Namma Metro: ಹೆಬ್ಬಾಳ- ಸರ್ಜಾಪುರ ಮೆಟ್ರೋ ಮಾರ್ಗಕ್ಕೆ ರೆಡಿಯಾಯ್ತು ರೂಪುರೇಷೆ- ಮಾಹಿತಿ, ವಿವರ

ಬೆಂಗಳೂರು, ಫೆಬ್ರವರಿ 13: ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮೆಟ್ರೋ ಮಾರ್ಗವು ಸಿದ್ದಗೊಳ್ಳುತ್ತಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್)ಯೊಂದಿಗೆ ನಮ್ಮ ಮೆಟ್ರೊ ಸಂಪರ್ಕಕ್ಕೆ ರೂಪುರೇಷೆ ಸಿಕ್ಕಿದೆ.

ಈ ಮಾರ್ಗದ ಭೂಸ್ವಾಧೀನ ಶುಲ್ಕ ಸೇರಿದಂತೆ 16,543 ಕೋಟಿ ರೂಪಾಯಿ ವೆಚ್ಚದ ಅಂದಾಜು 37 ಕಿಮೀ ಮಾರ್ಗವನ್ನು ಈ ಹಿಂದೆ ಸಮಗ್ರ ಚಲನಶೀಲ ಯೋಜನೆ-2020 ರಲ್ಲಿ ಉಲ್ಲೇಖಿಸಲಾಗಿತ್ತು. ಟೆಕ್ ಝೋನ್‌ಗಳಿಗೆ ಮತ್ತು ಅಲ್ಲಿಂದ ಪ್ರಯಾಣಿಸುವವರಿಗೆ ಇದು ಸಹಾಯವನ್ನು ಒದಗಿಸುವ ನಿರೀಕ್ಷೆಯಿದೆ.

Namma Metro : DPR Ready For Sarjapur-Hebbal Line

ವಿಸ್ತೃತ ಯೋಜನಾ ವರದಿಯ ಕರಡು ಪ್ರಕಾರ ಸರ್ಜಾಪುರದ ಐಟಿ ಕಾರಿಡಾರ್ ಸಮೀಪದಿಂದ ಜಕ್ಕಸಂದ್ರವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ. ನಂತರ ಕೋರಮಂಗಲದಲ್ಲಿ ಭೂಗತ ಮಾರ್ಗವಾಗಿ ಪರಿವರ್ತನೆಗೊಳ್ಳಲಿದ್ದು, ಅಲ್ಲಿಂದ ಸುರಂಗ ಮಾರ್ಗದ ಮೂಲಕ ನಗರದಲ್ಲಿ ಹಾದು ಹೋಗಲಿದೆ. ಬಳ್ಳಾರಿ ಮಾರ್ಗದಲ್ಲಿ ಗಂಗಾನಗರದಿಂದ ಹೆಬ್ಬಾಳದವರೆಗೆ ಮತ್ತೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ.

ಸರ್ಜಾಪುರ-ಹೆಬ್ಬಾಳ ಮಾರ್ಗವು ಈಗಾಗಲೇ ಚಾಲನೆಯಲ್ಲಿರುವ ಮೆಟ್ರೊ ನೇರಳೆ ಮಾರ್ಗ ಮತ್ತು ಕಾಮಗಾರಿ ನಡೆಯುತ್ತಿರುವ ನೀಲಿ, ಗುಲಾಬಿ ಮಾರ್ಗಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಸುಲಭವಾಗಲಿದೆ. ಇಬ್ಬಲೂರು ಬಳಿ ಸಿಲ್ಕ್‌ ಬೋರ್ಡ್‌- ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಮಾರ್ಗವನ್ನು ಸಂಪರ್ಕಿಸಲಿದೆ.

