Get Updates
Get notified of breaking news, exclusive insights, and must-see stories!

National Horticulture Fair 2025: ಬೆಂಗಳೂರಲ್ಲಿ 3 ದಿನ 'ಭಾರತೀಯ ತೋಟಗಾರಿಕಾ ಮೇಳ-2025', ವಿಶೇಷತೆಗಳು

ಬೆಂಗಳೂರು, ಜನವರಿ 30: ರಾಜ್ಯ ರಾಜಧಾನಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR) ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು (IIHR) ತೋಟಗಾರಿಕೆ ಮತ್ತು ಸಂಬಂಧಿತ ವಲಯಗಳ ಎಲ್ಲ ಪ್ರಮುಖ ಇಲಾಖೆಗಳ ಸಂಸ್ಥೆಗಳ ಸಹಕಾರದಲ್ಲಿ 'ಭಾರತೀಯ ತೊಟಗಾರಿಕೆ ಮೇಳ 2025' ಅನ್ನು ಹಮ್ಮಿಕೊಂಡಿದೆ.

ಐಐಎಚ್‌ಆರ್ ಮತ್ತು ಐಸಿಎಆರ್ ವತಿಯಿಂದ ಮುಂದಿನ ತಿಂಗಳು ಫೆಬ್ರವರಿ 27ರಿಂದ ಮಾರ್ಚ್ 01ರವರೆಗೆ ಬೃಹತ್ "ರಾಷ್ಟ್ರೀಯ ತೋಟಗಾರಿಕಾ ಮೇಳ - 2025" ಹಮ್ಮಿಕೊಂಡಿದೆ. 'ವಿಕಸಿತ ಭಾರತಕ್ಕಾಗಿ ತೋಟಗಾರಿಕೆ - ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ' ಶಿರ್ಷಿಕೆಯಡಿ ಕಾರ್ಯಕ್ರಮವು ಹೆಸರಘಟ್ಟದ ಸಂಸ್ಥೆಯ ವಿಶಾಲ ಪ್ರದೇಶದಲ್ಲಿ ನಡೆಯಲಿದೆ. ಲಕ್ಷಾಂತರ ರೈತರು, ಸಾರ್ವಜನಿಕರು, ತೋಟಗಾರಿಕೆ ಬೆಳಗಾರರು ಆಗಮಿಸಲಿದ್ದಾರೆ ಎಂದು ಐಐಎಚ್‌ಆರ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

National Horticulture Fair 2025 on February 27th to March 1st at Bengaluru

ತೋಟಗಾರಿಕೆ ಮೇಳದಲ್ಲಿ ಏನೆಲ್ಲ ಇರಲಿದೆ?

ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಬೆಳೆಗಳು ಮತ್ತು ಪ್ರಭೇದಗಳ ಮೂಲಕ ಪೌಷ್ಟಿಕಾಂಶವನ್ನು ಸುಧಾರಿಸುವ ಪ್ರಭೇದಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶನ ಇರಲಿದೆ. ಪೌಷ್ಟಿಕಾಂಶ ಬೆಳೆಗಳ ಉತ್ತೇಜನ ಮೇಲೆ ಮೇಳೆ ಕೇಂದ್ರೀಕರಿಸುತ್ತದೆ. ಅಗತ್ಯವಿರುವ ರೈತರನ್ನು ತೋಟಗಾರಿಕಾ ಬೆಳೆಗಳ ವಿವಿಧ ಅಂಶಗಳ ಕುರಿತು ಅಗತ್ಯ ಆಧಾರಿತ ಮಾಹಿತಿ / ತಂತ್ರಜ್ಞಾನಗಳು ಮತ್ತು ಕಾರ್ಯಕ್ರಮ ಮೂಲಕ ಸಬಲೀಕರಣಗೊಳಿಸುವ ಪ್ರಯತ್ನ ಇದಾಗಿದೆ.

ಆಗಮಿಸುವ ರೈತರಿಗೆ, ಸಣ್ಣ ಬೆಳೆಗಾರರಿಗೆ, ಆರ್ಥಿಕವಾಗಿ ಹಿಂದುಳಿದ ಸಣ್ಣ ರೈತರಿಗೆ ಸೂಕ್ತ ತಂತ್ರಜ್ಞಾನಗಳ ಮೇಲೆ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹೊಂದಿಕೊಳ್ಳುವ ಮತ್ತು ಪರಿಸರಕ್ಕೆ ಸುರಕ್ಷಿತವಾದ ತೋಟಗಾರಿಕಾ ಬೆಳೆಗಳಲ್ಲಿ ಉತ್ಪಾದಕತೆ ಕುರಿತು ತಿಳಿಸಲಾಗುವುದು. ಆದಾಯ ಹೆಚ್ಚಸಲು ಮತ್ತು ಬೆಳೆಗಾರರ ಜೀವನೋಪಾಯ ಸುಧಾರಣೆ ಮೇಲೆ ಸಂಸ್ಥೆ ಗಮನ ಕೇಂದ್ರೀಕರಿಸಿದೆ.

