National Highways: ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ ದುರಸ್ತಿ ಕುರಿತು ಮಹತ್ವದ ಅಪ್ಡೇಟ್
National Highways: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಿದೆ. ಈ ನಡುವೆಯೇ ಈಗಾಗಲೇ ಇರುವ ಕೆಲ ರಾಷ್ಟ್ರೀಯ ಹೆದ್ದಾರಿಗಳ ಮೇಲ್ದರ್ಜೆ ಕಾರ್ಯಗಳು ಕೂಡ ನಡಯುತ್ತಿದೆ. ಇನ್ನೂ ಇದೀಗ ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ NH ದುರಸ್ತಿ ಕುರಿತು ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ರಾಜ್ಯದಲ್ಲಿ ಹಲವೆಡೆ ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ. ಹಾಗೆಯೇ ಬಹುದಿನಗಳಿಂದಲೂ ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಪಡಿಸುವಂತೆ ಮನವಿ ಮಾಡುತ್ತಲಿದ್ದರು. ಇದೀಗ ಕೊನೆಗೂ ಈ ಮನವಿಗೆ ಸ್ಪಂದಿಸಿದ ಕೇಂದ್ರ ಹೆದ್ದಾರಿ ಸಚಿವಾಯಲ ಒಪ್ಪಿಗೆ ಸೂಚಿಸಿದೆ.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ವಿಜಯಪುರ - ಚಿತ್ರದುರ್ಗ ಮತ್ತು ವಿಜಯಪುರ - ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರ ದುರಸ್ಥಿಗೆ ಆಗ್ರಹಿಸಿ ಪತ್ರ ಬರೆದಿದ್ದರು. ಇದಕ್ಕೆ ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸ್ಪಂದಿಸಿದ್ದಾರೆ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿ ಪತ್ರದ ಮೂಲಕ ತಿಳಿಸಿದ್ದಾರೆ.
ಶಾಸಕ ಸುನೀಲಗೌಡ ಪಾಟೀಲ ಅವರು ಕಳೆದ ತಿಂಗಳು ನವೆಂಬರ್ 24ರಂದು ಕೇಂದ್ರ ಸಚಿವ ನಿತಿನ ಗಡ್ಕರಿ ಅವರಿಗೆ ಈ ಕುರಿತು ಪತ್ರ ಬರೆದಿದ್ದರು. ರಾಷ್ಟ್ರೀಯ ಹೆದ್ದಾರಿ 50 ಮಹಾರಾಷ್ಟ್ರದ ಸೊಲ್ಲಾಪುರದಿಂದ ಪ್ರಾರಂಭವಾಗಿ ಕರ್ನಾಟಕದ ವಿಜಯಪುರ-ಚಿತ್ರದುರ್ಗ ಮೂಲಕ ಬೆಂಗಳೂರನ್ನು ಸಂಪರ್ಕಿಸು ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರವನ್ನು ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದೆ. ವಿಜಯಪುರದಿಂದ ಚಿತ್ರದುರ್ಗದವರೆಗೆ ರಸ್ತೆ ಹಾಳಾಗಿದೆ. ವಿಜಯಪುರ- ಸೊಲ್ಲಾಪುರ ನಡುವಿವ ರಾಷ್ಟ್ರೀಯ ಹೆದ್ದಾರಿ ಕೂಡ ಹಾಳಾಗಿದೆ. ಎರಡೂ ಮಾರ್ಗಗಳಲ್ಲಿ ರಸ್ತೆ ಮಧ್ಯದಲ್ಲಿ ಗಂಡಿಗಳು ಬಿದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರತಿನಿತ್ಯ ಏನಿಲ್ಲಾ ಅಂದರೂ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚಾರ ಮಾಡುತ್ತವೆ. ವಿಜಯಪುರದಿಂದ ಬೆಂಗಳೂರು ಮಾರ್ಗದಲ್ಲಿ ಹುನಗುಂದ, ಕುಷ್ಟಗಿ ಹಾಗೂ ಹೊಸಪೇಟೆಗಳಿಗೆ ಬೇರೆ ಹೆದ್ದಾರಿಗಳು ಸಂಪರ್ಕಿಸುತ್ತವೆ. ಆದ್ದರಿಂದ ಆ ಮಾರ್ಗದ ವಾಹನಗಳೂ ಇದೇ ರಸ್ತೆಗೆ ಬರುವುದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ಆದ್ದರಿಂದ ಗುಂಡಿಬಿದ್ದಿರುವ ರಸ್ತೆಯನ್ನು ದುರಸ್ತಿಪಡಿಸಿ ಎಂದು ಮನವಿ ಮಾಡಿದ್ದರು.
ಅಲ್ಲದೆ, ಅತೀ ಹೆಚ್ಚು ಟೋಲ್ ಸಂಗ್ರಹವಾಗುವ ಮಾರ್ಗಗಳಲ್ಲಿ ಇದು ಒಂದಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಪ್ರತಿದಿನ ದುಬಾರಿ ಹಣ ಹಣ ಸಂಗ್ರಹ ಆಗುತ್ತಿದ್ದರೂ ಸಹ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾನದಂಡಕ್ಕೆ ಅನುಗುಣವಾಗಿರದೇ ಕಳಪೆಯಿಂದ ಕೂಡಿದೆ. ಈ ರಸ್ತೆಯನ್ನು ನಿರ್ದಿಷ್ಟ ಮಾನದಂಡಗಳಿಗೆ ಅನುಗುಣವಾಗಿ ದುರಸ್ತಿ ಮಾಡಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.
ರಸ್ತೆ ಗುಂಡಿಗಳನ್ನು ಮುಚ್ಚುವುದರ ಜೊತೆಗೆ, ಅಗತ್ಯ ಇರುವ ಕಡೆ ಹೆದ್ದಾರಿಯನ್ನು ಅಗಲೀಕರಣಗುಳಿಸಬೇಕು ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದರು. ಇದರಿಂದ ಈ ಮಾರ್ಗದಲ್ಲಿ ಬರುವ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕಂತಾಗಲಿದೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಇದಕ್ಕೆ ಕೇಂದ್ರ ಸಚಿವ ನಿತಿನ ಗಡ್ಕರಿ ಸ್ಪಂದಿಸಿದ್ದಾರೆ. ಶಾಸಕ ಸುನೀಲಗೌಡ ಪಾಟೀಲ ಅವರು ಪ್ರಸ್ತಾಪಿಸಿರುವ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಪತ್ರದಲ್ಲಿ ಉತ್ತರಿಸಿದ್ದಾರೆ. ಹಾಗಾದ್ರೆ, ಈ ದುರಸ್ತಿ ಕಾರ್ಯ ಯಾವಾಗ ಆರಂಭವಾಗುತ್ತದೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications