ಪ್ರೊ.ನಿಸಾರ್ ಅಹಮದ್‌ಗೆ ಪಂಪ ಪ್ರಶಸ್ತಿ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 31 : 2017ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ.ನಿಸಾರ್ ಅಹಮದ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 3 ಲಕ್ಷ ನಗದು, ಪುರಸ್ಕಾರ, ಸ್ಮರಣಿಕೆಯನ್ನು ಒಳಗೊಂಡಿದೆ.

2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಪಂಪ ಪ್ರಶಸ್ತಿಯೂ ಸೇರಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ: ನಿಸಾರ್ ಅಹ್ಮದ್

Nisar Ahmed chosen for Pampa Award 2017

1987ರಿಂದ ಕರ್ನಟಕ ಸರ್ಕಾರ ಪಂಪ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯೂ 3 ಲಕ್ಷ ರೂ. ನಗದು, ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಹಲವು ಪ್ರಶಸ್ತಿಗಳು ಪ್ರಕಟ : ಕರ್ನಾಟಕ ಸರ್ಕಾರ ಹಲವು ಪ್ರಶಸ್ತಿಗಳನ್ನು ಸೋಮವಾರ ಘೋಷಣೆ ಮಾಡಿದೆ.

* ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ - ಸ.ಉಷಾ
* ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ - ಬಿ.ಎ.ಜಮಾದಾರ
* ಕನಕಶ್ರೀ ಪ್ರಶಸ್ತಿ - ಡಾ.ಕೆ.ಗೋಕುಲನಾಥ
* ಸಂಗೊಳ್ಳಿ ರಾಯಣ್ಣ ಪ್ರಶಸ್ತಿ - ಜಿ.ಮಾದೇಗೌಡ
* ಅಕ್ಕ ಮಹಾದೇವಿ ಪ್ರಶಸ್ತಿ - ಅಕ್ಕ ಮಹಾದೇವಿ ಸಮಿತಿ ಉಡುತಡಿ, ಶಿವಮೊಗ್ಗ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada poet Nisar Ahmed has been chosen for the prestigious Pampa award 2017. Award instituted by the Karnataka government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