ಜನವರಿ 25ರ ಬಳಿಕ ಹೊಸ ಮಾತದಾರರ ಕೈಸೇರಲಿದೆ ಗುರುತಿನ ಚೀಟಿ
ಬೆಂಗಳೂರು, ಜನವರಿ 10: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮತದಾರರಿಗೆ ಜನವರಿ 25 ರ ನಂತರ ಗುರುತಿನ ಚೀಟಿಯನ್ನು ವಿತರಿಸಲು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಜೀವ್ ಕುಮಾರ್ ಅವರು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜನವರಿ 25ರ ರಾಷ್ಟ್ರೀಯವ ಮತದಾರರ ದಿನದ ಅಂಗವಾಗಿ ಅಂದಿನಿಂದಲೇ ಗುರುತಿನ ಚೀಟಿಯನ್ನು ವಿತರಿಸಲು ತಿಳಿಸಿದ್ದಾರೆ. ಜನವರಿ 30ರೊಳಗಾಗಿ ವಿತರಣೆಯಾಗಿರುವ ಗುರುತಿನ ಚೀಟಿ ಕುರಿತು ವಿವರಗಳನ್ನು ಸಲ್ಲಿಸುವಂತೆ ಹೇಳಿದ್ದಾರೆ.
ಅವರು ನೀಡಿರುವ ಗುರುತಿನ ಚೀಟಿಯಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂಬುದನ್ನು ಜಿಲ್ಲಾ ಚುನಾವಣಾಧಿಕಾರಿಗಳು ದೃಢಪಡಿಸಬೇಕು. ಹಾಗೆಯೇ ಎಲ್ಲಾ ಮತದಾನ ಕೇಂದ್ರದ ಬಳಿ ವಿಕಲಾಂಗಚೇತನರಿಗೆ ಸುಲಭವಾಗಿ ತೆರಳಲು ದಾರಿಯನ್ನು ನಿರ್ಮಿಸಬೇಕು ಹಾಗೂ ವ್ಹೀಲ್ ಚೇರ್‌ಗಳ ವ್ಯವಸ್ಥೆ ಮಾಡಬೇಕು.

ಹಾಗೆಯೇ ಒಂದೇ ಪ್ರದೇಶದಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ದಿನಗಳಿಂದ ಕೆಲಸ ನಿರ್ವಹಿಸುತ್ತಿರುವ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳ ಮಾಹಿತಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ನೀಡುವಂತೆ ಸೂಚಿಸಿದ್ದಾರೆ.












Click it and Unblock the Notifications