Munirathna Naidu: ಮುನಿರತ್ನಂ ನಾಯ್ಡು ಕುರಿತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಖಡಕ್ ಎಚ್ಚರಿಕೆ ಮಾತು!
ಮುನಿರತ್ನಂ ನಾಯ್ಡು ವಿರುದ್ಧ ಕರ್ನಾಟಕದ ಮೂಲೆ ಮೂಲೆಯಲ್ಲೂ ಆಕ್ರೋಶ ತೀವ್ರವಾಗಿ, ಪ್ರತಿಭಟನೆ ಆರಂಭ ಆಗಿವೆ. ಪರಿಸ್ಥಿತಿ ಹೀಗಿದ್ದಾಗ ದಲಿತ ಸಮುದಾಯ & ಒಕ್ಕಲಿಗ ಸಮುದಾಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಮುನಿರತ್ನಂ ನಾಯ್ಡು ಎಂಬ ಗಂಭೀರ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮುನಿರತ್ನಂ ನಾಯ್ಡು ಒಕ್ಕಲಿಗ ಸಮುದಾಯ & ದಲಿತ ಸಮುದಾಯದ ಬಗ್ಗೆ ನಿಂದನೆ ಮಾಡಿ ಮಾತನಾಡಿರುವುದು ಸಾಬೀತು...
ಮುನಿರತ್ನಂ ನಾಯ್ಡುಗೆ ತಮ್ಮದೇ ಆಡಿಯೋ ಮುಳುವಾಗಿ ಪರಿಣಮಿಸಿದ್ದು, ಪೊಲೀಸ್ ಪಡೆ ಕೇಳುತ್ತಿರುವ ಪ್ರಶ್ನೆಗೆ ನಲುಗಿ ಹೋಗಿದ್ದಾರೆ ಮುನಿರತ್ನಂ ನಾಯ್ಡು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಒಕ್ಕಲಿಗರು & ದಲಿತರು ಹಾಗೂ ಕನ್ನಡ ನಾಡಿನ ಮಹಿಳೆಯರ ಕುರಿತಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ, ಮುನಿರತ್ನಂ ನಾಯ್ಡುಗೆ ಪಾಠ ಕಲಿಸಲು ದೊಡ್ಡ ಮಟ್ಟದ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ, ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಶ್ರೀಗಳು ಕೂಡ, ಮುನಿರತ್ನಂ ನಾಯ್ಡು ವಿರುದ್ಧದ ಆರೋಪದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ...
ಮುನಿರತ್ನಂ ನಾಯ್ಡು ವಿರುದ್ಧ ಕರ್ನಾಟಕದ ಹಲವು ಕಡೆ ಈಗಾಗಲೇ ಕೇಸ್‌ಗಳನ್ನ ದಾಖಲು ಮಾಡಲು ಸಿದ್ಧತೆ ಸಾಗಿದೆ. ಅದರಲ್ಲೂ ಬಿಜೆಪಿ ನಾಯಕರಿಗೆ ಈ ವಿಚಾರ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮುನಿರತ್ನಂ ನಾಯ್ಡು ವಿರುದ್ಧ ಕೇಳಿಬಂದ ಆರೋಪ ಬಗ್ಗೆ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ ಶಾಸಕ ಮುನಿರತ್ನಂ ನಾಯ್ಡು ಅವರದ್ದು ಎನ್ನಲಾದ ಆಡಿಯೋ ಕುರಿತು ಬೇಸರ ಹೊರ ಹಾಕಿದ್ದಾರೆ.
ಕ್ಷಮಿಸಲು ಸಾಧ್ಯವಿಲ್ಲ ಎಂದ ಶ್ರೀಗಳು
ಇದೀಗ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಶ್ರೀಗಳು ಹೇಳಿದ ಪ್ರಕಾರ, ಆಧುನಿಕತೆ ಬೆಳೆದಿದೆ ಅಂತ ಯಾವ ಕಾರಣಕ್ಕು ನಮ್ಮ ಸಂಸ್ಕೃತಿ ಮರೆಯಬಾರದೆಂದು ತಿಳಿಸಿದರು. ಅಲ್ಲದೆ ಪ್ರತಿಯೊಂದು ಜನಾಂಗವನ್ನ ನಮ್ಮ ಸಂವಿಧಾನ ಒಪ್ಪಿಕೊಂಡಿದೆ, ಹಿಂದೆ ಉರಿಗೌಡ, ನಂಜೇಗೌಡ ವಿಚಾರಕ್ಕೆ ಕರೆದು ಮುನಿರತ್ನಗೆ ಬುದ್ದಿ ಮಾತು ಹೇಳಿದ್ದೆ. ಆಗ ಅವರು ನಿಲ್ಲಿಸಿದ್ದರು. ಈಗ ಈ ವಿಚಾರದಲ್ಲಿ ಧ್ವನಿ ಪರೀಕ್ಷೆ ನಿಜ ಆಯ್ತು ಅಂದರೆ, ಈ ರೀತಿ ಮಾತನ್ನು ಆಡಿದವರನ್ನ ಕ್ಷಮಿಸಲು ಸಾಧ್ಯ ಇಲ್ಲ ಎಂದಿದ್ದಾರೆ. ಅಲ್ಲದೆ ತಾಯಂದಿರನ್ನ ಗೌರವಿಸುವ ಈ ನಮ್ಮ ದೇಶದಲ್ಲಿ ಪೂಜ್ಯನೀಯ ಸ್ಥಾನ ಇದೆ. ಈ ಆಡಿಯೋದಲ್ಲಿ ಮಾತನಾಡಿದವರು ಯಾರೇ ಆದರೂ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.












Click it and Unblock the Notifications