Namma metro disruption: ನೇರಳೆ ಮಾರ್ಗದಲ್ಲಿ 3ದಿನ ಬೆಳಗ್ಗೆ ಮೆಟ್ರೋ ಸೇವೆ ಸ್ಥಗಿತ, ಸಮಯ ತಿಳಿಯಿರಿ
ಬೆಂಗಳೂರು, ಆಗಸ್ಟ್ 09: ಬೆಂಗಳೂರು ನಮ್ಮ ಮೆಟ್ರೋದ ವಿವಿಧ ಮಾರ್ಗಗಳಲ್ಲಿ ಸಿಗ್ನಲಿಂಗ್, ಇನ್ನಿತರ ಕಾಮಗಾರಿಗಳು ನಡೆಯುತ್ತಿವೆ. ಈ ಸಂಬಂಧ ಮುಂದಿನ ಮೂರು ದಿನ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯವಾಗಲಿದೆ. ಬೆಳಗ್ಗೆ ಮೆಟ್ರೋ ರೈಲು ಓಡಾಟ, ಸಮಯದಲ್ಲಿ ಬದಲಾವಣೆಗಳು ಆಗಿದ್ದರ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮಾಹಿತಿ ನೀಡಿದೆ.
ಬೆಂಗಳೂರು ನಮ್ಮ ಮೆಟ್ರೋ ಕೆಂಗೇರಿಯಿಂದ ಬೈಯಪ್ಪನಹಳ್ಳಿವರೆಗಿನ ನೇರಳೆ ಮಾರ್ಗದಲ್ಲಿ ನಾಳೆ ಅಂದರೆ ಆಗಸ್ಟ್ 10, 11 ಹಾಗೂ ಆಗಸ್ಟ್ 14ರಂದು ಮೂರು ದಿನ ಬೆಳಗ್ಗೆ ರೈಲು ಸಂಚಾರ ಸೇವೆಯಲ್ಲಿ ಬದಲಾವಣೆ ಆಗಿದೆ.

ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದ ದವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಮೆಟ್ರೋ ನಿಗಮವು ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳವರೆಗೆ ಆಗಸ್ಟ್ 9ರಂದು ಬೆಳಗ್ಗೆ 5ರಿಂದ 7 ಗಂಟೆವೆರೆಗೆ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು.
ಸದರಿ ಕಾಮಗಾರಿ ಮತ್ತೆ ಆರಂಭಿಸುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಆಗಸ್ಟ್ 10 ಮತ್ತು 11ರಂದು ಬೆಳಗ್ಗೆ 5 ಗಂಟೆಯಿಂದ ರಿಂದ 7 ಗಂಟೆವೆರೆಗೆ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಇದೇ ಅವಧಿಯಲ್ಲಿ ಬೆಳ್ಳಗೆ 5 ಗಂಟೆಯಿಂದ 7 ಗಂಟೆಯವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ (ನೇರಳೆ ಮಾರ್ಗ) ಮೆಟ್ರೋ ರೈಲುಗಳ ಸೇವೆಗಳು ಲಭ್ಯವಿರುತ್ತದೆ ಎಂದು ನಿಗಮ ತಿಳಿಸಿದೆ.

ಆಗಸ್ಟ್ 14ರಂದು ವಿಜಯನಗರ-ಕೆಂಗೇರಿ ಸೇವೆ ವ್ಯತ್ಯಯ
ಇನ್ನೂ ಕೆಂಗೇರಿ ನಿಲ್ದಾಣದಿಂದ ಚಲ್ಲಘಟ್ಟ ನಿಲ್ದಾಣದವರೆಗೆ ರೈಲು ಸೇವೆಯನ್ನು ವಿಸ್ತರಿಸಲು ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಆಗಸ್ಟ್ 14 ರಂದು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಕೆಂಗೇರಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಸ್ಥಗಿತಗೊಳ್ಳಲಿದೆ. ಇದೇ ಅವಧಿಯಲ್ಲಿ ವಿಜಯನಗರದಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಸೇವೆ ಇರಲಿದೆ.
ಇನ್ನು ಈ ಮೂರು ದಿನಗಳಲ್ಲಿ ಬೆಳಗ್ಗೆ 7 ಗಂಟೆ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಕೆಆರ್ ಪುರಂ ನಿಂದ ವೈಟ್ ಫೀಲ್ (ಕಾಡುಗೋಡಿ) ಮೆಟ್ರೋ ನಿಲ್ಯಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ಸೇವೆಗಳು ರಾತ್ರಿ 11 ಗಂಟೆವರೆಗೆ ಲಭ್ಯವಿರುತ್ತದೆ.
ಇನ್ನುಳಿದಂತೆ ಹಸಿರು ಲೈನ್‌ನ ಮೆಟ್ರೋ ರೈಲು ಸೇವೆಯಲ್ಲಿ, ಸಮಯದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಇಲ್ಲಿ ಎಂದಿನಂತೆ ಪ್ರಯಾಣಿಕರು ಸಂಚರಿಸಬಹುದಾಗಿದೆ.












Click it and Unblock the Notifications