ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರ ಇಡೀ ದೇಶವನ್ನೇ ನಾಶ ಮಾಡುತ್ತಿದೆ: ವೀರಪ್ಪ ಮೊಯ್ಲಿ

|
Google Oneindia Kannada News

ಬೆಂಗಳೂರು, ನವೆಂಬರ್ 14: ಕೆಟ್ಟ ಆಲೋಚನೆಗಳನ್ನು ಬೆಳೆಯಲು ಬಿಟ್ಟರೆ ಅದು ಇಡೀ ವ್ಯವಸ್ಥೆಯನ್ನು ನಾಶ ಮಾಡಲಿದೆ, ಅದರಂತೆ ಇಂದು ಮೋದಿ ಸರ್ಕಾರ ಇಡೀ ದೇಶವನ್ನೇ ನಾಶ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರೂ ಅವರು ವೈಜ್ಞಾನಿಕವಾಗಿ ಆಲೋಚನೆ ಮಾಡಬೇಕು ಎಂದು ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ದೇಶದ ಬಡತನ, ಹಸಿವಿನ ಬಾದೆ ನೀಗಿಸಲು ಇರುವ ಅಸ್ತ್ರ ವಿಜ್ಞಾನ ಎಂದು ಹೇಳಿದ್ದರು.

ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು ಗುಜರಾತ್‌ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು

ದೇಶದಾದ್ಯಂತ ಪಂಡಿತ್ ನೆಹರೂ ವರ ಜನ್ಮದಿನ ಆಚರಿಸಲಾಗುತ್ತಿದ್ದು, ಬಿಜೆಪಿಯವರಿಗೆ ಇದರ ಸುಳಿವೂ ಇಲ್ಲವಾಗಿದೆ. 133 ವರ್ಷಗಳ ಹಿಂದೆ ನೆಹರೂ ಅವರು ಜನಿಸಿ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯ ಸಮರಕ್ಕೆ ಧುಮುಕಿ ತಮ್ಮ ಜೀವನವನ್ನೇ ತ್ಯಾಗ ಬಲಿದಾನ ಮಾಡಿದ್ದಾರೆ. ಪಂಡಿತ್ ನೆಹರೂ, ಕಮಲಾ ನೆಹರೂ ಅವರು ಕೂಡ ಸೆರೆ ವಾಸ ಅನುಭವಿಸಿದ್ದರು.

Narendra Modi government is destroying the entire country

ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು ಕೂಡ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಇಂದಿರಾ ಬ್ರಿಗೇಡ್ ಸ್ಥಾಪನೆ ಮಾಡಿ ಸೆರೆವಾಸ ಅನುಭವಿಸಿದ್ದರು. ಈ ಇತಿಹಾಸ ಅಜರಾಮರವಾಗಿ ಉಳಿಯುತ್ತದೆ. ಯಾರೂ ಅಳಿಸಿಹಾಕಲು ಸಾಧ್ಯವಿಲ್ಲ. ನೆಹರೂ ಅವರು ದಾರ್ಶನಿಕರಾಗಿದ್ದು, ಸುಂದರ ಭಾರತ ನಿರ್ಮಾಣದ ಚಿಂತನೆ ಮಾಡಿ ಪಂಚವಾರ್ಷಿಕ ಯೋಜನೆ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಯೋಜನೆ ರೂಪಿಸಿದರು.

ಮೂಡನಂಬಿಕೆ, ಅನಕ್ಷರತೆ, ಬಡತನ ನಿರ್ಮೂಲನೆ ಆಗಬೇಕಾದರೆ ಅದು ವಿಜ್ಞಾನದಿಂದ ಮಾತ್ರ ಸಾಧ್ಯ ಎಂಬ ಸಂದೇಶ ಕೊಟ್ಟರು. ನರೇಂದ್ರ ಮೋದಿ ಹಾಗೂ ಬಿಜೆಪಿ ದೇಶದಲ್ಲಿ ಅಂದಕಾರ, ಜಾತಿ, ಮತೀಯ ಕಂದಬಾಹುಗಳನ್ನು ಪಸರಿಸಿ ದೇಶ ನಾಶ ಮಾಡುತ್ತಿದ್ದಾರೆ. ಸಂಸ್ಕೃತಿ ಎಂಬುದು ನಮ್ಮ ಆಲೋಚನೆ ಮನೋಭಾವವನ್ನು ವಿಸ್ತಾರಗೊಳಿಸುವುದಾಗಿದೆ ಎಂದು ಹೇಳಿದ್ದರು. ಈಗ ಸಂಸ್ಕೃತಿಯ ಅರ್ಥವನ್ನೇ ಬದಲಿಸಲಾಗುತ್ತಿದೆ.

