ಕುರುಕ್ಷೇತ್ರ ಸಿನಿಮಾ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ

Recommended Video

      ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ..? | Oneindia Kannada

      ಬೆಂಗಳೂರು, ಆಗಸ್ಟ್ 13: ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಮಿಡಿದಿರುವ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಾವು ನಟಿಸಿದ ಕುರುಕ್ಷೇತ್ರ ಚಿತ್ರದಿಂದ ಬಂದ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನೀಡಲು ನಿರ್ಧರಿಸಿದ್ದಾರೆ.

      ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, ಕುರುಕ್ಷೇತ್ರ ಸಿನಿಮಾದಿಂದ ಬಂದ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರ ನೆರವಿಗೆಂದು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಎಷ್ಟು ಸಂಭಾವನೆ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

      ನಿಖಿಲ್ ಕುಮಾರಸ್ವಾಮಿ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕುರುಕ್ಷೇತ್ರ ಸಿನಿಮಾವು ಕಳೆದ ವಾರವಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

      ಜೆಡಿಎಸ್ ಯುವ ಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರು, ನೆರೆ ಸಂತ್ರಸ್ತರಿಗಾಗಿ ಪಕ್ಷದ ವತಿಯಿಂದ ಹಲವು ಅಗತ್ಯ ಸಾಮಗ್ರಿಗಳನ್ನು ನೆರೆ ಪೀಡಿತ ಜಿಲ್ಲೆಗಳಿಗೆ ಕೆಲವು ದಿನಗಳ ಹಿಂದಷ್ಟೆ ಕಳುಹಿಸಿದ್ದರು. ಅಗತ್ಯ ವಸ್ತುಗಳ ತುಂಬಿದ್ದ ಲಾರಿಗಳು ಜೆಪಿ ನಗರದ ಪಕ್ಷದ ಕಚೇರಿಯಿಂದ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿದ್ದವು.

      ನಿಖಿಲ್ ಕುಮಾರಸ್ವಾಮಿ ಮಾತ್ರವಲ್ಲದೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರೂ ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನೀಡಿದ್ದಾರೆ. ಜೊತೆಗೆ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಹಾಯ ಮಾಡುತ್ತಿದ್ದಾರೆ.

      ದೇವೇಗೌಡ ಅವರು ತಮ್ಮ ಸ್ವಂತ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಮಧುರೈನಿಂದ ಸಂತ್ರಸ್ತರಿಗಾಗಿ 10,000 ಬೆಡ್‌ಗಳನ್ನು ತರಿಸಿ ಕೊಟ್ಟಿದ್ದಾರೆ.

      ಸಂತ್ರಸ್ತರ ನೆರವಿಗೆ ಸಂಬಳ ನೀಡಿದ ಪ್ರಜ್ವಲ್ ರೇವಣ್ಣ

      ಸಂತ್ರಸ್ತರ ನೆರವಿಗೆ ಸಂಬಳ ನೀಡಿದ ಪ್ರಜ್ವಲ್ ರೇವಣ್ಣ

      ನಿಖಿಲ್ ಕುಮಾರಸ್ವಾಮಿ ಮಾತ್ರವಲ್ಲದೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರೂ ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನೀಡಿದ್ದಾರೆ. ಜೊತೆಗೆ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಹಾಯ ಮಾಡುತ್ತಿದ್ದಾರೆ.

      ಸಂತ್ರಸ್ತರ ನೆರವಿಗೆ ದೇಣಿಗೆ ನೀಡಿದ ದೇವೇಗೌಡ

      ಸಂತ್ರಸ್ತರ ನೆರವಿಗೆ ದೇಣಿಗೆ ನೀಡಿದ ದೇವೇಗೌಡ

      ದೇವೇಗೌಡ ಅವರು ತಮ್ಮ ಸ್ವಂತ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ನಿನ್ನೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

      10,000 ಬೆಡ್ ತರಿಸಿಕೊಟ್ಟ ಕುಮಾರಸ್ವಾಮಿ

      10,000 ಬೆಡ್ ತರಿಸಿಕೊಟ್ಟ ಕುಮಾರಸ್ವಾಮಿ

      ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಮಧುರೈನಿಂದ ಸಂತ್ರಸ್ತರಿಗಾಗಿ 10,000 ಬೆಡ್‌ಗಳನ್ನು ತರಿಸಿ ಕೊಟ್ಟಿದ್ದಾರೆ.

      ಕಾಂಗ್ರೆಸ್-ಬಿಜೆಪಿ ವಿಶೇಷ ತಂಡ ರಚನೆ

      ಕಾಂಗ್ರೆಸ್-ಬಿಜೆಪಿ ವಿಶೇಷ ತಂಡ ರಚನೆ

      ಕಾಂಗ್ರೆಸ್ ಪಕ್ಷವು ನೆರೆ ಸಂತ್ರಸ್ತರ ಸಹಾಯಕ್ಕೆಂದು ವಿಶೇಷ ತಂಡವನ್ನು ರಚಿಸಿದ್ದು, ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸುತ್ತಿದ್ದಾರೆ. ಬಿಜೆಪಿ ಸಹ ವಿಶೇಷ ತಂಡವನ್ನು ರಚಿಸಿಕೊಂಡು ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+