ರಾಜ್ಯಕ್ಕೆ ಇಂದು ಮೋದಿ, ರಾಹುಲ್, ಯೋಗಿ: ಮಾತಿನ ಸಮರ ಶುರು

ರಾಜ್ಯದಲ್ಲಿ ಇಂದು ಬಿಜೆಪಿ-ಕಾಂಗ್ರೆಸ್‌ ನಡುವೆ ಭರ್ಜರಿ ಮಾತಿನ ಸಮರ ನಡೆಯುವ ಸಾಧ್ಯತೆ ದಟ್ಟವಾಗಿದೆ ಏಕೆಂದರೆ ಇಂದು ಒಂದೇ ದಿನ ನರೇಂದ್ರ ಮೋದಿ, ರಾಹುಲ್ ಗಾಂಧಿ ಹಾಗೂ ಯೋಗಿ ಆದಿತ್ಯನಾಥ ಅವರುಗಳು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ನರೇಂದ್ರ ಮೋದಿ ಅವರು ಕಲಬುರಗಿ, ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದರೆ, ರಾಹುಲ್ ಗಾಂಧಿ ಅವರು ಬೀದರ್‌, ಹುಮ್ನಾಬಾದ್, ಭಾಲ್ಕಿ, ಔರಾದ್‌ಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶಿರಸಿ, ಸಾಗರ, ಬಾಳೆಹೊನ್ನೂರು, ಬೇಲೂರು, ಹೊನ್ನಹಳ್ಳಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೋದಿ ಇಂದು ಸಂಜೆ ಮತ್ತೆ ದೆಹಲಿಗೆ ತೆರಳಿದ್ದರೆ ರಾಹುಲ್ ನಾಳೆಯೂ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಯೋಗಿ ಆದಿತ್ಯನಾಥ ಅವರು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲೇ ಇದ್ದು ಬಿಜೆಪಿ ಪರ ಬ್ಯಾಟಿಂಗ್ ಮಾಡಲಿದ್ದಾರೆ.

Narendra Modi, Rahul Gandhi and Yogi Adityanath visiting Karnataka today

ಇಂದು ಭರ್ಜರಿ ಮಾತಿನ ಸಮರ ನಡೆಯುವ ನಿರೀಕ್ಷೆ ಇದ್ದು, ಮೊನ್ನೆಯಷ್ಟೆ ಮೋದಿ ಅವರು ಉಡುಪಿಯಲ್ಲಿ ರಾಹುಲ್ ಗಾಂಧಿ ಅವರನ್ನು ಛೇಡಿಸಿ ಹೋದ ನಂತರ ರಾಹುಲ್ ಮೊದಲ ಬಾರಿಗೆ ಇಂದು ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಮೋದಿ ಅವರು ಮೊನ್ನೆ ಎತ್ತಿದ್ದ ಪ್ರಶ್ನೆಗಳಿಗೆ ರಾಹುಲ್ ಇಂದು ಉತ್ತರ ನೀಡುತ್ತಾರಾ ಎಂಬುದು ಕಾದು ನೋಡಬೇಕಾದ ವಿಷಯ.

ಇನ್ನು ನರೇಂದ್ರ ಮೋದಿ ಅವರು ಇಂದು ಕಲಬುರಗಿ ನಂತರ ಬಳ್ಳಾರಿಯಲ್ಲಿ ಭಾಷಣ ಮಾಡಲಿರುವುದು ಕುತೂಹಲ ಕೆರಳಿಸಿದೆ. ಇದು ರೆಡ್ಡಿ ಸಹೋದರರ ಭದ್ರ ಕೋಟೆ ಆಗಿದ್ದು, ಇಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಕುರಿತು ಯಾವ ಧೋರಣೆಯನ್ನು ಮೋದಿ ಇಂದಿನ ಮಟ್ಟಿಗಾದರೂ ತಳೆಯಲಿದ್ದಾರೆ ಎಂಬುದು ಕುತೂಹಲದ ವಿಷಯ. ಜೊತೆಗೆ ಗಣಿ ಧೂಳಿನ ಮೇಲೆ ನಿಂತು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರಾ ಎಂಬುದೂ ಕುತೂಹಲ ಕೆರಳಿಸಿದೆ.

