ಚುನಾವಣೆ ಹೊತ್ತಲ್ಲಿ ನಂದಿನಿ-ಅಮೂಲ್ ವಿವಾದ: ಏನಿದು?, ಪ್ರಮುಖ ಅಂಶಗಳು ನಿಮ್ಮ ಮುಂದೆ
ಬೆಂಗಳೂರು, ಏಪ್ರಿಲ್ 11: ಗುಜರಾತ್ ಮೂಲದ ಅಮೂಲ್ ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸಿದರೆ ಇತ್ತ ಚುನಾವಣಾ ಹೊತ್ತಲ್ಲಿ ಅಮುಲ್-ನಂದಿನ ಕಾವು ಸಹ ಏರಿಕೆ ಆಗಿದೆ. ಇದು ಅನೇಕ ರಾಜಕೀಯ ಸದ್ದು ಗದ್ದಲಗಳಿಗೆ ಕಾರಣವಾಗಿದೆ.
ಕರ್ನಾಟಕದ ರಾಜ್ಯದ ಹೈನುಗಾರಿಕೆ ವಿಚಾರಕ್ಕೆ ಬರುವುದಾದರೆ ನಂದಿನಿ ಹಾಲಿನ ಬ್ರಾಂಡ್ ಅಮುಲ್‌ಗಿಂತಲೂ ಉತ್ತಮ ಬ್ರಾಂಡ್ ಆಗಿದೆ. ಹೀಗಾಗಿ ರಾಜ್ಯಕ್ಕಾಗಲಿ, ಬೆಂಗಳೂರಿಗಾಗಿ ಅಮುಲ್ ಹಾಲಿನ ಅಗತ್ಯತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ನಂದಿನಿ ಹಾಲು ಹಾಗೂ ನಮ್ಮ ರೈತರನ್ನು ರಕ್ಷಿಸಲು ಸಿದ್ಧವಿದೆ. ರಾಜ್ಯದಲ್ಲಿ ಈಗಾಗಲೇ ಅಮುಲ್ ಗಿಂತ ಉತ್ತಮವಾದ ನಂದಿನಿ ಬ್ರಾಂಡ್ ಹಾಲು ಪೂರೈಕೆ ಇದೆ. ಹೀಗಾಗಿ ಕನ್ನಡಿಗರಿಗೆ ಯಾವುದೇ ಅಮುಲ್ ಅಗತ್ಯವಿಲ್ಲ. ನಮ್ಮ ನೀರು, ನಮ್ಮ ಹಾಲು ಮತ್ತು ನಮ್ಮ ಮಣ್ಣು ಬಲವಾಗಿದೆ ಎಂದು ಡಿಕೆ ಶಿವಕುಮಾರ್ ಹೆಮ್ಮ ವ್ಯಕ್ತಪಡಿಸಿದರು.
ಕರ್ನಾಟಕ ರಾಹ್ಯದ ಹಾಲು ಉತ್ಪಾದಕರಿಗೆ ಬೃಹತ್ ಬೆಂಗಳೂರು ಹೊಟೇಲುಗಳ ಸಂಘ (BBHA) ಅಮುಲ್ ಉತ್ಪನ್ನಗಳನ್ನು ರಾಜ್ಯದ ನಂದಿನಿಗೆ ಬೆಂಬಲಕ್ಕೆ ನಿಂತಿದೆ. ಅಮುಲ್ ಬ್ರಾಂಡ್ ಹಾಲು ಬಹಿಷ್ಕರಿಸಲು ಕರ್ನಾಟಕ ಹಾಲು ಒಕ್ಕೂಟದ ( KMF) ನಂದಿನಿ ಡೈರಿ ಉತ್ಪನ್ನಗಳ ಬಳಸಲು ನಿರ್ಧರಿಸಿದೆ. ಬೆಂಗಳೂರು ಮಾರುಕಟ್ಟೆ ಅಮುಲ್ ವಿಚಾರದ ನಂತರ ನಡೆದ ಉತ್ತರ ಬೆಳವಣಿಗೆ ಪೈಕಿ ಇದು ಸಹ ಒಂದಾಗಿದೆ.