ರಾಜಕೀಯದ ಜತೆ ಧರ್ಮ ಸೇರಿಸುವುದು ಅಪ್ರಸ್ತುತ. ಆದರೆ ಭಾರತದಲ್ಲಿ ಇಂದು 800 ವರ್ಷಗಳ ಹಿಂದೆ ಹೋಗಿ ಧರ್ಮವೇ ಆಡಳಿತ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಮತದ ಹೆಸರಲ್ಲಿ ಕೈ ಎತ್ತಿದರೆ ನಾನು ನನ್ನ ಮರಣದ ತನಕ ಹೋರಾಟ ಮಾಡುತ್ತೇನೆ ಎಂದು ಪಣ ತೊಟ್ಟಿದ್ದರು. ಅಜ್ಞಾನ ಪರಿವರ್ತನೆಗೆ ಹೆದರುತ್ತದೆ.

Narendra Modi government is destroying the entire country

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗ ಸಾಕ್ಷರತೆ ಪ್ರಮಾಣ ಶೇ.14ರಷ್ಟಿತ್ತು. ಅದನ್ನು ಈಗ ಶೇ.76ರವರೆಗೆ ತಂದು ನಿಲ್ಲಿಸಲಾಗಿದೆ. ಮತ್ತೆ ದೇಶದ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳಿ ಬ್ರಿಟೀಷರಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಹೀಗೆ ನೆಹರೂ ಅವರ ತತ್ವ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ.

ಈ ದೇಶ ಕಟ್ಟಿ ಸ್ವಾತಂತ್ರ್ಯದ ಜ್ಯೋತಿ ಬೆಳಗಿಸಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋದ ಮಹತ್ಮಾ ಗಾಂಧಿ ಅವರು ಈ ದೇಶವನ್ನು ಮುನ್ನಡೆಸಲು ಏಕೈಕ ನಾಯಕ ನೆಹರೂ ಅವರು. ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಬಂದಾಗ ಇರಲಿಲ್ಲ. ಅವರು ನೆಹರೂ ಅವರಿಗೆ ನಿಕಟ ಸ್ನೇಹಿತರಾಗಿದ್ದರು. ಅದೇ ರೀತಿ ವಲ್ಲಭಾಯಿ ಪಟೇಲರು ಕೂಡ ನೆಹರೂ ಅವರು ಪ್ರಧಾನಿ ಆಗಬೇಕು ಎಂದು ಗಾಂಧಿ ಅವರಿಗೆ ಹೆಸರು ಪ್ರಸ್ತಾಪಿಸಿದರು. ಎಲ್ಲ ಪ್ರಾಂಥೀಯ ರಾಜ್ಯಗಳನ್ನು ಒಂದುಗೂಡಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಮಾತನಾಡಿ, ಪಂಡಿತ್ ನೆಹರೂ ಅವರು ಅಪರೂಪದ ಅದ್ಭುತ ರಾಜಕಾರಣಿ. ಬ್ರಿಟೀಷ್ರ ವಿರುದ್ಧ ಹೋರಾಟ ಮಾಡಿ 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ದೇಶದ ಸ್ವಾತಂತ್ರ್ಯ ಹೋರಾಟದ್ಲಿ ಪ್ರಮುಖ ಪಾತ್ರ ವಪೃಹಿಸಿದರು. ದೇಶವನ್ನು 16 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದೂರ ದೃಷ್ಟಿಯ ನಾಯಕರು ನೆಹರೂ ಅವರು. ಪಂಚವಾರ್ಷಿಕ ಯೋಜನೆಗಳ ಮಹಾನ್ ನಾಯಕರು ನೆಹರೂ ಅವರು. ಅವರು ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಇಸ್ರೋ, ಡಿಆರ್ ಡಿಒ ಸಂಸ್ಥೆ ಸ್ಥಾಪಿಸಿ ದೇಶ ನಿರ್ಮಾಣಕ್ಕೆ ಕಾರಣವಾದರು. ಅವರ ಆಡಳಿತದಲ್ಲಿ ಸಮಾಜದ ಎಲ್ಲ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸಿದರು.

