Google: ನಂದನ್ ನಿಲೇಕಣಿ ಅವರಿಗೇ ಹೆಚ್ಚು ಬೇಡಿಕೆ
ಬೆಂಗಳೂರು, ಮಾರ್ಚ್ 28- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇದ್ದಾರಲ್ಲಾ ಅದೇ ಮಾಹಿತಿ ತಂತ್ರಜ್ಞಾನದ ಅಗ್ರಗಣ್ಯ ನಂದನ್ ನಿಲೇಕಣಿ ಅವರು. ಅವರ ಬಗ್ಗೆ ಜನ ಕುತೂಹಲ ಬೆಳೆಸಿಕೊಂಡು, Googleನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡ್ತಿದ್ದಾರೆ.
most searched Nandan Nilekani: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ನಾಯಕರಿಗಿಂತ Googleನಲ್ಲಿ ನಿಲೇಕಣಿ ಅವರೇ ಹೆಚ್ಚು ಬೇಡಿಕೆ ಪಡೆದಿದ್ದಾರೆ. ರಾಜ್ಯ ರಾಜಕೀಯದ ದಿಗ್ಗಜರಾದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಅವರು ಗೂಗಲ್ ನಲ್ಲಿ ನಿಲೇಕಣಿಗಿಂತ ಹಿಂದಿದ್ದಾರೆ ಎಂದು Google ಸಂಸ್ಥೆ ತಿಳಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಮ್ಮ ರಾಜಕಾರಣಿಗಳಲ್ವಾ ಅವರಿಗೆ ಇಂಟರ್ನೆಟ್ ತಿಳಿವಳಿಕೆ ಹೆಚ್ಚಾಗಿರುವುದಿಲ್ಲ ಬಿಡಿ. ಅದಕ್ಕೆ ನಿಲೇಕಣಿ ಅವರು ಮುಂದಿದ್ದಾರೆ ಅನ್ನುವ ಹಾಗಿಲ್ಲ. ಏಕೆಂದರೆ ಮಾಹಿತಿ ತಂತ್ರಜ್ಞಾನದ ಮತ್ತೊಬ್ಬ ಅಗ್ರಗಣ್ಯ, ಆ ಕ್ಷೇತ್ರದಿಂದ ಈ ಬಾರಿ ಚುನಾವಣಾ ಕಣಕ್ಕಿಳಿದಿರುವ ಮತ್ತೊಬ್ಬ high profile ವ್ಯಕ್ತಿ ವಿ ಬಾಲಕೃಷ್ಣನ್ ಅವರೂ ಸಹ ನಿಲೇಕಣಿಗಿಂತ ಹಿಂದಿದ್ದಾರೆ.
ಅಂದಹಾಗೆ ಬಾಲಕೃಷ್ಣನ್ ಅವರು ನಿಲೇಕಣಿ ಸ್ಪರ್ಧಿಸುತ್ತಿರುವ (ಬೆಂಗಳೂರು ದಕ್ಷಿಣ) ಕ್ಷೇತ್ರಕ್ಕೆ ಅಂಟಿಕೊಂಡಂತಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಇನ್ಫೋಸಿಸ್ ಕಂಪನಿಯ ನಿರ್ದೇಶಕರಾಗಿದ್ದ ಬಾಲಕಷ್ಣನ್ ಅವರಿಗೆ ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಾದ ನಿಲೇಕಣಿ ಅವರಷ್ಟು ಜನರಿಂದ ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಎಂದು Google ಸಂಸ್ಥೆ ವಿಶ್ಲೇಷಿಸಿದೆ.
ಕಳೆದ 3 ತಿಂಗಳಿಂದ ಕರ್ನಾಟಕ ರಾಜಕೀಯದ ಬಗ್ಗೆ ಅಧ್ಯಯನ ಮಾಡಿದಂತೆ Google ಸಂಸ್ಥೆಗೆ ಕೆಲ ಒಳಸುಳಿವುಗಳು ಗೋಚರವಾಗಿವೆ. ಏನಪ್ಪಾ ಅಂದರೆ ಕರ್ನಾಟಕದ ಜನ ರಾಜ್ಯ ರಾಜಕಾರಣಿಗಳಿಗಿಂತ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರುಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕುತೂಹಲದ ಸಂಗತಿಯೆಂದರೆ 2013 ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಕೇಜ್ರಿವಾಲ್ ಅವರಗಿಂತ ರಾಹುಲ್ ಗಾಂಧಿ ತುಂಬಾ ಹಿಂದೆ ಬಿದ್ದಿದ್ದಾರೆ.












Click it and Unblock the Notifications