ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಏರಿಕೆ: ಈ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ NHAI ಬಿಗ್ ಶಾಕ್
Nationa Highway Toll: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಲಿದೆ. ಜೊತೆಗೆ ಟೋಲ್ ದರಗಳನ್ನು ಸಹ ಪ್ರಾಧಿಕಾರ ಏರಿಕೆ ಮಾಡುತ್ತಲಿದ್ದು, ವಾಹನ ಸವಾರರು ಆಕ್ರೋಶ ಹೊರಹಾಕುತ್ತಲಿದ್ದಾರೆ. ಹಾಗೆಯೇ ಇದೀಗ NH 75 ಹಾಗೂ 48 ಟೋಲ್ ದರಗಳು ಏರಿಕೆಯಾಗಿದೆ. ಇದರಿಂದ ಯಾವೆಲ್ಲಾ ಜಿಲ್ಲೆಗಳಿಗೆ ಹೋಗುವವರಿಗೆ ಹೊರೆ ಆದಂತಾಗಿದ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ಟೋಲ್ ಶುಲ್ಕವನ್ನು ಹಾಗಾಗ ಏರಿಕೆ ಮಾಡುತ್ತಲಿರುತ್ತದೆ. ಹಾಗೆಯೇ ಸೆಪ್ಟೆಂಬರ್ ಆರಂಭದಲ್ಲೇ ಕೆಲ ಟೋಲ್‌ಗಳ ಶುಲ್ಕ ಏರಿಕೆ ಮಾಡಿ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದ್ರೆ ಟೋಲ್ ಶುಲ್ಕ ದರ ಏರಿಕೆಯ ಹೊರೆ ಯಾವ ಜಿಲ್ಲೆಗಳಿಗೆ ಹೋಗುವವರಿಗೆ ಬೀಳಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸೆಪ್ಟೆಂಬರ್ 1ರಿಂದ ಬೆಂಗಳೂರು ಹೊರವಲಯದ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ 75 ಹಾಗೂ 48ರ ಟೋಲ್ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರದ ವಿರುದ್ಧ ವಾಹನ ಸವಾರರು ಕೆಂಡಕಾರುತ್ತಿದ್ದಾರೆ. ಇನ್ನೂ ನೆಲಮಂಗಳ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಟೋಲ್ ಶುಲ್ಕ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಹಾಸನ, ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 75 ಮತ್ತು 48ರ ಟೋಲ್ ದರಗಳು ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ 5 ರಿಂದ 10 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರಿಗೆ ದಂಡದ ಮೊತ್ತ ಇನ್ನೂ ಹೆಚ್ಚಾಗಿದ್ದು, ಇದು ವಾಹನ ಸವಾರರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಈಗಾಗಲೇ ಪ್ರಾಧಿಕಾರವು ರಾಜ್ಯದ ವಿವಿಧ ಟೋಲ್‌ಗಳ ಶುಲ್ಕವನ್ನು ಏಪ್ರಿಲ್‌ನಲ್ಲಿ ಏರಿಕೆ ಮಾಡಿ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿತ್ತು. ಇದೀಗ ಬೆಂಗಳೂರಿನಿಂದ ಹಾಸನ, ಮಂಗಳೂರು, ಧರ್ಮಸ್ಥಳ, ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹೋಗುವ ವಾಹನ ಸವಾರರಿಗೆ ಟೋಲ್ ಶುಲ್ಕದ ಹೊರೆ ಹೇರಿದಂತಾಗಿದೆ.
ಫಾಸ್ಟ್‌ಟ್ಯಾಗ್ ಹೊಂದಿರುವ ಲಘು ವಾಹನಳಿಗೆ ಏಕಮುಖ ಪ್ರಮಾಣ 55ರಿ-60 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ವಾಣಿಜ್ಯ ಮತ್ತು ಸರಕು ವಾಹನಗಳ ಏಕಮುಖ ಸಂಚಾರಕ್ಕೆ 200-205 ರೂಪಾಯಿಗೆ ಏರಿಕೆಯಾಗಿದೆ. ದ್ವಿಮುಖ ಸಂಚಾರಕ್ಕೆ ಹಿಂದಿನ ದರದ ಮೇಲೆ 10 ರೂಪಾಯಿ ಏರಿಕೆ ಆಗಿದೆ.
ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ದಂಡದ ರೂಪದಲ್ಲಿ 110 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಇದೀಗ 120 ರೂಪಾಯಿಗೆ ದಂಡದ ಪ್ರಮಾಣ ಸಹ ಸಹ ಏರಿಕೆ ಆಗಿದೆ. ಇದು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹೊರೆಯಾದಂತಾಗಿದೆ. ಈಗಾಗಲೇ ಇದೇ ವಿಚಾರಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾರಾಮಾರಿ ಆದ ಘಟನೆಗಳು ನಡೆದಿವೆ. ಇನ್ನೂ ಕೆಲವು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಫ್ಲಾಜಾಗಳಲ್ಲೂ ಸಹ ಇಂತಹ ಘಟನೆಗಳು ನಡೆದಿವೆ. ಈಗಲೂ ನಡೆಯುತ್ತಲೇ ಇವೆ.












Click it and Unblock the Notifications