ನವವೃಂದಾವನ ವಿವಾದ: ಸತ್ಯಾತ್ಮತೀರ್ಥ ಸ್ವಾಮೀಜಿಗೆ ಪೊಲೀಸ್ ರಕ್ಷಣೆ

Subscribe to Oneindia Kannada

ಕೊಪ್ಪಳ, ಡಿಸೆಂಬರ್, 11: ನವವೃಂದಾವನ ಜಾಗ ಮತ್ತು ಪೂಜೆ ಗೊಂದಲ ಹುಟ್ಟುಹಾಕಿರುವುದರ ಮಧ್ಯೆಯೇ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ನವವೃಂದಾವನ ಜಾಗ ಉತ್ತರಾದಿಮಠಕ್ಕೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ ಪೂಜೆಗೆ ಸಂಬಂಧಿಸಿದ ಗೊಂದಲಗಳು ಬಗೆಹರಿದಿಲ್ಲ. ಅಲ್ಲದೆ ನವವೃಂದಾವನಕ್ಕೆ ಪೊಲೀಸ್ ಭದ್ರತೆಯನ್ನು ನೀಡಲು ಸೂಚಿಸಲಾಗಿದ್ದು ಅತಿಕ್ರಮಣ ಅಥವಾ ಇನ್ನಿತರ ಯಾವುದೇ ಬಗೆಯ ಕಾನೂನು ವಿರೋಧಿ ಕ್ರಮಗಳಿಗೆ ಅವಕಾಶವಾಗದಂತೆ ತಡೆಯಲು ನ್ಯಾಯಾಲಯ ಆದೇಶ ನೀಡಿದೆ.[ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ?]

math

ಗಂಗಾವತಿಯ ಹೆಚ್ಚುವರಿ ನ್ಯಾಯಾಧೀಶರು ಡಿಸೆಂಬರ್ 10 ರಂದು ಆದೇಶ ನೀಡಿದ್ದಾರೆ. ಅಲ್ಲದೇ ಡಿವೈಎಸ್ ಪಿ ಅವರಿಗೆ ಸಕಲ ರಕ್ಷಣಾ ಕ್ರಮ ತೆಗೆದುಕೊಳ್ಳುವಂತೆ ಸ್ಪಷ್ಟ ಆದೇಶ ನೀಡಲಾಗಿದೆ.[ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು]

 Nava Brindavana controversy : Police Security to Satyatma Tirtha Swamiji

ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆರಾಧನೆ ಸಮಯದಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿ ಉತ್ತರಾದಿಮಠದವರು ಗಂಗಾವತಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nava Brindavana controversy : The Gangavati Court has given verdict in favour of Uttaradi Math, but Rayara matha continues to worship in the premises. After the petition of Uttaradi Math, the Court gave the instructions to the police department to give police security to Sri Satyatma Teertha Swami of Uttaradi Mutt.
Please Wait while comments are loading...