸಿದ್ದಾರೆ, ಅವರು ಇನ್ನು ಮುಂದೆ ತೆರೆ ಮರೆಯಲ್ಲಿ ನಿಂತು ಪಕ್ಷವನ್ನು ಕಟ್ಟಲಿ ಎಂದು ದತ್ತ ಅಸಮಾಧಾನದಿಂದಲೇ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+