New Highway: ಗದಗ-ಬಂಕಾಪುರ ಹೊಸ ಹೆದ್ದಾರಿ & ಗದಗ-ಯಲವಿಗಿ ರೈಲು ಸಂಪರ್ಕ ಯೋಜನೆ ಅಪ್ಡೇಟ್ಸ್
ಗದಗ, ಜುಲೈ 27: ಸಂಚಾರ ಸುಧಾರಣೆಗಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಎರಡು ಪ್ರಮುಖ ಮಹತ್ವದ ಯೋಜನೆಗಳು ಕೈಗೆತ್ತಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಗದಗ ಮತ್ತು ಲಕ್ಷ್ಮೇಶ್ವರ ಹೊಸ ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಗದಗ ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿವರಿಸಿದರು. ಹೊಸ ಯೋಜನೆಗಳ ಬಗ್ಗೆ ಅಪ್ಡೇಟ್ಸ್ ನೀಡಿದರು.
ಭಾನುವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಶ್ರೀ ವೀರಗಂಗಾಧರ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ ಯಾರ್ಡ್) ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣಪತಿ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಪಿಎಂಸಿಯಲ್ಲಿ ಗಣಪತಿ ದೇವಸ್ಥಾನ ಮಾಡಿದ್ದು,ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಡಿದ್ದಕ್ಕೆ ಸಂತೋಷವಾಗಿದೆ. ಗಣಪತಿ ವಿಘ್ನ ನಿವಾರಕ, ಏನೇ ಒಳ್ಳೆಯ ಕೆಲಸ ಮಾಡಬೇಕೆಂದರೆ ಗಣಪತಿಯ ಪೂಜೆ ಮಾಡುತ್ತೇವೆ. ಎಪಿಎಂಸಿ ಯಾರ್ಡ್ ನಲ್ಲಿ ವ್ಯಾಪಾರ ವ್ಯವಹಾರ ಎರಡು ಮೂರು ಪಟ್ಟು ಗಣಪತಿ ಆಶೀರ್ವಾದದಿಂದ ಹೆಚ್ಚಾಗಲಿ ಎಂದರು.
ಗದಗ ಬಂಕಾಪುರ ರಸ್ತೆ ಡಿಪಿಆರ್..
ತಮ್ಮೆಲ್ಲರ ಬೇಡಿಕೆ ಕಾರವಾರ ಇಲಕಲ್ ರಸ್ತೆ, ನಿಮ್ಮ ಪ್ರಕಾರ ಗದಗ ಬಂಕಾಪುರ ರಸ್ತೆ ಈಗಾಗಲೇ ಡಿಪಿಆರ್ ಆಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮತಿ ನೀಡುವುದು ನಿಂತಿರುವುದರಿಂದ ಅದು ಹಾಗೆ ಉಳಿದಿದೆ. ಹೊಸ ಹೈವೆ ಮಾಡುವ ಸಂದರ್ಭದಲ್ಲಿ ಮಾಡಿಕೊಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಖಂಡಿತವಾಗಿ ಅದು ಆಗುತ್ತದೆ. ಈ ಭಾಗದ ಜನರ ಬೇಡಿಕೆ ಈಡೇರಲಿದೆ.
ಇನ್ನೂ ಗದಗ-ಯಲವಿಗಿ ರೈಲು ಸಂಪರ್ಕದ ಕುರಿತು ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಮುಂದಿನ ಎರಡು ತಿಂಗಳಲ್ಲಿ ಡಿಪಿಆರ್ ಮುಗಿಯುತ್ತದೆ. ದೆಹಲಿಯಿಂದ ಒಪ್ಪಿಗೆ ಪಡೆದುಕೊಂಡು ಬರುತ್ತೇವೆ. ಭೂಸ್ವಾಧಿನ ಆದ ತಕ್ಷಣ ಕಾಮಗಾರಿ ಆರಂಭ ಮಾಡುತ್ತೇವೆ. ಈಗಾಗಲೇ ಬಕೆಟ್ ನಲ್ಲಿ 200 ಕೋಟಿ ಮೀಸಲಿಟ್ಡಿದ್ದೇವೆ ಎಂದು ಅವರು ಎರಡು ಪ್ರಮುಖ ಯೋಜನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮಕ್ಕೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಅವರು ಶ್ರದ್ದೆ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಶುದ್ದ ಮನಸ್ಸಿನಿಂದ ಹೋಮ ಮಾಡಿದ್ದೀರಿ ಅದರ ಫಲ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಜನರಿಗೆ ಸಿಗಲಿ ಎಂದರು.
ಇದೇ ವೇಳೆ ಅವರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಏರ್ಪಡಿಸಿದ 35 ನೇಯ ವರ್ಷದ ರೈತ ಹುತ್ಮಾತ ದಿನಾಚರಣೆಯಲ್ಲಿ ಭಾಗವಹಿಸಿರು. ರೈತರ ತ್ಯಾಗ ಬಲಿದಾನ ವ್ಯರ್ಥವಾಗಬಾರದು. ಅವರ ತ್ಯಾಗ ಬಲಿದಾನದಲ್ಲಿ ಸ್ಪೂರ್ತಿ ಪಡೆದು, ರೈತರು ಮತ್ತೆ ಸಂಘಟಿತರಾಗಿ ರಾಜ್ಯದಲ್ಲಿ ರೈತ ಸರ್ಕಾರ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.












Click it and Unblock the Notifications