Get Updates
Get notified of breaking news, exclusive insights, and must-see stories!

ಸುಂದರ, ಅದ್ಭುತ, ಅಮೋಘ, ಅವಿಸ್ಮರಣೀಯ nat geo ಕನ್ನಡ

ಸುಂದರ, ಅದ್ಭುತ, ಅಮೋಘ, ಅವಿಸ್ಮರಣೀಯ ಎಂಬ ಪ್ರೋಮೋ ಮೂಲಕ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ (NGC) ತನ್ನ ಕನ್ನಡ ಆವೃತ್ತಿಯನ್ನು ಪರಿಚಯಿಸಿದೆ. ಈಗ ಆಶ್ಚರ್ಯಕಾರಿ ವಿಷಯಗಳನ್ನು ನೀವು ನಿಮ್ಮ ನೆಚ್ಚಿನ ಭಾಷೆಯಲ್ಲಿ ನೋಡಬಹುದು, ನ್ಯಾಷನಲ್ ಜಿಯಾಗ್ರಫಿಕ್ ಈಗ ಕನ್ನಡದಲ್ಲಿ ಲಭ್ಯವಿದೆ ಎಂದು ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಟ್ವೀಟ್ ಮಾಡಿದೆ.

ಜನವರಿ 31ರಿಂದ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಬಾಂಗ್ಲಾದಲ್ಲಿ ನ್ಯಾಟ್ ಜಿಯೋ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ವಿಶ್ವದೆಲ್ಲೆಡೆ ಸುಮಾರು 43 ಭಾಷೆಗಳಲ್ಲಿ 172 ದೇಶಗಳಿಗೆ NGC ವ್ಯಾಪಿಸಿದೆ.

ಕಳೆದ ಹತ್ತು ವರುಷಗಳಿಂದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ ಹಾಗೂ ಇನ್ನಿತರ ಕನ್ನಡಪರ ಮನಸ್ಸುಗಳ ಅವಿರತವಾದ ಕಾನೂನು ಹೋರಾಟ, ಚಿತ್ರರಂಗದ ಮೇಲೆ ಒತ್ತಡ, ಸಮೂಹ ಮಾಧ್ಯಮಗಳ ಮುಖೇನ ಜನರಿಗೆ ಅರಿವು ಮೂಡಿಸುವ ಕೆಲಸದ ಫಲವಾಗಿ ಇಂದು ಪೂರ್ಣಪ್ರಮಾಣದ ಕನ್ನಡ ಭಾಷೆ ಫೀಡ್ ನೀಡಲು ಸಂಸ್ಥೆಗಳು ಮುಂದಾಗಿವೆ.

National Geographic is now available in Kannada. How to tune channel

ಚಿತ್ರರಂಗದಲ್ಲಿ ಶುರುಗೊಂಡ ಹೊಸಗಾಳಿ ಟಿವಿ ಮಾಧ್ಯಮ ಹಾಗೂ ಓಟಿಟಿ ಮಾಧ್ಯಮದಲ್ಲೂ ಬಹುಬೇಗ ವ್ಯಾಪಿಸುತ್ತಿರುವುದು ಕಂಡುಬರುತ್ತಿದೆ. ಸೋನಿಕ್ ಮತ್ತು ನಿಕ್ ಚಾನೆಲ್ ಗಳಿಂದ ಮೊದಲುಗೊಂಡು, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್, ಡಿಸ್ಕವರಿ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುತ್ತಿವೆ. ಇನ್ನು ಒಟಿಟಿಯಲ್ಲಿ ಜೀ5, ಹಾಟ್ ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಕನ್ನಡದಲ್ಲೇ ಹೊಚ್ಚ ಹೊಸ ಸಿನಿಮಾ ಕಾರ್ಯಕ್ರಮಗಳನ್ನು ಬಿಡುಗಡೆಗೊಳಿಸುತ್ತಿವೆ.

NGC ಕನ್ನಡ ನಿಮ್ಮ ಟಿವಿಯಲ್ಲಿ ನೋಡುವುದು ಹೇಗೆ?

ನಿಮ್ಮ ಸೆಟ್ ಅಪ್ ಬಾಕ್ಸ್ ಅಥವಾ ಡಿಟಿಎಚ್ ರಿಮೋಟ್ ನಲ್ಲಿ LANG ಬಟನ್ ಒತ್ತಿ ಕನ್ನಡ ಆಯ್ಕೆ ಮಾಡಿಕೊಳ್ಳಿ

ಸಂಸ್ಥೆ: ಚಾನೆಲ್ ಸಂಖ್ಯೆ

ಟಾಟಾ ಸ್ಕೈ: 708(HD), 709
ಡಿಶ್ ಟಿವಿ: 808 (HD), 809
ಸನ್ ಡೈರೆಕ್ಟ್: 966 (HD), 542
ಏರ್ ಟೆಲ್ ಡಿಜಿಟಲ್ ಟಿವಿ: 423 (HD), 422
ವಿಡೀಯೋಕಾನ್ : 423(HD), 422

ಒಂದು ವೇಳೆ ಕನ್ನಡದಲ್ಲಿ ಫೀಡ್ ಸಿಗುತ್ತಿಲ್ಲವಾದರೆ, ನಿಮ್ಮ ಕೇಬಲ್ ಆಪರೇಟರ್ ಅಥವಾ ಡಿಟಿಎಚ್ ಸೇವಾದಾರರನ್ನು ಸಂಪರ್ಕಿಸಿ.


ಇನ್ನೇಕೆ ತಡ Primal Survivor, Vegas Rat Rods, Great Human Race, Dirty Rotten Survival, Bear Grylls Mission Survive, Airport Security Brazil ಜೊತೆಗೆ ಮಂಗಳಯಾನದ ಸುಂದರ ದೃಶ್ಯಾವಳಿಯನ್ನು ಕನ್ನಡದಲ್ಲೇ ನೋಡಿ ಮಾಹಿತಿ ಮತ್ತು ಮನರಂಜನೆ ಪಡೆದುಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+