ಡೇರಿ ಸರ್ಕಲ್‌ನಲ್ಲಿ ಕಾಳೇನ ಅಗ್ರಹಾರ-ನಾಗವಾರ ನಡುವೆ ನಿರ್ಮಾಣಗೊಳ್ಳುತ್ತಿರುವ ಗುಲಾಬಿ ಮಾರ್ಗವನ್ನು ಕೂಡಿ ಕೊಳ್ಳಲಿದೆ. ಚಲ್ಲಘಟ್ಟ-ವೈಟ್‌ಫೀಲ್ಡ್‌ ನಡುವಿನ ನೇರಳೆ ಮಾರ್ಗವನ್ನು ಕೆ.ಆರ್. ಸರ್ಕಲ್‌ ಬಳಿ (ಸರ್‌.ಎಂ. ವಿಶ್ವೇಶ್ವರಯ್ಯ ನಿಲ್ದಾಣ) ಸಂಪರ್ಕಿಸಲಿದೆ. ಇದು ಜನರು ಬನ್ನೇರುಘಟ್ಟ ರಸ್ತೆ ಅಥವಾ ಎಂಜಿ ರಸ್ತೆ ಕಡೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಕೆಆರ್ ಸರ್ಕಲ್ ಮೆಟ್ರೋ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಕೊಂಡಿಯಾಗಿರುವುದು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಅಪಾರ ಸಂಖ್ಯೆಯ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

ಈ ಹೊಸ ಮಾರ್ಗವು ಪ್ರಮುಖ ಭಾಗಗಳಲ್ಲಿ ಹಾದು ಹೋಗುವ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗುವುದು ಎಂದು ಅಭಿಪ್ರಾಯಿಸಿದ್ದಾರೆ. ಹೆಬ್ಬಾಳದಲ್ಲಿ ಉಪನಗರ ರೈಲು ಯೋಜನೆ ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ಮಾರ್ಗವನ್ನು ಸಂಪರ್ಕಿಸುತ್ತದೆ. ಈ ರೀತಿ ನಗರದ ಮೆಟ್ರೋ ಸಂಪರ್ಕ ಜಾಲವನ್ನು ಕೊಂಡಿಯಾಗುವ ವಿಶಿಷ್ಟ ಯೋಜನೆ ಇದಾಗಿದ್ದರೆ, ಜನದಟ್ಟಣೆ ಕಡಿಮೆ ಮಾಡಲು ಮಹತ್ವದ ಪಾತ್ರ ವಹಿಸಲಿದೆ.

ಬಳ್ಳಾರಿ ರಸ್ತೆಯಲ್ಲಿ 7 ನಿಲ್ದಾಣಗಳು

ಈ ಹಿಂದೆ, ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ 8 ಕಿ.ಮೀ ಉದ್ದದ ಬಳ್ಳಾರಿ ರಸ್ತೆಯ ದಟ್ಟಣೆಯನ್ನು ನಿವಾರಿಸಲು ಸತತ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಪ್ರಸ್ತಾಪಿಸಿದವು. ಪ್ರಸ್ತಾವಿತ ಯೋಜನೆಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್ ರೈಲು ಸಂಪರ್ಕ, ಸ್ಟೀಲ್ ಬ್ರಿಡ್ಜ್ ಯೋಜನೆ ಮತ್ತು ಅಸ್ತಿತ್ವದಲ್ಲಿರುವ ರಸ್ತೆಗಳ ಅಗಲೀಕರಣ ಸೇರಿವೆ. ಮೊದಲೆರಡು ಯೋಜನೆಗಳು ಬೇರೆ ಬೇರೆ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದರೆ, ಅರಮನೆ ಮೈದಾನದ ಬಳಿ ಬಳ್ಳಾರಿ ರಸ್ತೆಯ ಒಂದು ಭಾಗವನ್ನು ಮಾತ್ರ ವಿಸ್ತರಿಸಲಾಯಿತು. "ಆದರೆ ಈ ಸರ್ಜಾಪುರ-ಹೆಬ್ಬಾಳ ಮಾರ್ಗವು ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಬಸವೇಶ್ವರ ವೃತ್ತ, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೆಹಕ್ರಿ ವೃತ್ತ, ಪಶುವೈದ್ಯಕೀಯ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+