SSLC Exam: ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 10% ಗ್ರೇಸ್ ಅಂಕ ಇಲ್ಲ; ಸಚಿವ ಮಧು ಬಂಗಾರಪ್ಪ

ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 10% ಗ್ರೇಸ್ ಅಂಕಗಳನ್ನು ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಗ್ರೇಸ್ ಅಂಕಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾದ ಬಳಿಕ ಈ ವರ್ಷ ಗ್ರೇಸ್ ಅಂಕಗಳನ್ನು ನೀಡದೇ ಇರಲು ನಿರ್ಧಾರ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಹತ್ತಿರವಾಗುತ್ತಿದ್ದು, ವೆಬ್‌ ಕಾಸ್ಟಿಂಗ್‌ ಮತ್ತು ಸಿಸಿಟಿವಿ ನಿಯಮಗಳನ್ನು ಕಠಿಣ ಪ್ರಯೋಗಕ್ಕೆ ಮುಂದಾಗಿದೆ. ಫಲಿತಾಂಶಗಳನ್ನು ಸುಧಾರಣೆ ಮಾಡುವುದು ಎನ್ನುವುದರ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೋಮವಾರ ಬೆಂಗಳೂರಿನ ಬನಶಂಕರಿಯ ಡಿಸಿಇಆರ್ ಟಿಯಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರ ಜೊತೆ ಸಂವಾದ ನಡೆಸಿದ್ದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

no 10 percent grace marks sslc students education minister madhu bangarappa

ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಈ ಬಾರಿ ಪರೀಕ್ಷೆಯಲ್ಲಿ ಜಾರಿ ಮಾಡಲಿರುವ ಕಠಿಣ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆಗಳನ್ನು ನಡೆಸಿದ್ದೇವೆ, ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಮತ್ತ ಶಾಲೆಗೆ ಸೇರುವ ವ್ಯವಸ್ಥೆ ಕೂಡ ಇದ್ದು ಅದನ್ನು ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ. ಜಿಲ್ಲಾ ಅಧಿಕಾರಿಗಳ ಜೊತೆ ಕೂಡ ಪರಿಶೀಲನಾ ಸಭೆಗಳನ್ನು ನಡೆಸಿದ್ದು ಈ ಬಾರಿ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ, ವಿದ್ಯಾರ್ಥಿಗಳ ಮೇಲ ಒತ್ತಡ ಹೇರಬಾರದು ಎಂದು ಹೇಳಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವರ್ಷ ನೀಡಿದ್ದ ಗ್ರೇಸ್ ಅಂಕಗಳನ್ನು ವಿರೋಧಿಸಿದರು. ಈ ವರ್ಷ ಯಾವುದೇ ಕಾರಣಕ್ಕೂ ಗ್ರೇಸ್ ಅಂಕಗಳನ್ನು ನೀಡುವುದಿಲ್ಲ, ಕೋವಿಡ್ ಸಮಯದಲ್ಲಿ ನೀಡಲಾದ 10% ಅಂಕಗಳನ್ನು ನಾವು ಪರಿಶೀಲನೆ ಮಾಡುತ್ತೇವೆ, ಈ ವರ್ಷ ಯಾವುದೇ ಗ್ರೇಸ್‌ ಅಂಕಗಳು ಇರುವುದಿಲ್ಲ ಎಂದು ಹೇಳಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ಸುಧಾರಿಸಲು ದಿನಕ್ಕೆ ಒಂದು ಅಂಕ ಕಾರ್ಯಕ್ರಮ, ಮುಂಜಾನೆ ಅಧ್ಯಯನ, ವಿಶೇಷ ತರಗತಿಗಳು, ಅಣಕು ಪರೀಕ್ಷೆಗಳು ಮತ್ತು ಗುಂಪು ಅಧ್ಯಯನ ಅವಧಿಗಳಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದರು.

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಗ್ರೇಸ್ ಅಂಕಗಳನ್ನು ನೀಡಲಾಗಿತ್ತು, ಈ ವರ್ಷ ಹೆಚ್ಚುವರಿ ಅಂಕಗಳನ್ನು ಕೊಡುವುದಿಲ್ಲ. ಕಳೆದ ವರ್ಷದಿಂದ ನಾವು 20% ಗ್ರೇಸ್ ಅಂಕಗಳ ಕ್ರಮವನ್ನು ಪುನರಾವರ್ತನೆ ಮಾಡುವುದಿಲ್ಲ ಎಂದು ಹೇಳಿದರು.

ಚರ್ಚೆ ವೇಳೆ ವಿದ್ಯಾರ್ಥಿಗಳು ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಕೊಡುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆಯುವ ಶೀಘ್ರದಲ್ಲೇ ಇವುಗಳ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತದೆ. ಕೌಶಲ್ಯ ಆಧಾರಿತ ಕಲಿಕಾ ಕಾರ್ಯಕ್ರಮಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+