ಗುಜರಾತ್ ಮೂಲದ ಅಮುಲ್ ಬ್ರಾಂಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 54 ರೂಪಾಯಿ. ಅದೇ ಕರ್ನಾಟಕದ ನಂದಿನಿ ಹಾಲಿನ 43 ರೂಪಾಯಿ. ಹೋಟೆಲ್‌ನವರು ನಂದಿನಿಯನ್ನು ಬೆಂಬಲಿಸುತ್ತಿರುವುದು 11 ರೂ. ಉಳಿಯುತ್ತದೆ ಎಂಬ ಕಾರಣವಲ್ಲದೇ, ಅದು ಕರ್ನಾಟಕದ್ದು, ನಮ್ಮ ನೆಲ್ಲದ್ದು ಎಂಬ ಕಾರಣಕ್ಕಾಗಿ ಅವರು ಅಮೂಲ್ ಬೈಕಾಟ್ ಮಾಡಿದ್ದಾರೆ.
ನಂದಿನಿ ಬ್ರಾಂಡ್ ವರ್ಸಸ್ ಅಮುಲ್ ಈ ಎರಡು ಬ್ರಾಂಡ್‌ಗಳ ನಡುವಿನ ರಾಜಕೀಯ ಗಲಾಟೆ ಮಧ್ಯೆ ಸೋಮವಾರ ಕನ್ನಡ ಪರ ಸಂಘಟನೆಯ ಸದಸ್ಯರು ಗುಜರಾತ್ ಮೂಲದ ಡೈರಿ ಸಹಕಾರಿ ಸಂಘದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸ್ ಪ್ರತಿಭಟನೆಗೆ ಅಂತ್ಯ ಹಾಡಿದರು. ಈ ನಂದಿನಿ-ಅಮೂಲ್ ವಿವಾದದ ಕುರಿತಾದ ಮುಖ್ಯ ಅಂಶಗಳು ಇಲ್ಲಿವೆ.

ನಂದಿನಿ-ಅಮೂಲ್ ವಿವಾದ ಏನಿದು?: ಮುಖ್ಯ ಅಂಶಗಳು
* ಕರ್ನಾಟಕದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜನತಾ ದಳ (ಜಾತ್ಯತೀತ) ಮಧ್ಯೆ ಕೆಲವು ದಿನಗಳ ಹಿಂದಷ್ಟೇ ವಾಗ್ಯುದ್ಧ ಆರಂಭವಾಗಿದೆ.
* ಗುಜರಾತ್ ಮೂಲದ್ದಾಗಿರುವ ಅಮುಲ್ ಕರ್ನಾಟಕದ ಬೆಂಗಳೂರಿನಲ್ಲಿ ತ್ವರಿತ ವಾಣಿಜ್ಯ ವೇದಿಕೆಗಳ ಮೂಲಕ ಅಮುಲ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡುವ ಯೋಜನೆ ಪ್ರಕಟಿಸಿದೆ. ಇದರಿಂದ ಅಮುಲ್ ಉತ್ಪನ್ನ ಮನೆಗೆ ಬಂದು ತಲುಪಲಿದೆ ಎನ್ನಲಾಗಿದೆ.
* ಅಮುಲ್ ಯೋಜನೆಯು ನಂದಿನಿ ಬ್ರಾಂಡ್ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಟೀಕಿಸಿದೆ.
