ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಜನವರಿ11: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ರುಚಿ ತೋರಿಸಲು ಪಣತೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ಲೋಕಸಮರಕ್ಕೆ ಸಜ್ಜಾಗಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದರೆ, ಮೈತ್ರಿ ಅಭ್ಯರ್ಥಿಗಳಿಗೂ ಲಾಭವಾಗಲಿದೆ ಎಂಬ ಚಿಂತನೆ ಬಿಜೆಪಿ ನಾಯಕರಲ್ಲಿದೆ.
ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೊದು ವಿಷಯ ಅಲ್ಲ. ಮಂಡ್ಯ ಲೋಕಸಭಾ ಸ್ಥಾನವನ್ನ ಜೆಡಿಎಸ್ ಪಡೆದುಕೊಳ್ಳುವುದು ಮುಖ್ಯ. ನಂತರ ಮುಂದಿನ ದಿನಗಳಲ್ಲಿ ಸ್ಪರ್ಧೆ ಯಾರು ಮಾಡ್ತಾರೆ ಅಂತಾ ನಿರ್ಧಾರ ಆಗುತ್ತದೆ ಎಂದು ಹೇಳಿದರು.

ಮಂಡ್ಯದಲ್ಲಿ ತಮ್ಮ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನನ್ನ ವಯ್ಯಕ್ತಿಕ ಅಭಿಪ್ರಾಯ ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಒಂದು ದಿನ ಮಾತಾಡಿ ಮತ್ತೊಂದು ದಿನ ಬೇರೆ ಮಾತಾಡುವ ವ್ಯಕ್ತಿತ್ವ ಅಲ್ಲಾ ನಂದು. ನಾನು ಅಕಾಂಕ್ಷಿ ಅಲ್ಲಾ ಅಂತಾ ಹಲವು ಬಾರಿ ಹೇಳಿದ್ದೇನೆ. ಮಂಡ್ಯ ಜಿಲ್ಲೆಯ ಸಭೆಯನ್ನ ಮಾಡ್ತಿದ್ದೇವೆ, ಯಾರು ಸ್ಪರ್ಧೆ ಮಾಡಬೇಕೆಂದು ಚರ್ಚೆಯಾಗುತ್ತದೆ. ಮಂಡ್ಯದಲ್ಲಿ ಯಾರು ನಿಲ್ಲಬೇಕೆಂದು ಚರ್ಚೆ ಶುರುವಾಗಿದೆ ಕುಮಾರಸ್ವಾಮಿ , ದೇವೇಗೌಡ್ರು ಹಾಗೂ ಮುಖಂಡರು ಸಂಭಾವ್ಯ ಆಕಾಂಕ್ಷಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ ಸಭೆ ವಿಚಾರವಾಗಿ ಮಾತನಾಡಿ, ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರ್ತಿದೆ. ಇವತ್ತು ಕೋಲಾರ ಕ್ಷೇತ್ರದ ಚುನಾವಣೆ ಸಿದ್ದತೆ ಬಗ್ಗೆ ಶಾಸಕರು, ಮಾಜಿ ಶಾಸಕರು ಮುಖಂಡರ ಜೊತೆ ಸಭೆ ನಡೆಸ್ತಿದ್ದೇವೆ. ಕೋಲಾರ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳ ಹೆಸರು ಚರ್ಚೆ ಆಗ್ತಾಯಿದೆ. ಇವತ್ತು ಸಂಭಾವ್ಯ ಅಭ್ಯರ್ಥಿಗಳು ಯಾರು ಆಗಬೇಕು ಅಲ್ಲಿನ ಮುಖಂಡರ ಅಭಿಪ್ರಾಯ ಕೇಳಲು ಸಭೆ ಕರೆದಿದ್ದೇವೆ, ಜೊತೆಗೆ ಅಲ್ಲಿನ ಜನತೆ ಅಭಿಪ್ರಾಯ ಹಾಗು ಗ್ರೌಂಡ್ ರಿಯಾಲಿಟಿ ಬಗ್ಗೆ ಪಕ್ಷ ಮಾಹಿತಿ ಕಲೆಹಾಕುತ್ತೇವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡುತ್ತೇವೆ ಎಂದರು.
