ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಬೇಡ; ಷರತ್ತುಗಳು ಅನ್ವಯ

|
Google Oneindia Kannada News

ಬೆಂಗಳೂರು, ಮೇ 18 : ಕರ್ನಾಟಕ ಸರ್ಕಾರ ಸೋಮವಾರ ಲಾಕ್ ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಿದೆ. ಅಂತರ ಜಿಲ್ಲಾ ಸಂಚಾರ ನಡೆಸಲು ಜನರು ಪಾಸುಗಳನ್ನು ಪಡೆಯುವ ಅವಶ್ಯಕತೆ ಇಲ್ಲ. ಆದರೆ, ಸಂಚಾರಕ್ಕೆ ಕೆಲವು ಷರತ್ತುಗಳಿವೆ.

Recommended Video

ಗೌಡರ ಹೆಸರಲ್ಲಿ ರಕ್ತದಾನ ಮಾಡಿದ ಶರವಣ | TA Sharavana | JDS

ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದರು. "ಅಂತರ್‌ ಜಿಲ್ಲಾ ಪ್ರಯಾಣ ಮಾಡಿದರೆ ಕ್ವಾರಂಟೈನ್ ಇಲ್ಲ. ಅಂತರ್ ರಾಜ್ಯದಿಂದ ಬಂದರೆ ಮಾತ್ರ ಕ್ವಾರಂಟೈನ್ ಕಡ್ಡಾಯವಾಗಿದೆ" ಎಂದು ಹೇಳಿದರು.

ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ

ಸರ್ಕಾರಿ ಬಸ್‌ಗಳ ಸಂಚಾರಕ್ಕೂ ಸಹ ಕರ್ನಾಟಕ ಸರ್ಕಾರ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಆದರೆ, ಅಂತರರಾಜ್ಯ ಬಸ್‌ಗಳ ಸಂಚಾರವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ.

ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

 No Need Of Pass For Inter District Movement In Karnataka

ಕರ್ನಾಟಕಕ್ಕೆ ಕೊರೊನಾ ಹಾಟ್ ಸ್ಪಾಟ್‌ ಆದ ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಯಾರೂ ಸಹ ಮೇ 31ರ ತನಕ ಆಗಮಿಸುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಭಾರತ ಲಾಕ್ ಡೌನ್ 4.O ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ! ಭಾರತ ಲಾಕ್ ಡೌನ್ 4.O ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ!

ಪಾಸುಗಳು ಬೇಡ: ಅಂತರ ಜಿಲ್ಲಾ ಸಂಚಾರ ನಡೆಸಲು ಇಷ್ಟು ದಿನ ಪಾಸು ಪಡೆಯಬೇಕಿತ್ತು. ಆದರೆ, ಸೋಮವಾರದಿಂದ ಪಾಸುಗಳ ಅಗತ್ಯವಿಲ್ಲ. ಜನರು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ತನಕ ಮಾತ್ರ ಸಂಚಾರ ನಡೆಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಖಾಸಗಿ ವಾಹನದಲ್ಲಿ ಸಂಚಾರ ನಡೆಸುವ ಜನರು ಪಾಸು ಪಡೆಯುವ ಅಗತ್ಯವಿಲ್ಲ. ಆದರೆ, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಕಾರಿನಲ್ಲಿ ಡ್ರೈವರ್ ಹೊರತುಪಡಿಸಿ 3 ಜನರು ಮಾತ್ರ ಸಂಚಾರ ನಡೆಸಬಹುದು. ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

English summary
Karnataka government on May 18, 2020 announced relaxation in lockdown rules. No need to get pass for the inter-district movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X