* ನಮ್ಮ ವಿಜಯಾ ಬ್ಯಾಂಕ್‌ಗೆ ಗುಜರಾತಿನ ಬರೋಡಾ ಬ್ಯಾಂಕ್, ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಗುಜರಾತ್‌ನ ಅದಾನಿಗೆ ಹಸ್ತಾಂತರಿಸಿತ್ತು. ಈಗ ಗುಜರಾತ್‌ನ ಅಮುಲ್ ಮೂಲಕ ಕರ್ನಾಟಕದ ಕೆಎಂಎಫ್ (ನಂದಿನಿ) ಅಂತ್ಯಕ್ಕೆ ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
* ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ, ಅಮುಲ್ ಮತ್ತು ಕೆಎಂಎಫ್ ವಿಲೀನವಾಗುತ್ತಿಲ್ಲ ಅಥವಾ ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
* ಕೆಎಂಎಫ್ ರಾಷ್ಟ್ರದ ಎರಡನೇ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಆಗಿದೆ. ಈ ಕೆಎಂಎಫ್ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಡಿಪೋಗಳನ್ನು ಹೊಂದಿದೆ. ಅಮುಲ್ ಕರ್ನಾಟಕದಲ್ಲಿ ಕೆಎಂಎಫ್ ನ ಒಟ್ಟು ಮಾರಾಟದ ಶೇಕಡಾ 15ರಷ್ಟು ಹೊರಗಿದೆ. ನಂದಿನಿಯನ್ನು ಸಿಂಗಾಪುರ, UAE ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮುಲ್ ಮತ್ತು ಕೆಎಂಎಫ್ ವಿಲೀನಗೊಳ್ಳುತ್ತಿಲ್ಲ ಎಂದು ಅಮಿತ್ ಮಾಳವಿಯಾ ಹೇಳಿದ್ದರು.
* ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
* ಸೋಮವಾರವಷ್ಟೇ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಹಾಸನದ ನಂದಿನಿ ಮಿಲ್ಕ್ ಪಾರ್ಲರ್‌ಗೆ ಭೇಟಿ ನೀಡಿ ಅದರ ಕೆಲವು ಉತ್ಪನ್ನಗಳನ್ನು ಖರೀದಿಸಿದರು. ಈ ಮೂಲಕ ಕೆಎಂಎಪ್‌ಗೆ ಕಾಂಗ್ರೆಸ್ ಬೆಂಬಲವನ್ನು ತೋರ್ಪಡಿಸಲಾಯಿತು.
* ಬೇಸಿಗೆ ಪ್ರಾರಂಭವಾದ ಕಾರಣ ರಾಜ್ಯದಲ್ಲಿ ಹಾಲು ಉತ್ಪಾದನೆ ತುಸು ಕಡಿಮೆಯಾಗಿದೆ ಎಂದು ಕೆಎಂಎಫ್‌ನ ಭಾಗವಾದ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ತಿಳಿಸಿದೆ.
* ಕರ್ನಾಟಕದಲ್ಲಿ ಅಮುಲ್‌ಗೆ ಒಲವು ತೋರಿಸುವ ಉದ್ದೇಶದಿಂದ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (ಕೆಎಸ್‌ಎಚ್‌ಎ) ಆರೋಪಿಸಿದೆ.
* ಕರ್ನಾಟಕದಲ್ಲಿ ಹಾಲಿನ ಉತ್ಪಾದನೆಯು ದಿನಕ್ಕೆ ಸುಮಾರು 90 ಲಕ್ಷ ಲೀಟರ್‌ಗಳಿಂದ ದಿನಕ್ಕೆ ಸುಮಾರು 75 ಲಕ್ಷ ಲೀಟರ್‌ಗೆ ಇಳಿಕೆ ಆಗಿದೆ. ಹೀಗಾಗಿ ಕೆಲವರು ಕೊರತೆ ಅನ್ನುತ್ತಿದ್ದಾರೆ ಎಂದು ಬಮುಲ್‌ನ ನಿರ್ದೇಶಕ ಪಿ ನಾಗರಾಜು ತಿಳಿಸಿದ್ದಾರೆ.
* ವಿವಿಧ ರಾಜ್ಯಗಳ ಶಾಲಾ ಮಕ್ಕಳಿಗೆ ನಂದಿನಿ ಪೂರೈಕೆ ಆಗುತ್ತಿದೆ. ನಿತ್ಯ ಮುಂಬೈಗೆ 2.5 ಲಕ್ಷ ಲೀಟರ್, ಹೈದರಾಬಾದ್‌ಗೆ 1.5 ಲಕ್ಷ ಲೀಟರ್ ಮತ್ತು ಆಂಧ್ರಪ್ರದೇಶಕ್ಕೆ ಮತ್ತೊಂದು ಬ್ಯಾಚ್ ಹಾಲನ್ನು ಕಳುಹಿಸಲಾಗುತ್ತದೆ ಎಂದು ಬಮೂಲ್ ಹೇಳಿದೆ.












Click it and Unblock the Notifications