Nikhil Kumaraswamy: ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಭಾರಿ ಭರ್ಜರಿ ಗೆಲುವು...

ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಕೇಂದ್ರ ಬಿಜೆಪಿ ನಾಯಕ ಪಡೆಯ ಅಭಯ ಹಸ್ತ ಕೂಡ ಇತ್ತು. ನಿಖಿಲ್ ಕುಮಾರಸ್ವಾಮಿ ಗೆಲುವು ಜೆಡಿಎಸ್ ಪಕ್ಷದಲ್ಲಿ ಮಾತ್ರವಲ್ಲ, ಕರ್ನಾಟಕ ಬಿಜೆಪಿಗೆ ಕೂಡ ಹೊಸ ಹುಮ್ಮಸ್ಸು ತುಂಬುವ ನಿರೀಕ್ಷೆ ಇತ್ತು. ಈ ಕಾರಣಕ್ಕೆ ಬಿಜೆಪಿ ಘಟಾನುಘಟಿ ನಾಯಕರು ಕೂಡ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ್ದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಗ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಉಪಚುನಾವಣೆಯ ಅಖಾಡ ಮಾಡು ಇಲ್ಲವೆ ಮಡಿ ಹೋರಾಟವಾಗಿತ್ತು. ಹೀಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಭರ್ಜರಿ ಪ್ರಚಾರ & ಹೋರಾಟ ನಡೆದು ಹೋಗಿತ್ತು. ನಿಖಿಲ್ ಕುಮಾರಸ್ವಾಮಿ ಗೆದ್ದು ಬೀಗಬೇಕು ಎಂಬ ಒನ್‌ಲೈನ್ ಅಜೆಂಡಾ ಜೊತೆಗೆ ಭರ್ಜರಿ ಹೋರಾಟ ಕೂಡ ನಡೆದಿದೆ. ಹೀಗಿದ್ದಾಗ ಹೊಸ ಅಲೆ ಇದೀಗ ಮೂಡಿದೆ. ಅದು ಏನಂದ್ರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಭಾರಿ ಭರ್ಜರಿ ಗೆಲುವು...

Nikhil Kumaraswamy Have Winning Chances Very High And This Is What Channapatna Voters Are Saying Now

ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಗೆಲುವು?

ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಮುಗಿದ ನಂತರ ಯಾರಿಗೆ ಗೆಲುವು? ಎಂಬ ಪ್ರಶ್ನೆ ಮೂಡಿದ್ದು, ಸ್ಥಳೀಯ ಮತದಾರರು ವಿವಿಧ ರೀತಿಯ ಚರ್ಚೆಗಳನ್ನ ನಡೆಸುತ್ತಾ ತಮ್ಮದೇ ಅಭಿಪ್ರಾಯ ಮುಂದೆ ಇಡುತ್ತಿದ್ದಾರೆ. ಅದರಲ್ಲೂ ಚನ್ನಪಟ್ಟಣ ಉಪಚುನಾವಣೆಯ ರಿಸಲ್ಟ್ ಬರುವುದಕ್ಕೂ ಮೊದಲೇ ನಿಖಿಲ್ ಕುಮಾರಸ್ವಾಮಿ ಅವರಿಗೆ ಭರ್ಜರಿ ಗೆಲುವು ಅಂತಾ ಹೇಳುತ್ತಿದ್ದಾರೆ. ಹೀಗಾಗಿ ಇದೀಗ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.

ಚನ್ನಪಟ್ಟಣದಲ್ಲಿ ಗೆದ್ದು ಬೀಗುವುದು ಯಾರು?

ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ನಿರ್ಧಾರ ಆಗುವುದೇ ಚನ್ನಪಟ್ಟಣದ ಉಪಚುನಾವಣೆ ಫಲಿತಾಂಶದ ಮೇಲೆ. ಹೀಗಾಗಿ ಚನ್ನಪಟ್ಟಣದ ಉಪಚುನಾವಣೆ ಗೆಲುವಿಗೆ, ನಿಖಿಲ್ ಅವರ ಪರವಾಗಿ ಎಲ್ಲಾ ರೀತಿಯ ಎಫರ್ಟ್ ಹಾಕಿ ಪ್ರಚಾರವನ್ನು ನಡೆಸಲಾಗಿತ್ತು. ಹೌದು, 2019ರ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಸುಮಲತಾ ಅಂಬರೀಶ್ ಅವರ ಎದುರು ಸೋತಿದ್ದ ನಿಖಿಲ್ ಅವರು ಮೊದಲ ಹಿನ್ನಡೆ ಅನುಭವಿಸಿದ್ದರು. ಆ ನಂತರ ಕೂಡ ಅವರಿಗೆ ಸೋಲಾಗಿತ್ತು.

ಮೊದಲ ಸೋಲಿನ ನಂತರ ರಾಮನಗರ ವಿಧಾನಸಭೆ ಚುನಾವಣೆ 2023ರಲ್ಲೂ ಸೋತಿದ್ದರು. ಹೀಗಿದ್ದಾಗಲೇ, ಚನ್ನಪಟ್ಟಣ ಕ್ಷೇತ್ರ ಇದೀಗ ನಿಖಿಲ್ ಅವರ ಭವಿಷ್ಯ ನಿರ್ಧಾರ ಮಾಡಲಿದೆ. 2 ಲಕ್ಷಕ್ಕೂ ಹೆಚ್ಚು ಮತದಾರರು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಇದ್ದಾರೆ. ಚನ್ನಪಟ್ಟಣ ಕ್ಷೇತ್ರದ ಮತದಾರರ ಪೈಕಿ ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದು, ಈ ಕ್ಷೇತ್ರದಲ್ಲಿ ಬರೋಬ್ಬರಿ 1.05 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ. ಮತದಾನ ನಂತರ ಇದೀಗ, ಸ್ಥಳೀಯ ಮತದಾರರು ಮಾತನಾಡ್ತಾ ಇರುವ ಪ್ರಕಾರ ನಿಖಿಲ್ ಅವರ ಗೆಲುವು ಗ್ಯಾರಂಟಿ ಎನ್ನಲಾಗುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+