Modi Road Show: ಗೆಲ್ಲುವಿನ ತಂತ್ರ; ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ! ಬಿಜೆಪಿ ನಾಯಕರ ಲೆಕ್ಕಾಚಾರವೇನು?

ಬೆಂಗಳೂರು,ಮೇ7: ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಪರ ಮೋದಿ - ಅಮಿತ್‌ ಶಾ ಸೇರಿದಂತೆ ಹೈಕಮಾಂಡ್‌ ನಾಯಕರ ದಂಡು ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಕಳೆದ ಎರಡು ವಾರಗಳಿಂದ ಚುನಾವಣಾ ಅಖಾಡದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನೂ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಬೆಂಗಳೂರು ವ್ಯಾಪ್ತಿಯ ಹದ್ದನ ಕಣ್ಣೀಟ್ಟಿದ್ದು, ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಎಂದು ಮೋದಿ ಅವರಿಂದ ಬೃಹತ್‌ ರೋಡ್‌ ಶೋ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ವಿವಾದತ್ಮಕ ಹೇಳಿಕೆಯನ್ನ ಪ್ರಧಾನಿ ಮೋದಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಬೆಂಗಳೂರಿನಲ್ಲಿ ಪ್ರಚಾರದ ಭರಾಟೆಯನ್ನ ಹೆಚ್ಚಿಸಿದ್ದಾರೆ.

Narendra Modi Road Show: BJP Want To Cross 20 Seat Mark In Bengaluru

ಬಿಜೆಪಿ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯಬೇಕು ಎಂದರೇ ಬೆಂಗಳೂರನ್ನ ಗೆಲ್ಲಲ್ಲೇಬೇಕು ಹೀಗಾಗಿ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಷಸ್ಸನ್ನ ಬಳಸಿಕೊಂಡು ರಾಜ್ಯ ಬಿಜೆಪಿ ನಾಯಕರು ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಎಂದು ರೋಡ್‌ ಶೋ ಆಯೋಜಿಸಿದ್ದಾರೆ.

ಈಗಾಗಲೇ ಹಲವು ಸಮೀಕ್ಷೆಗಳಿಂದ ಬಿಜೆಪಿಗೆ ಅಘಾತ ಉಂಟಾಗಿದ್ದು, ಗೆಲ್ಲುವಿನ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಬಹುಮತಕ್ಕೆ ಬೇಕಾಗಿರುವುದು 113 ಸೀಟ್‌ ಗಳಿಸಬೇಕಾದರೆ ಬೆಂಗಳೂರು ಭಾಗದಲ್ಲಿ ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕು ಎಂಬುದು ಕಮಲ ಕಲಿಗಳ ತಂತ್ರಗಾರಿಕೆ. ಅಲ್ಲದೇ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್‌ ಶಾ ಅವರು ಸಹ ಬೆಂಗಳೂರಿಗೆ ಸಂಬಂಧಿಸಿದಂತೆ ಸರಣಿ ಸಭೆಯನ್ನ ನಡೆಸಿ ಬೆಂಗಳೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲ್ಲು ರಾಜ್ಯ ನಾಯಕರಿಗೆ ಟಾಸ್ಕ್‌ ನೀಡಿ, ಪ್ರಚಾರ ನಡೆಸಲು ಸೂಚಿಸಿದ್ದಾರೆ.

Narendra Modi Road Show: BJP Want To Cross 20 Seat Mark In Bengaluru

ಬೆಂಗಳೂರು ನಗರದ 28 ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳಿವೆ. ಈ ಹಿಂದೆ 2008ರ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನು 2018 ಮತ್ತು 2019ರ ಚುನಾವಣೆ ಉಪಚುನಾವಣೆ ಸೇರಿ ಒಟ್ಟು 15 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಕೆಲ ಕ್ಷೇತ್ರಗಳನ್ನ ಬಿಜೆಪಿ ಕಳೆದುಕೊಳ್ಳಲಿದೆ ಎಂದು ಹಲವು ಸಮೀಕ್ಷೆಗಳಿಂದ ತಿಳಿದು ಬಂದಿದ್ದು, ಇನ್ನೂ ಸರ್ವೆಯನ್ನ ಆಧಾರಿ ಈ ಬಾರಿ ಕನಿಷ್ಟ 18 ರಿಂದ 20 ಸ್ಥಾನಗಳನ್ನು ಗೆಲ್ಲಬೇಕೆಂದು ಬಿಜೆಪಿ ಗುರಿಯನ್ನು ಹಾಕಿಕೊಂಡಿದೆ.

ಇನ್ನೂ ಬಿಬಿಎಂಪಿ ಚುನಾವಣೆಯಲ್ಲೂ ಗೆಲ್ಲಬೇಕು ಎಂಬ ಪ್ಲಾನ್‌ ಹಾಕಿಕೊಂಡಿರುವ ಬಿಜೆಪಿ ನಾಯಕರು ಇದೇ ಕಾರಣಕ್ಕೆ ಬೆಂಗಳೂರಿಗರ ಮನಗೆಲ್ಲಲು ಮೋದಿ ಅವರ 40 ಕಿ.ಮೀ ಮೆಗಾ ರೋಡ್‌ ಶೋವನ್ನ ನಡೆಸಿದೆ. ಏಪ್ರಿಲ್‌ 29ರಂದು ಬೆಂಗಳೂರು ಉತ್ತರದ 9 ಕ್ಷೇತ್ರಗಳಲ್ಲಿ ಮೊದಲ ರೋಡ್ ಶೋ ನಡೆದಿತ್ತು. ಮೇ 6 ರಂದು ದಕ್ಷಿಣ, ಕೇಂದ್ರ ಜಿಲ್ಲೆಗಳ 13 ಕ್ಷೇತ್ರಗಳ ಗುರಿಯನ್ನಾಗಿಸಿ 2ನೇ ರೋಡ್ ಶೋ ನಡೆದಿತ್ತು. ಇಂದು (ಭಾನುವಾರ) 5 ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ರೋಡ್ ಶೋ ನಡೆಯಲಿದೆ.

ಇನ್ನೂ ಬಿಜೆಪಿ ಮಿಷನ್‌ 150 ಟಾರ್ಗೆಟ್‌ ಹಾಕಿಕೊಂಡಿದ್ದು, 113 ಟಾರ್ಗೆಟ್‌ ರೀಚ್‌ ಆಗಬೇಕಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ಬಿಜೆಪಿ 20+ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದ್ದು, ಮೋದಿ ಮೂಲಕ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+