ದರ್ಶನ್ ಬಿಡುಗಡೆಗೆ ಸಚಿವರ ಒತ್ತಡ: ಚಲುವರಾಯಸ್ವಾಮಿ ಏನಂದ್ರು?
ಮಂಡ್ಯ, ಜೂನ್ 19: ದರ್ಶನ್ ಅವರ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡದ ಕುರಿತು ಚರ್ಚೆಯಾಗುತ್ತಿದ್ದು, ಯಾವ ಸಚಿವರು ದರ್ಶನ್ ಬಿಡುಗಡೆಗೆ ಒತ್ತಡ ಹಾಕಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡಕ್ಕೆ ಮಣಿಯುವವರು ಅಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದರ್ಶನ್ ಪ್ರಕರಣ ಲೀಗಲ್ ಆಕ್ಷನ್ ಆಗಿದೆ. ಆತ್ಮೀಯತೆ ಇರಬಹುದು ಆದರೆ, ಆತ್ಮೀಯತೆ ಬೇರೆ, ವಿಶ್ವಾಸವೇ ಬೇರೆ. ತನಿಖೆ ಆಗ್ತಿದೆ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ. ಕಲಾವಿದ ಆದ್ದರಿಂದ ಎಲ್ಲರಿಗೂ ಪರಿಚಯ ಇರ್ತಾರೆ. ಅಗಂತ ತನಿಖೆ ಹಳ್ಳ ಹಿಡಿಯತ್ತೆ ಅಂತ ಅಲ್ಲ. ನಮ್ಮ ಸರ್ಕಾರ ನೂರಕ್ಕೆ ನೂರು ನಿಷ್ಪಕ್ಷಪಾತ ತನಿಖೆಗೆ ಬದ್ದವಾಗಿದೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಡಿ ಕೆ ಶಿವಕುಮಾರ್ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡೋ ಅವಶ್ಯಕತೆ ಇಲ್ಲ. ಡಿಕೆ ಶಿವಕುಮಾರ್ MLA ಆಗಿ DCM ಆಗಿದ್ದಾರೆ.
ಅವರು ಚನ್ನಪಟ್ಟಣದಲ್ಲಿ ಸ್ಪರ್ದೇ ಮಾಡೋ ಅವಶ್ಯಕತೆ ಇಲ್ಲ, ಸ್ಪರ್ಧೆ ಮಾಡ್ತಾರೆ ಅನ್ನೋದೆಲ್ಲಾ ಊಹಾ ಪೋಹಾ. ಡಿಕೆ ಸುರೇಶ್ ಎಂಪಿ ಚುನಾವಣೆಯಲ್ಲಿ ಸೋತಿರೋದ್ರಿಂದ ಅವರು ಅಲ್ಲಿ ಸ್ಪರ್ಧೆ ಮಾಡ್ತಾರಾ ಅನ್ನೋ ಮಾತಿದೆ.ಡಿಕೆ ಸುರೇಶ್ ಸ್ಪರ್ಧೆ ಬಗ್ಗೆ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಅತ್ಯಂತ ಬಹುಮತದಿಂದ ಕುಮಾರಸ್ವಾಮಿ ಗೆದ್ದಿದ್ದಾರೆ. ಕೇಂದ್ರದಲ್ಲಿ ಉತ್ತಮವಾದ ಖಾತೆಯನ್ನ ಪಡೆದುಕೊಂಡಿದ್ದಾರೆ, ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸೋದಾದ್ರೆ ಸಂತೋಷ, ಸ್ವಾಗತ ಮಾಡುತ್ತೇನೆ. ಅಭಿವೃದ್ಧಿ ಬಗ್ಗೆ ಸಹಕಾರ ಬೇಕಿದ್ದರೆ ನೀಡೋದಕ್ಕೆ ನಾವು ಸಿದ್ದ. ಚುನಾವಣೆ ಮುಗಿದಿದೆ ಟೀಕೆ, ಟಿಪ್ಪಣಿ ಬೇಡ ನಮಗೆ ಅಭಿವೃದ್ಧಿ ಅಷ್ಟೇ ಬೇಕು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ವಿಸಿ ನಾಲೆ ಕಾಮಗಾರಿ ವಿಚಾರವಾಗಿ ಮಾತನಾಡಿ, ರೈತರಿಗೆ ನೀರು ಕೊಡಲು ನಾವು ಸಿದ್ದತೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಇಂದು KRS ನಲ್ಲಿ ಸಭೆ ನಡೆಸಿದ್ದೇವೆ, ಇನ್ನೊಂದು ವಾರದಲ್ಲೆ ನೀರು ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು. ಯಾವುದೇ ಕಾರಣಕ್ಕೂ ಕಾಮಗಾರಿಯಿಂದ ನೀರು ನಿಲ್ಲಿಸಲಾಯ್ತು ಅನ್ನುವಂತಾಗಬಾರದು. ನಾಲೆ ವಿಚಾರದಲ್ಲಿ ನಮ್ಮ ದುರಾದ್ರುಷ್ಟವೋ ಏನೋ ಜನರಿಗೆ ಮಾಹಿತಿ ಕೊಡೊದ್ರಲ್ಲಿ ವಿಫಲವಾಗಿದ್ದೇವೆನೋ. ವಿರೋಧ ಪಕ್ಷದವರು ಟೀಕೆ ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೇನೋ ಎಂದು ಹೇಳಿದರು.
ಯಾರೇ ನಮ್ಮನ್ನ ಬೈಲಿ, ಟೀಕೆ ಮಾಡಲಿ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ವಿರೋಧ ಪಕ್ಷದವ್ರಿಗೆ ನಮ್ಮ ಮೇಲೆ ಟೀಕೆ ಮಾಡಿಕೊಂಡು ರಾಜಕಾರಣ ಮಾಡೋದೆ ಮುಖ್ಯ ಅಂದ್ರೆ ಮಾಡಲಿ, ನಮಗೆ ನಮ್ಮ ಜನರ ಹಿತ ಅಷ್ಟೇ ಮುಖ್ಯ. ನಾಳೆಯೇ ವಿಸಿ ನಾಲೆಗೆ ನೀರು ಬಿಡಬೇಕು ಅನ್ನೋದಾದ್ರೆ ಬಿಡ್ತಿವಿ ಬಿಡಲ್ಲ ಅನ್ನೋ ಮಾತೇ ಇಲ್ಲ. ಕಾಮಗಾರಿ ಉತ್ತಮ ಗುಣಮ್ಟದಾಗಿದೆ ಅನುಮಾನ ಇದ್ರೆ ಬೇರೆಯವರ ಬಳಿ ಇನ್ಸ್‌ಪೆಕ್ಷನ್ಸ್ ಮಾಡಿಸಲಿ ಎಂದು ಹೇಳಿದರು.












Click it and Unblock the Notifications