National Horticulture Fair 2025 on February 27th to March 1st at Bengaluru

ಸಂಸ್ಥೆಯು ಬೆಳೆ ಉತ್ಪಾದನೆ, ಬೆಳೆ ರಕ್ಷಣೆ, ಕೊಯ್ಲಿನ ನಂತರದ ನಿರ್ವಹಣೆ, ಮೌಲ್ಯವರ್ಧನೆ, ಯಂತ್ರೋಪಕರಣಗಳು ಮತ್ತು ತೋಟಗಾರಿಕಾ ಬೆಳೆಗಳಲ್ಲಿ IIHR ಮತ್ತು ICAR ಅಭಿವೃದ್ಧಿಪಡಿಸಿದ 250ಕ್ಕೂ ಹೆಚ್ಚು ಪ್ರಭೇದಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಮೇಳದಲ್ಲಿ ಇರಲಿದೆ.

ತೋಟಗಾರಿಕೆ ಸಂಸ್ಥೆಯು ಅಭಿವೃದ್ಧಿಪಡಿಸಿದ ಪ್ರಭೇದಗಳು ಫಲ, ಪುಷ್ಪ, ತರಕಾರಿ, ಔಷಧ ಬೆಳೆಗಳ ಮತ್ತು ತಂತ್ರಜ್ಞಾನಗಳ ನೇರ ಪ್ರದರ್ಶನ ನಡೆಯಲಿದೆ. ಮಾರಾಟಕ್ಕೂ ಅವಕಾಶ ಇದೆ. ನಗರ ತೋಟಗಾರಿಕೆಗಾಗಿ ಲಂಬ ಕೃಷಿ ಮತ್ತು ತಾರಸಿ ಕೃಷಿ, ವಿವಿಧ ತೋಟಗಾರಿಕೆ ಬೆಳೆಗಳ ಸಂರಕ್ಷಿತ ಕೃಷಿಯ ಕುರಿತು ಶ್ರೇಷ್ಠತಾ ಕೇಂದ್ರ ಸೌಲಭ್ಯ ಹೊಂದಿರುತ್ತದೆ.

250ಕ್ಕೂ ಹೆಚ್ಚು ಮಳಿಗೆಗಳು

ಅಣಬೆ ಉತ್ಪಾದನೆಯ ಕೌಶಲ್ಯ ಆಧಾರಿತ ಕಾರ್ಯಗಾರಗಳು, ತೋಟಗಾರಿಕೆ ಮತ್ತು ಇತರ ಸಂಬಂಧಿತ ಉದ್ಯಮಗಳಲ್ಲಿ ನವೀನ ತಂತ್ರಜ್ಞಾನಗಳ ಕುರಿತು 250ಕ್ಕೂ ಹೆಚ್ಚು ಮಳಿಗೆಗಳು, ವಿವಿಧ ತೋಟಗಾರಿಕೆ ಬೆಳೆಗಳಲ್ಲಿನ ಕ್ಷೇತ್ರ ಆಧಾರಿತ ಸಮಸ್ಯೆಗಳ ಕುರಿತು ಸಮಾಲೋಚನೆ ಮತ್ತು ಸಲಹೆ ಸೌಲಬ್ಯಗಳು ಹೊಂದಿರಲಿವೆ. ವಿವಿಧ ಫಲ, ಪುಷ್ಪ, ತರಕಾರಿ, ಔಷದ ಬೆಳೆಗಳ ಹೊಸ ಪ್ರಭೇದಗಳ ಮತ್ತು ಮಿಶ್ರತಳಿಗಳ ಬೀಜಗಳು, ಪ್ರಕ್ರಿಯೆ ಉತ್ಪನ್ನಗಳು, ಸಸಿ ಸಾಮಗ್ರಿಗಳು, ಉಪಕರಣಗಳು ಮತ್ತು ಯಂತ್ರೋಪಕರಣಗಳು ಇತ್ಯಾದಿಗಳ ಮಾರಾಟದ ಅವಕಾಶ ಇರಲಿದೆ. ಬೆಳಗಾರರು, ರೈತರು ಇದರ ಸೌಲಭ್ಯ ಪಡೆದುಕೊಳ್ಳಬಹುದು.

ಮಳಿಗೆ ಕಾಯ್ದಿರಿಸಲು ಹೀಗೆ ಮಾಡಿ

ಬೆಂಗಳೂರು ತೋಟಗಾರಿಕೆ ಮೇಳದಲ್ಲಿ ಮಳಿಗೆ ಹಾಕಲು ಬಯಸುವವರು, ಅವುಗಳನ್ನು ಕಾಯ್ದಿರಿಸಲು ಡಾ. ಎಂ. ತಂಗಮ್, ಪ್ರಧಾನ ವಿಜ್ಞಾನಿ ಮತ್ತು ಅಧ್ಯಕ್ಷರು, ಪ್ರದರ್ಶನ ಸಮಿತಿ (ಇ-ಮೇಲ್: [email protected]) ಅಥವಾ ಮೊಬೈಲ್ ಸಂಖ್ಯೆ 9423057269 ಅಥವಾ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ IIHA ಮತ್ತು ICAR ಬೆಂಗಳೂರು ಇಲ್ಲಿಗೆ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಲಾಗಿದೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+