ನಮಗೆ ಸಿಗುವ ಸ್ಥಾನಗಳಲ್ಲಿ ಎಲ್ಲಾ ಗೆಲ್ಲಬೇಕು. ದೇವೇಗೌಡರು ತೆಗದುಕೊಂಡ ಎನ್ ಡಿ ಎ ಜೊತೆಗೆ ಸಂಬಂದ ಒಳ್ಳೆ ಉದ್ಧೇಶದಿಂದ ತೆಗದುಕೊಂಡಿರುವ ನಿರ್ಧಾರ, ನರೇಂದ್ರ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವನ್ನ ನಾವೆಲ್ಲಾ ಕಂಡಿದ್ದೇವೆ. ನಮ್ಮನ್ನ ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಹಾಗಾಗಿ ಒಳ್ಳೆ ಉದ್ದೇಶದಿಂದ ಕೈ ಜೋಡಿಸಿದ್ದೇವೆ. 28 ಕ್ಷೇತ್ರಗಳಲ್ಲು ಬಿಜೆಪಿ , ಜೆಡಿಎಸ್ ಅಣ್ಣತಮ್ಮಂದಿರಂತೆ ದುಡಿದು ಗೆಲ್ಲಬೇಕು. ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಪಕ್ಷದ ಜೆಡಿಎಸ್ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಜನರು ಶಕ್ತಿ ತುಂಬಿಸ್ತಾರೆ ಎಂಬ ನಿರೀಕ್ಷೆ ನಮಗೆ ಇದೆ ಎಂದು ತಿಳಿಸಿದರು.
ಬಿಜೆಪಿ ಜೊತೆಗೆ ಮೈತ್ರಿಯಿಂದ ಎಷ್ಟು ಕ್ಷೇತ್ರ ಜೆಡಿಎಸ್ ಗೆ ಸಿಗಲಿದೆ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ತಿಂಗಳು ಕುಮಾರಸ್ವಾಮಿ ಹಾಗು ನಮ್ಮ ನಾಯಕರು ದೆಹಲಿಗೆ ಹೋಗ್ತಾರೆ. ಅದಕ್ಕೆ ಒಂದು ದಿನಾಂಕ ನಿಗದಿಯಾಗುತ್ತದೆ, ಅತಿ ಶೀಘ್ರದಲ್ಲಿ ನಿಮ್ಮೆಲ್ಲರಿಗು ಸಿಹಿ ಸುದ್ದಿಕೊಡುತ್ತೇವೆ ಎಂದು ತಿಳಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜನವರಿ 22 ರಂದು ಕಾಕತಾಳೀಯ ಏನೊ ಗೊತ್ತಿಲ್ಲಾ, ನನ್ನ ಹುಟ್ಟಹಬ್ಬದ ದಿನ ಐತಿಹಾಸಿಕವಾದ ಕ್ಷಣ. ಇಡೀ ದೇಶದ ಜನ ಐತಿಹಾಸಿಕ ದಿನವನ್ನ ಎದುರುನೊಡ್ತಿದ್ದಾರೆ. 22 ರಂದು ರಾಮಮಂದಿರ ಉದ್ಘಾಟನಾ ಮಾಡ್ತಿದ್ದಾರೆ. ಇದಕ್ಕಿಂತ ಖುಷಿಯಾದ ವಿಚಾರ ಇನ್ನೊಂದಿಲ್ಲ, ಪ್ರತಿಯೊಬ್ಬ ಭಾರತಿಯರಿಗು ಐತಿಹಾಸಿಕವಾದಂತಹ ಕ್ಷಣ. ಹೀಗಾಗಿ ಕೆಲವೊಂದು ಕಾರ್ಯಕ್ರಮಗಳ ಮೂಲಕ ಸೇವೆ ಮಾಡಬೇಕಂತ ಅಂದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.












Click it and Unblock the Notifications