ಇನ್ನು ಬಿಜೆಪಿಯ ಹಿಂದುತ್ವದ ಮುಖ ಎನಿಸಿಕೊಂಡಿರುವ ಯೋಗಿ ಆದಿತ್ಯನಾಥ ಅವರು ಇಂದು ಬಿಜೆಪಿಯ ಬೆಲ್ಟ್‌ ಶಿರಸಿ, ಬಾಳೆಹೊನ್ನೂರಿನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದು, ಅವರ ಭಾಷಣ ಹಿಂದುತ್ವವನ್ನು ಒಳಗೊಂಡಿರುತ್ತದೆಯಾ ಅಥವಾ ಕರ್ನಾಟಕ ಸರ್ಕಾರದ ವೈಫಲ್ಯಗಳನ್ನೇ ಎಂಬುದು ಕುತೂಹಲ ಕೆರಳಿಸಿದೆ.

ಮೂರು ಜನ ನಾಯಕರ ಇಂದಿ ವೇಳಾಪಟ್ಟಿ ಇಲ್ಲಿದೆ ನೋಡಿ..

ನರೇಂದ್ರ ಮೋದಿ ಇಂದಿನ ಕಾರ್ಯಕ್ರಮಗಳು
ಕಲಬುರಗಿಯಲ್ಲಿ ಸಮಾವೇಶದಲ್ಲಿ ಭಾಗಿ
ಸಮಯ: 12:30,
ಸ್ಥಳ: ನವೋದಯಾ ವಿದ್ಯಾಲಯ ಮೈದಾನ

ಬಳ್ಳಾರಿಯಲ್ಲಿ ಬೃಹತ್ ಸಮಾವೇಶ
ಸಮಯ: 3:00,
ಸ್ಥಳ: ಬಳ್ಳಾರಿ ಜಿಲ್ಲಾ ಕ್ರೀಡಾಂಗಣ

ಬೆಂಗಳೂರು ಉತ್ತರದಲ್ಲಿ ಸಾರ್ವಜನಿಕ ಸಭೆ
ಸಮಯ: 5:30.

ರಾಹುಲ್ ಗಾಂಧಿ ಅವರ ಇಂದಿನ ಕಾರ್ಯಕ್ರಮಗಳು
ಬೀದರ್‌ನ ಔರಾದ್‌ನಲ್ಲಿ ಸರಳ ಸಭೆ
ಸಮಯ: 12:20

ಬೀದರ್‌ನ ಬಾಲ್ಕಿಯಲ್ಲಿ ಸಾರ್ವಜನಿಕ ಸಭೆ
ಸಮಯ: 2:25

ಬೀದರ್‌ನ ಹುಮನಾಬಾದ್‌ನಲ್ಲಿ ಸಾರ್ವಜನಿಕ ಸಭೆ
ಸಮಯ: 4 ಗಂಟೆ

ಬೀದರ್‌ ನಗರದಲ್ಲಿ ಸಾರ್ವಜನಿಕ ಸಭೆ
ಸಮಯ: 6:30

ಯೋಗಿ ಆದಿತ್ಯನಾಥರ ಇಂದಿನ ಕಾರ್ಯಕ್ರಮಗಳು
ಶಿರಸಿಯಲ್ಲಿ ಸಾರ್ವಜನಿಕ ಸಭೆ
ಸಮಯ: 10:25

ಸಾಗರದಲ್ಲಿ ಸಾರ್ವಜನಿಕ ಸಭೆ
ಸಮಯ: 12:35

ಬಾಳೆಹೊನ್ನೂರು ಮಠಕ್ಕೆ ಭೇಟಿ
ಸಮಯ: 2:15

ಬಾಳೆಹೊನ್ನೂರಿನಲ್ಲಿ ಸಾರ್ವಜನಿಕ ಸಭೆ
ಸಮಯ: 2:45

ಬೇಲೂರಿನಲ್ಲಿ ಸಾರ್ವಜನಿಕ ಸಭೆ
ಸಮಯ: 4:30

ಹೊನ್ನಾಳಿಯಲ್ಲಿ ಸಾರ್ವಜನಿಕ ಸಭೆ
ಸಮಯ: 6:15

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+