ಹಾಲಿಗೆ ಒಂದು ನ್ಯಾಯ.. ಎಣ್ಣೆಗೆ ಮಹಾ ಮೋಸ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಡುಕರ ಆಕ್ರೋಶ!
ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ಆಗಿದೆ ಅಂತಾ ಒಂದು ಕಡೆ ಜನ & ವಿರೋಧ ಪಕ್ಷದ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ನಾವು ಬೆಲೆ ಹೆಚ್ಚಿಗೆ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಸರ್ಕಾರ ವಾದ ಮಾಡುತ್ತಿದೆ. ಹೀಗಿದ್ದಾಗಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಡುಕರು ಗರಂ ಆಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕುಡುಕರು ಕೋಪಗೊಂಡಿದ್ದು ಯಾಕೆ? ಬನ್ನಿ ತಿಳಿಯೋಣ.
ನಂದಿನಿ ಹಾಲಿನ ಪ್ಯಾಕೆಟ್ 1,000 ಮಿ.ಲೀಗೆ 42 ರೂಪಾಯಿ ಇತ್ತು, 500 ಮಿಲಿ ಲೀಟರ್ ಹಾಲಿಗೆ 22 ರೂಪಾಯಿ ಬೆಲೆ ಇತ್ತು. ಆದರೆ ಇದೀಗ 1 ಲೀಟರ್ ಬದಲು 1,050 ಮಿಲಿ ಲೀಟರ್ ಮತ್ತು 500 ಎಂಎಲ್ ಬದಲು 550 ಮಿಲಿ ಲೀಟರ್ ಪ್ಯಾಕೆಟ್ ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ. ಹೀಗಾಗಿ ನಂದಿನಿ ಹಾಲಿನ 1,050 ಮಿಲಿ ಲೀಟರ್ ಪ್ಯಾಕೆಟ್‌ಗೆ 44 ರೂಪಾಯಿ & 550 ಮಿಲಿ ಲೀಟರ್ ಪ್ಯಾಕೆಟ್‌ಗೆ 24 ರೂಪಾಯಿ ಫಿಕ್ಸ್ ಮಾಡಲಾಗಿದೆ. ಇದೇ ಹಿನ್ನೆಲೆ ಬೆಂಕಿ ಹೊತ್ತಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ಕುಡುಕರು ಕೂಡ ಸಿದ್ದರಾಮಯ್ಯ ಅವರ ಸರ್ಕಾರದ ಎದುರು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ!

ಕುಡುಕರಿಗೆ ಸರ್ಕಾರದ ಮೋಸ?
ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಹಾಲಿನ ದರ ಏರಿಸಿ ಹೆಚ್ಚಿಗೆ ಹಾಲು ನೀಡ್ತಿದೆ, ಆದರೆ ಎಣ್ಣೆ ಅಂದ್ರೆ ಬೀರು, ಬ್ರಾಂದಿ, ವಿಸ್ಕಿ, ರಮ್ ರೇಟ್ ರೈಸ್ ಮಾಡಿ ಕೂಡ ಯಾಕೆ ಕ್ವಾಂಟಿಟಿ ಜಾಸ್ತಿ ಕೊಡ್ತಿಲ್ಲ? ಎಣ್ಣೆಯ ರೇಟ್ ಮಾತ್ರ ಜಾಸ್ತಿ ಮಾಡುತ್ತಿರುವ ಸರ್ಕಾರಕ್ಕೆ ಕುಡುಕರ ಕಷ್ಟ ಅರ್ಥ ಆಗ್ತಿಲ್ವಾ? ಪದೇ ಪದೇ ಕುಡುಕರಿಗೆ ಮಾತ್ರ ಹೀಗೆ ಮೋಸ ಮಾಡ್ತಾರೆ ಯಾಕೆ? ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ ಕುಡುಕರು.
ಅಲ್ಲದೆ ಎಣ್ಣೆ ಬೆಲೆ ಏರಿಕೆ ಮಾಡಿರುವ ರೀತಿಯಲ್ಲೇ ಎಣ್ಣೆ ಹೆಚ್ಚಿಗೆ ಕೊಡಿ ಅಂತಿದ್ದಾರೆ. ಅಕಸ್ಮಾತ್ ಇದೇ ರೀತಿ ಎಣ್ಣೆ ಬೆಲೆ ಏರಿಕೆ ಮಾಡುವುದು, ಹಾಲಿಗೆ ಒಂದು ನ್ಯಾಯ & ಎಣ್ಣೆಗೆ ಒಂದು ಅನ್ಯಾಯ ಮಾಡುವುದು ಮಾಡಿದ್ರೆ ಹೋರಾಟ ಮಾಡ್ತೀವಿ ಅಂತಾನೂ ಈಗ ಕುಡುಕರು ಸ್ಟೇಟಸ್ ಹಾಕುತ್ತಿದ್ದಾರೆ. ಆದರೆ ಕುಡುಕರ ಬೇಡಿಕೆ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಏನ್ ಹೇಳುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.
ರೊಚ್ಚಿಗೆದ್ದ ವಿರೋಧ ಪಕ್ಷಗಳು!
ಸಿದ್ದರಾಮಯ್ಯ ಅವರ ಸರ್ಕಾರ ಹಾಲಿನ ರೇಟ್ ಜಾಸ್ತಿ ಮಾಡಿದೆ ಅಂತಾ ವಿಪಕ್ಷಗಳಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದ ನಂತರ, ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಹೀಗೆಲ್ಲಾ ಮಾಡ್ತಿದ್ದಾರೆ. ಇದೆಲ್ಲಾ ಸರಿ ಇರಲ್ಲ ಎಂದು, ವಿರೋಧ ಪಕ್ಷಗಳ ನಾಯಕರು ವಾರ್ನಿಂಗ್ ಕೊಡುತ್ತಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಸಮೇತ, ಇಡೀ ಕರ್ನಾಟಕ ಸರ್ಕಾರವೇ ಈಗ ಹಾಲಿನ ದರ ಏರಿಕೆ ಆಗಿಲ್ಲ ಎಂದು ವಾದ ಮಾಡುತ್ತಾ ಸ್ಪಷ್ಟನೆ ನೀಡುತ್ತಿದೆ.












Click it and Unblock the Notifications