ಯುವಕರು ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಬೇಕು. ಈಗ ನಮ್ಮ ನಿಮ್ಮ ಮೇಲೆ ಬಹಳ ದೊಡ್ಡ ಜವಬ್ದಾರಿ ಇದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೆಹರೂ ಅವರು ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಅವರ ಯೋಗ್ಯತೆಗೂ ನೆಹರೂ ಅವರ ಯೋಗ್ಯತೆ ತಿಳಿದು ಮಾತನಾಬೇಕು. ಅವರಿಗೆ ಇತಿಹಾಸ, ಹೋರಾಟ ಗೊತ್ತಿಲ್ಲ. ನೆಹರೂ ಬಗ್ಗೆ ಟೀಕೆ ಮಾಡುವ ಯೋಗ್ಯತೆ ನಿಮಗಿಲ್ಲ.

ರಾಜ್ಯದಲ್ಲಿ ನೆಹರೂ ಅವರು ಅನೇಕ ಸಂಸ್ಥೆ ಕಟ್ಟಿದ್ದಾರೆ. ಬಿಜೆಪಿ ಅವರು ಕಾಂಗ್ರೆಸ್ 70 ವರ್ಷ ಏನು ಮಾಡಿದೆ ಎಂದು ಕೇಳುತ್ತಾರೆ. ದೇಶದ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್ ಪಕ್ಷದಿಂದ.

ಇಂದು ದೇಶದಲ್ಲಿ ಕರ್ನಾಟಕ ರಾಜ್ಯದ ಬಗ್ಗೆ 40% ಸರ್ಕಾರ ಎಂದು ಮಾತನಾಡುತ್ತಾರೆ. ನೆಹರೂ ಅವರು ಹರಗರಣ ಮುಕ್ತ ಆಡಳಿತ ನೀಡಿದ್ದರು. ಆದರೆ ಇಂದು ಮೋದಿ ಅವರ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟವಾಗಿದೆ. ಅಭಿವೃದ್ಧಿ ಇಲ್ಲ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದಾರೆ.

ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಜನ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ಅಧಿಕಾರ, ಹುದ್ದೆಯ ಆಸೆ ಇಲ್ಲದೆ ದೇಶದುದ್ದ 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದೇಶ ಒಡೆಯುವ ಕೆಲಸ ಮಾಡಿದರೆ, ರಾಹುಲ್ ಗಾಂಧಿ ಅವರು ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ಸರ್ವಜನಾಂಗದ ಶಾಂತಿಯ ತೋಟವಾಗಿ ರಾಜ್ಯದಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಲು ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಶ್ರಮಿಸುತ್ತಿದ್ದಾರೆ. ಆಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ರಾಜ್ಯದಲ್ಲಿ 511 ಕಿ.ಮೀ ಪಾದಯಾತ್ರೆ ಮಾಡಿ ಸಂದೇಶ ರವಾನಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿದಂ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಸಂತೋಷ ಪಾಟೀಲ್ ಸತ್ತಿದ್ದಾರೆ, ಹುಬ್ಬಳ್ಳಿ ಗುತ್ತಿಗೆದಾರ ದಯಾ ಮರಣಕ್ಕೆ ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ರಾಜ್ಯದಲ್ಲಿ ಯಾವಾಗಲೇ ಚುನಾವಣೆ ನಡೆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ನೆಹರೂ ಅವರ ಮಾರ್ಗದರ್ಶನದಂತೆ ಕಕೆಲಸ ಮಾಡೋಣ.

English summary
Modi government is destroying the entire country says Veerappa Moily,Bad ideas will destroy the whole system,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X