ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆ

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ವೃತ್ತಿ ನಿರತ ಪತ್ರಕರ್ತರು ಅವಘಾತಕ್ಕೆ ಒಳಗಾದರೆ ಮತ್ತು ಅಕಾಲಿಕ ಮರಣವನ್ನು ಹೊಂದಿದ ಸಂದರ್ಭದಲ್ಲಿ 5 ಲಕ್ಷ ರೂ. ವರೆಗಿನ ಜೀವ ವಿಮೆ ಖಾತರಿ ನೀಡುವ 'ಮಾಧ್ಯಮ ಸಂಜೀವಿನಿ' ಯೋಜನೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಇದಲ್ಲದೆ ಈಗಾಗಲೇ ಪತ್ರಕರ್ತರಿಗೆ ನೀಡುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಬಲವರ್ಧನೆಗೊಳಿಸಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ಅವರು ಹೇಳಿದ್ದಾರೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

ಇನ್ನು ಬೆಂಗಳೂರಿನಲ್ಲಿ 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪತ್ರಕರ್ತರ ಭವನವನ್ನು ನಿರ್ಮಿಸಲಾಗುವುದು. ಪತ್ರಿಕೆಗಳನ್ನು ಮನೆಮನೆಗೆ ಹಂಚುವವರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂಪಾಯಿಗಳ 'ಕ್ಚೇಮ ನಿಧಿ' ಸ್ಥಾಪಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Nava Karnataka Budget 2018: 'Madhyama Sanjeevini' Life Insurance announces for journalists

ಬಜೆಟ್ 2018: ಸರ್ಕಾರಿ ನೌಕರರಿಗೆ ತಕ್ಷಣಕ್ಕೆ ಸಿಹಿ ಸುದ್ದಿ ಇಲ್ಲಬಜೆಟ್ 2018: ಸರ್ಕಾರಿ ನೌಕರರಿಗೆ ತಕ್ಷಣಕ್ಕೆ ಸಿಹಿ ಸುದ್ದಿ ಇಲ್ಲ

ಹೀಗೆ 2018-19ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಟ್ಟಾರೆ 239 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಪತ್ರಕರ್ತರಿಗೆ ಬಜೆಟ್ ನಲ್ಲಿ ನೀಡಲಾದ ಇತರ ಕೊಡುಗೆಗಳು ಹೀಗಿವೆ,

  • ಕಳೆದ 5 ವರ್ಷಗಳಲ್ಲಿ ಪತ್ರಕರ್ತ ನೀಡಲಾಗುವ ಮಾಸಾಶನ 3 ಸಾವಿರದಿಂದ 10 ಸಾವಿರಕ್ಕೆ ಏರಿಕೆ.
  • ಮೃತ ಪತ್ರಕರ್ತರ ಕುಟುಂಬಕ್ಕೆ ನೀಡಲಾಗುವ ಮಾಸಾಶನ 1 ಸಾವಿರದಿಂದ 3 ಸಾವಿರಕ್ಕೆ ಏರಿಕೆ.
  • ಪತ್ರಕರ್ತರಿಗೂ ರಾಜೀವ್ ಆರೋಗ್ಯ ವಿಮೆ ವಿಸ್ತರಣೆ. ಪತ್ರಕರ್ತರ ಪಾಲಿನ ಶುಲ್ಕವನ್ನು ಇಲಾಖೆಯೇ ಭರಿಸಲಿದೆ.
  • ಮಾನ್ಯತೆ ಪಡೆದ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ವಿತರಣೆ
English summary
Chief Minister Siddaramaiah announced the life insurance scheme called 'Madhayama Sanjeevini' with the amount of Rs 5 lack on the Karnataka budget 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X